ಸರಿಯಾದ ಟ್ರಾವೆಲ್ ಕವರ್‌ನೊಂದಿಗೆ ನಿಮ್ಮ ಶ್ರೀಲಂಕಾ ಪ್ರಯಾಣವನ್ನು ಸುರಕ್ಷಿತಗೊಳಿಸಿ
ವಿದೇಶಕ್ಕೆ ಪ್ರಯಾಣಿಸುವುದೆಂದರೆ ಹೊಸ ಅನುಭವಗಳನ್ನು ಪಡೆದುಕೊಳ್ಳುವುದು ಮತ್ತು ಸಾಹಸಗಳನ್ನು ಮಾಡುವುದು ಎಂದರ್ಥ. ಶ್ರೀಲಂಕಾ ಟ್ರಿಪ್ ನಿಮ್ಮನ್ನು ಆ ದೇಶ ಮತ್ತು ಅಲ್ಲಿನ ಅದ್ಭುತ ಸೌಂದರ್ಯಕ್ಕೆ ಮನಸೋಲುವಂತೆ ಮಾಡುತ್ತದೆ. ಗ್ಲೋಬ್‌ನಲ್ಲಿ ನೈಸರ್ಗಿಕವಾಗಿಯೇ ಹನಿಯ ಆಕಾರದಲ್ಲಿರುವ ಈ ದ್ವೀಪ ರಾಷ್ಟ್ರವು, ರಮಣೀಯ ಬುದ್ಧನ ದೇವಾಲಯಗಳು, ಪ್ರಶಾಂತ ಕಡಲತೀರಗಳು, ಸುಂದರ ಪ್ರಕೃತಿ ದೃಶ್ಯಗಳು, ಹಚ್ಚ ಹಸಿರಿನ ಚಹಾ ತೋಟಗಳು ಮತ್ತು ಅಪರೂಪದ ವನ್ಯಜೀವಿಗಳನ್ನು ಒಳಗೊಂಡಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ.
ನೀವು ಆರಾಮದಾಯಕ ರಜಾದಿನಗಳಿಗಾಗಿ ಪ್ಲಾನ್ ಮಾಡುತ್ತಿದ್ದರೆ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಅನಗತ್ಯ ವೆಚ್ಚಗಳಿಂದ ನಿಮ್ಮ ಬಜೆಟ್ ಅನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾದ ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ. ಇದು ಆಸ್ಪತ್ರೆಗೆ ದಾಖಲಾಗುವಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಂದ ಉಂಟಾಗುವ ವೆಚ್ಚಗಳನ್ನು ಹಾಗೂ ಟ್ರಿಪ್ ವಿಳಂಬ, ಚೆಕ್-ಇನ್ ಮಾಡಲಾದ ಲಗೇಜ್ ತಡವಾಗಿ ತಲುಪುವುದು ಮುಂತಾದ ವೈದ್ಯಕೀಯೇತರ ಅಗತ್ಯಗಳಿಗೆ ಕವರೇಜ್ ಅನ್ನು ಒದಗಿಸುತ್ತದೆ.
ಶ್ರೀಲಂಕಾಗೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವೇ?
ಇಲ್ಲ, ಶ್ರೀಲಂಕಾಗೆ ಭೇಟಿ ನೀಡುವಾಗ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವ ಅಗತ್ಯವಿಲ್ಲ. ಹೊಣೆಗಾರಿಕೆಯ ಹೊರತಾಗಿ, ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿದೆ. ಅಲ್ಲಿನ ವೈದ್ಯಕೀಯ ಚಿಕಿತ್ಸೆಯು ಅತ್ಯಂತ ದುಬಾರಿಯಾಗಿರಬಹುದು, ಆದ್ದರಿಂದ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಎದುರಾದಾಗ ಆರ್ಥಿಕ ರಕ್ಷಣೆಯನ್ನು ಪಡೆಯಲು ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಅತ್ಯಗತ್ಯ. ನಿಮ್ಮ ಟ್ರಾವೆಲ್ ಪಾಲಿಸಿಯು ವೈದ್ಯಕೀಯೇತರ ಸಂದರ್ಭಗಳಾದ ಟ್ರಿಪ್ ವಿಳಂಬ, ಟ್ರಿಪ್ ರದ್ದತಿ, ಲಗೇಜ್ ಕಳೆದುಹೋಗುವುದು ಹಾಗೂ ಪಾಸ್‌ಪೋರ್ಟ್ ಕಳೆದುಕೊಳ್ಳುವುದು ಮುಂತಾದವುಗಳಿಗೆ ನಿರ್ದಿಷ್ಟ ಕವರೇಜ್ ಅನ್ನು ಒದಗಿಸುತ್ತದೆ.
ಅಲ್ಲದೆ, ನೀವು ಹೆಚ್ಚಿನ ಅಧ್ಯಯನಗಳಿಗಾಗಿ ಪ್ರಯಾಣಿಸುತ್ತಿದ್ದರೆ, ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಸಂಕಷ್ಟದ ಸಮಯದಲ್ಲಿ ಹಣವನ್ನು ವ್ಯವಸ್ಥೆ ಮಾಡುವ ಅನಗತ್ಯ ತೊಂದರೆಗಳಿಂದ ನಿಮ್ಮನ್ನು ಉಳಿಸುತ್ತದೆ.
ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರಮುಖ ಫೀಚರ್‌ಗಳು
- ಕೈಗೆಟುಕುವ ದರದ ಪ್ರೀಮಿಯಂ: ಎಕ್ಸ್‌ಪ್ಲೋರ್ ಏಷ್ಯಾ ಪ್ಲಾನ್ ಮೂಲಕ, ಈ ಪ್ರದೇಶದ ಆರೋಗ್ಯ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಇನ್ಶೂರೆನ್ಸ್ ಪ್ರೀಮಿಯಂ ಕೂಡ ಕೈಗೆಟುಕುವ ದರದಲ್ಲಿ ಸಿಗುತ್ತದೆ.
- ಅಪಘಾತಗಳಿಗೆ ಪರಿಹಾರ: ಪ್ರಯಾಣದ ಸಮಯದಲ್ಲಿ ಇನ್ಶೂರ್ಡ್ ವ್ಯಕ್ತಿಯು ಮೃತಪಟ್ಟರೆ, ಟ್ರಾವೆಲ್ ಕವರ್ ನಾಮಿನಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ.
- ಕ್ಯಾಶ್‌ಲೆಸ್ ಕ್ಲೈಮ್ ಸೆಟಲ್ಮೆಂಟ್: ಆರೋಗ್ಯ ತುರ್ತು ಪರಿಸ್ಥಿತಿ ಎದುರಾದಾಗ ನಮಗೆ ಕರೆ ಮಾಡುವ ಮೂಲಕ, ನಮ್ಮ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನೀವು ಕ್ಯಾಶ್‌ಲೆಸ್ ಒಳ ರೋಗಿಗಳ ಆರೈಕೆ ಸೌಲಭ್ಯವನ್ನು ಪಡೆಯಬಹುದು.
- ಸಂಪೂರ್ಣ ಭದ್ರತೆ: ವೈದ್ಯಕೀಯ ಅಥವಾ ವೈದ್ಯಕೀಯೇತರ ತುರ್ತು ಪರಿಸ್ಥಿತಿಯೇ ಆಗಿರಲಿ, ವಿಮಾನ ಹತ್ತುವುದರಿಂದ ಹಿಡಿದು ಹಿಂತಿರುಗುವವರೆಗೂ ಇನ್ಶೂರೆನ್ಸ್ ನಿಮ್ಮ ನೆರವಿಗೆ ಇರುತ್ತದೆ.
- ಸುಲಭವಾದ ಪಾಲಿಸಿ ವಿಸ್ತರಣೆ: ಪಾಲಿಸಿ ನಿಯಮಗಳಲ್ಲಿ ನಿಗದಿಪಡಿಸಿದ ಗರಿಷ್ಠ ಪ್ರಯಾಣದ ಅವಧಿಗೆ ಅಥವಾ 365 ದಿನಗಳವರೆಗೆ ನೀವು ನಿಮ್ಮ ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ಆನ್‌ಲೈನ್‌ನಲ್ಲಿ ವಿಸ್ತರಿಸಬಹುದು.
ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನ ಪಾಲಿಸಿ ವಿವರಗಳು
|
ವಿವರಣೆ
|
ಎಕ್ಸ್‌ಪ್ಲೋರ್ ಶ್ರೀಲಂಕಾ
|
|
ಇನ್ಶೂರೆನ್ಸ್ ಮೊತ್ತ
|
US $ 10K, 25K, 50K ಮತ್ತು 100K (ಪ್ರೀಮಿಯಂ ಪ್ರಕಾರ ಭಿನ್ನ)
|
|
ಪ್ರಯಾಣದ ಆಯ್ಕೆಗಳು
- ಸಿಂಗಲ್ ಟ್ರಿಪ್
- ಮಲ್ಟಿ-ಟ್ರಿಪ್ (ಪಾಲಿಸಿಯು ವಾರ್ಷಿಕ ಆಧಾರದ ಮೇಲೆ ಇರುತ್ತದೆ)
|
Yes
Yes
|
|
ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್)
|
ಕನಿಷ್ಠ ಮಗು- 1 ದಿನ ವಯಸ್ಕರು- 18 ವರ್ಷಗಳು
ಗರಿಷ್ಠ ಮಗು- 24 ವರ್ಷಗಳು ವಯಸ್ಕರು- ಜೀವಮಾನ
|
|
ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್)
|
ಕನಿಷ್ಠ ಮಗು- 1 ದಿನ ವಯಸ್ಕರು- 18 ವರ್ಷಗಳು
ಗರಿಷ್ಠ ಮಗು- 24 ವರ್ಷಗಳು ವಯಸ್ಕರು- ಜೀವಮಾನ
|
*ಸಿಂಗಲ್ ಟ್ರಿಪ್ ಪಾಲಿಸಿಗಳಲ್ಲಿ ಮಾತ್ರ ಕುಟುಂಬದ ಆಯ್ಕೆ ಲಭ್ಯವಿದೆ. ಅರ್ಹತೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪ್ರಾಸ್ಪೆಕ್ಟಸ್ ನೋಡಿ.
ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?
ನಿಮ್ಮ ಪ್ರಯಾಣದ ಕಾರಣವನ್ನು ಹೊರತುಪಡಿಸಿ, ನಿಮ್ಮ ಪ್ರಯಾಣವನ್ನು ಒತ್ತಡ-ರಹಿತವಾಗಿಸಲು ನಾವು ನಿಮ್ಮನ್ನು ಕವರ್ ಮಾಡುತ್ತೇವೆ. ಶ್ರೀಲಂಕಾಕ್ಕೆ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ:
- ತುರ್ತು ಆಸ್ಪತ್ರೆ ದಾಖಲಾತಿ: ಅನಾರೋಗ್ಯ ಅಥವಾ ಗಾಯದಿಂದಾಗಿ ತುರ್ತು ಆಸ್ಪತ್ರೆಗೆ ದಾಖಲಾಗುವ ವೆಚ್ಚ ಹಾಗೂ ಜೀವಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಮೊದಲೇ ಇರುವ ಕಾಯಿಲೆಗಳ ಚಿಕಿತ್ಸೆಯ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.
- ದೈನಂದಿನ ಭತ್ಯೆ: ಪ್ರತಿ ಕ್ಲೈಮ್‌ಗೆ ಸತತ ಐದು ದಿನಗಳವರೆಗೆ ಒಳ-ರೋಗಿ ಆರೈಕೆಯ ಪ್ರತಿ ದಿನ ನಿರ್ದಿಷ್ಟ ಮೊತ್ತವನ್ನು ನಾವು ಮರುಪಾವತಿಸುತ್ತೇವೆ.
- ವೈಯಕ್ತಿಕ ಅಪಘಾತ: ಇನ್ಶೂರೆನ್ಸ್ ಅವಧಿಯಲ್ಲಿ ಸಂಭವಿಸುವ ಆಕಸ್ಮಿಕ ಗಾಯದಿಂದಾಗಿ ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ (PTD) ಉಂಟಾದ ಸಂದರ್ಭದಲ್ಲಿ ನಾವು ಪರಿಹಾರವನ್ನು ಒದಗಿಸುತ್ತೇವೆ.
- ಸಹಾನುಭೂತಿಯ ಭೇಟಿ: ಈ ಪ್ರಯೋಜನವು ವಿದೇಶದಲ್ಲಿ ನಿಮ್ಮ ಆಸ್ಪತ್ರೆ ವಾಸದುದ್ದಕ್ಕೂ ನಿಮ್ಮೊಂದಿಗಿರಲು ಕುಟುಂಬದ ಸದಸ್ಯರಿಗೆ ಅನುಮತಿ ನೀಡುತ್ತದೆ.
- ಕೋವಿಡ್-19 ಕವರೇಜ್: ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾದರೆ ತಗುಲುವ ವೆಚ್ಚವನ್ನು ನಾವು ನೀಡುತ್ತೇವೆ. ಆದರೆ ಮನೆಯಲ್ಲಿ ಕ್ವಾರಂಟೈನ್ ಆದಲ್ಲಿ ಯಾವುದೇ ರಿಯಂಬರ್ಸ್‌ಮೆಂಟ್ ನೀಡಲಾಗುವುದಿಲ್ಲ.
- ಪ್ರಯಾಣ ವಿಳಂಬ ಮತ್ತು ರದ್ದತಿ: ಈ ಅಡೆತಡೆಗಳು ನಿಮ್ಮ ನಿಯಂತ್ರಣಕ್ಕೆ ಮೀರಿವೆ, ಆದರೆ ನಮ್ಮ ಪರಿಹಾರ ಆಯ್ಕೆಯೊಂದಿಗೆ, ವಿಫಲತೆಯಿಂದಾಗಿ ಉಂಟಾದ ಯಾವುದೇ ಅಗತ್ಯ ವೆಚ್ಚಗಳನ್ನು ನೀವು ಕವರ್ ಮಾಡಬಹುದು.
- ಚೆಕ್-ಇನ್ ಮಾಡಲಾದ ಲಗೇಜ್ ವಿಳಂಬ ಹಾಗೂ ಕಳೆದುಹೋಗುವಿಕೆ: ಚೆಕ್-ಇನ್ ಮಾಡಲಾದ ಲಗೇಜ್ ಪಡೆಯುವಲ್ಲಿ ಸತತ 12 ಗಂಟೆಗಳಿಗಿಂತ ಹೆಚ್ಚು ವಿಳಂಬವಾದ ಸಂದರ್ಭದಲ್ಲಿ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ನೀಡುತ್ತೇವೆ.
- ಪಾಸ್‌ಪೋರ್ಟ್ ಮತ್ತು ಅಂತಾರಾಷ್ಟ್ರೀಯ DL ಕಳೆದುಹೋಗುವಿಕೆ: ನಾವು ನಿಮ್ಮ ಪಾಸ್‌ಪೋರ್ಟ್ ಅಥವಾ ಲಗೇಜ್ ಅನ್ನು ಮರಳಿ ನೀಡದೇ ಇರಬಹುದು, ಆದರೆ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಈ ಪ್ರಯೋಜನದ ಅಡಿಯಲ್ಲಿ ನಷ್ಟವನ್ನು ಕವರ್ ಮಾಡಬಲ್ಲೆವು ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.
ವೈಯಕ್ತಿಕ ಹೊಣೆಗಾರಿಕೆ ಕವರೇಜ್ ಮತ್ತು ಅಸ್ಥಿ ಅವಶೇಷಗಳ ವಾಪಸಾತಿ ಕೂಡ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ಪ್ರಯೋಜನಗಳಾಗಿವೆ.
ಇನ್ಶೂರೆನ್ಸ್ ಡಾಕ್ಯುಮೆಂಟ್‌ನಲ್ಲಿ ಕವರೇಜ್ ಪ್ರಯೋಜನಗಳ ಬಗ್ಗೆ ಹೆಚ್ಚಿನ ವ್ಯಾಪಕ ಮಾಹಿತಿಯನ್ನು ಕಾಣಬಹುದು.
ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನನ್ನು ಕವರ್ ಮಾಡಲಾಗುವುದಿಲ್ಲ?
ಕೆಲವು ಮೂಲಭೂತ ಹೊರಗಿಡುವಿಕೆಗಳು ಈ ಕೆಳಗಿನಂತಿವೆ:
- ನಿಮ್ಮ ಡಾಕ್ಟರ್‌ನಿಂದ ವೈದ್ಯಕೀಯ ಸಲಹೆಯನ್ನು ವಿರೋಧಿಸಿ ಯೋಜಿಸಲಾದ ಯಾವುದೇ ಪ್ರಯಾಣ.
- ಇನ್ಶೂರ್ಡ್ ವ್ಯಕ್ತಿಯು ಅರ್ಹರಾಗಿರುವ ಯಾವುದೇ ವೈದ್ಯಕೀಯ ಆರೈಕೆ.
- ಆತ್ಮಹತ್ಯೆಯ ಪ್ರಯತ್ನಗಳು, ಇತ್ಯಾದಿಗಳನ್ನು ಒಳಗೊಂಡಂತೆ ಸ್ವಯಂ-ಹಾನಿ ಅಥವಾ ಸ್ವಯಂ-ಹಾನಿಯಿಂದ ಆಗುವ ಗಾಯ.
- ಡ್ರಗ್ ದುರುಪಯೋಗ: ಟ್ರಿಪ್ ಸಮಯದಲ್ಲಿ ಇನ್ಶೂರ್ಡ್ ಸದಸ್ಯರು ಆಲ್ಕೋಹಾಲ್ ಅಥವಾ ಡ್ರಗ್ ಬಳಕೆ/ದುರುಪಯೋಗ/ನಿಂದನೆಯಿಂದ ಉಂಟಾಗುವ ಅಥವಾ ಅದಕ್ಕೆ ಕಾರಣವಾಗುವ ವೆಚ್ಚಗಳು.
- ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ ಅಥವಾ ಪರಮಾಣು ಅಪಾಯಗಳು ಅಥವಾ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
- ಸ್ವಯಂ ಮಾಡಿಕೊಂಡ ಗಾಯ: ಯಾವುದೇ ಉದ್ದೇಶಪೂರ್ವಕ ಸ್ವಯಂ-ಗಾಯ, ಆತ್ಮಹತ್ಯೆಯ ಪ್ರಯತ್ನ ಅಥವಾ ಆಸ್ಪತ್ರೆ ದಾಖಲಾತಿ ಅಥವಾ ಮರಣಕ್ಕೆ ಕಾರಣವಾಗುವ ಯಾವುದೇ ರೀತಿಯ ಹಾನಿ.
- ಅಪಾಯಕಾರಿ ಚಟುವಟಿಕೆಗಳು: ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖಿಸಿರದ ಬೆಂಕಿ ಸ್ಟಂಟ್‌ಗಳು ಮುಂತಾದ ಅಪಾಯಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೇಮ್‌ಗಳನ್ನು ಸೆಟಲ್ ಮಾಡಲಾಗುವುದಿಲ್ಲ.
- ಕಾನೂನಿನ ಉಲ್ಲಂಘನೆ: ಗಮ್ಯಸ್ಥಾನ ದೇಶದಿಂದ ನಿಗದಿಪಡಿಸಲಾದ ಯಾವುದೇ ಕಾನೂನು ಉಲ್ಲಂಘನೆ ಅಥವಾ ನಿರ್ದಿಷ್ಟ ನಿಬಂಧನೆಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಗಾಯದ ವೆಚ್ಚಗಳು.
- ದಂತ ಚಿಕಿತ್ಸೆ: ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ವೆಚ್ಚಗಳು.
*ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ದಯವಿಟ್ಟು ಪಾಲಿಸಿಯ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಎಚ್ಚರಿಕೆಯಿಂದ ಓದಿ.
ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರೀಮಿಯಂ ಎಷ್ಟು?
ಇನ್ಶೂರ್ಡ್ ವ್ಯಕ್ತಿಯು ಪಾವತಿಸಬೇಕಾದ ಪ್ರೀಮಿಯಂ, ಪ್ರಯಾಣಿಕರ ವಯಸ್ಸು, ಅವರು ಪ್ರಯಾಣಿಸುತ್ತಿರುವ ದೇಶ, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ವಿವಿಧ ಅಂಶಗಳ ಆಧಾರದ ಮೇಲೆ ಇರುತ್ತದೆ. ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಟ್ರಾವೆಲ್ ಇನ್ಶೂರೆನ್ಸ್ ಕೈಗೆಟಕುವ ಮತ್ತು ಬಜೆಟ್-ಸ್ನೇಹಿಯಾಗಿದೆ. ಶ್ರೀಲಂಕಾಕ್ಕಾಗಿ ನಮ್ಮ ಟ್ರಾವೆಲ್ ಹೆಲ್ತ್‌ಕೇರ್ ಇನ್ಶೂರೆನ್ಸ್ ಪ್ರೀಮಿಯಂ 10-ದಿನದ ದೀರ್ಘ ಪ್ರಯಾಣದಲ್ಲಿ ಒಬ್ಬ ಪ್ರಯಾಣಿಕರಿಗೆ ₹ 428* ರಿಂದ ಆರಂಭವಾಗುತ್ತದೆ.
ಉದಾಹರಣೆಗೆ, ನೀವು ಭಾರತದಿಂದ ಶ್ರೀಲಂಕಾಗೆ 10 ದಿನಗಳ ಕಾಲ ಒಮ್ಮೆ ಮಾತ್ರ ಪ್ರಯಾಣಿಸುತ್ತಿದ್ದರೆ, $50k ಇನ್ಶೂರೆನ್ಸ್ ಮೊತ್ತ ಹೊಂದಿರುವ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್‌ನ ಅಂದಾಜು ಪ್ರೀಮಿಯಂ ವೆಚ್ಚವನ್ನು ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ:
| ಇನ್ಶೂರ್ಡ್ ಸದಸ್ಯ(ರು) |
ವಯಸ್ಸು |
ಮೊದಲೇ-ಇರುವ ಯಾವುದೇ ರೋಗ |
ಇನ್ಶೂರೆನ್ಸ್ ಮೊತ್ತ |
ಪಾಲಿಸಿ ಅವಧಿ |
ಪ್ರೀಮಿಯಂ ಮೊತ್ತ (ಅಂದಾಜು) |
| 1 |
30 ವರ್ಷಗಳು |
ಇಲ್ಲ |
$50, 000 |
10 ದಿನಗಳು |
₹ 428* |
*ಮೇಲೆ ತಿಳಿಸಿದ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಇನ್ಶೂರ್ಡ್ ಸದಸ್ಯರು ಕಳೆದ 48 ತಿಂಗಳಲ್ಲಿ ಯಾವುದೇ ರೋಗನಿರ್ಣಯ, ಆಸ್ಪತ್ರೆಗೆ ದಾಖಲಾಗಿಲ್ಲ ಅಥವಾ ಯಾವುದೇ ಚಿಕಿತ್ಸೆಗೆ ಒಳಗಾಗಿಲ್ಲ ಎಂದು ಲೆಕ್ಕ ಹಾಕಲಾಗುತ್ತದೆ. ಅಲ್ಲದೆ, ಇನ್ಶೂರ್ಡ್ ವ್ಯಕ್ತಿಯು ಈಗಾಗಲೇ ಈ ಮೊದಲು ಯಾವುದೇ ಟ್ರಾವೆಲ್ ಪಾಲಿಸಿಯನ್ನು ಕ್ಲೈಮ್ ಮಾಡಿದ್ದರೆ ಪ್ರೀಮಿಯಂ ಮೊತ್ತವು ಬದಲಾಗಬಹುದು.
ನಮ್ಮೊಂದಿಗೆ ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರೀಮಿಯಂ ಲೆಕ್ಕ ಹಾಕುವುದು ಹೇಗೆ?
ಈ ಕೆಳಗಿನ ಐದು ಸುಲಭ ಹಂತಗಳಲ್ಲಿ ನೀವು ಶ್ರೀಲಂಕಾದ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ವೆಚ್ಚವನ್ನು ಲೆಕ್ಕ ಹಾಕಬಹುದು:
- ಹಂತ 1: ನಿಮ್ಮ ಮೊಬೈಲ್ ನಂಬರ್, ಹೆಸರು ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ನಿಮ್ಮ ಸಂಪರ್ಕ ಮಾಹಿತಿಯನ್ನು ಭರ್ತಿ ಮಾಡಿ, ನಂತರ ಎಲ್ಲಾ ಸದಸ್ಯರ ವಯಸ್ಸನ್ನು ಇನ್ಶೂರ್ ಮಾಡಿಸಿ.
- ಹಂತ 2: "ಮುಂದಿನದು" ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರಯಾಣದ ತಾಣಗಳು ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ. ನಿಮ್ಮ ಪಾಲಿಸಿ ಅವಧಿಯು ನಿಮ್ಮ ಪ್ರಯಾಣದ ದಿನಗಳ ಸಂಖ್ಯೆಯಂತೆಯೇ ಇರುತ್ತದೆ.
- ಹಂತ 3: ಇನ್ಶೂರ್ಡ್ ಸದಸ್ಯರು ಮೊದಲೇ ಇರುವ ಕಾಯಿಲೆಗಳಿಂದ ಬಳಲುತ್ತಿದ್ದರೆ ಅದನ್ನು ತಿಳಿಸಿ.
- ಹಂತ 4: ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆಮಾಡಿ. ಕೇರ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಎರಡು ಬಗೆಯ ಇನ್ಶೂರೆನ್ಸ್ ಮೊತ್ತದ ಆಯ್ಕೆಗಳನ್ನು ಒದಗಿಸುತ್ತದೆ: $50k ಮತ್ತು $100k.
- ಹಂತ 5: ನಿಮ್ಮ ಲೆಕ್ಕ ಹಾಕಲಾದ ಪ್ರೀಮಿಯಂ ಪರಿಶೀಲಿಸಿ ಮತ್ತು ಮುಂದುವರೆಯಲು "ಈಗಲೇ ಖರೀದಿಸಿ" ಕ್ಲಿಕ್ ಮಾಡಿ.
ದಯವಿಟ್ಟು ಗಮನಿಸಿ: ಈ ಪಾಲಿಸಿಯ ಅಡಿಯಲ್ಲಿ ವಿಧಿಸಲಾಗುವ ಪ್ರೀಮಿಯಂ ಮೊತ್ತವು ಇನ್ಶೂರೆನ್ಸ್ ಮೊತ್ತ, ದಿನಗಳ ಲೆಕ್ಕದಲ್ಲಿ ಟ್ರಿಪ್ ಅವಧಿ, ತಲುಪುವ ಸ್ಥಳಗಳ ವ್ಯಾಪ್ತಿ, ಟ್ರಿಪ್ ಪ್ರಕಾರ, ಕವರ್ ಪ್ರಕಾರ, ವ್ಯಕ್ತಿಯ ಆರೋಗ್ಯದ ಸ್ಥಿತಿ ಮತ್ತು ಗ್ರಾಹಕರು ಆಯ್ಕೆ ಮಾಡುವ ಪ್ಲಾನ್ ಮೇಲೆ ಅವಲಂಬಿತವಾಗಿರುತ್ತದೆ.
ಶ್ರೀಲಂಕಾಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಮೊದಲು ಪರಿಗಣಿಸಬೇಕಾದ ವಿಷಯಗಳು
ಶ್ರೀಲಂಕಾ ಟ್ರಿಪ್‌ನ ಪ್ರತಿಯೊಂದು ಕ್ಷಣವನ್ನೂ ಸ್ಮರಣೀಯ ಅನುಭವವನ್ನಾಗಿಸಿ. ನೀವು ಈ ಸುಂದರವಾದ ದೇಶವನ್ನು ಸುತ್ತಿ ನೋಡುತ್ತಾ, ಅಲ್ಲಿನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸದ ಕುರಿತು ತಿಳಿದುಕೊಳ್ಳುವಾಗ, ಸಮಯಕ್ಕೆ ಸರಿಯಾಗಿ ವೀಸಾ ಅರ್ಜಿ ಹಾಕುವುದು ಮತ್ತು ಶ್ರೀಲಂಕಾ ಟ್ರಾವೆಲ್ ಇನ್ಶೂರೆನ್ಸ್ ಕವರ್ ಪಡೆದುಕೊಳ್ಳುವ ಕೆಲಸಗಳನ್ನು ನಿಮ್ಮ ಚೆಕ್‌ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಿ.
ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಮೊದಲು ನೀವು ಪರಿಗಣಿಸಬೇಕಾದ ಕೆಲವು ವಿಷಯಗಳು ಈ ಕೆಳಗಿನಂತಿವೆ:
- ಪ್ರಯಾಣದ ಸ್ವರೂಪ: ಆಗಾಗ್ಗೆ ವಿಮಾನಯಾನ ಮಾಡುವವರು ವಾರ್ಷಿಕ ಪಾಲಿಸಿಗಳನ್ನು ಪಡೆಯಬೇಕು, ಆದರೆ ಇತರರು ಸಿಂಗಲ್ ಟ್ರಿಪ್ ಇನ್ಶೂರೆನ್ಸ್ ಖರೀದಿಸಬೇಕು.
- ರಜಾದಿನಗಳ ಅವಧಿ: ಶ್ರೀಲಂಕಾದಲ್ಲಿ ಕಳೆಯುವ ದಿನಗಳ ಸಂಖ್ಯೆಗೆ ಅನುಗುಣವಾಗಿ ಪ್ರೀಮಿಯಂ ಮೊತ್ತ ಕಡಿಮೆಯಿರುತ್ತದೆ, ಅಂದರೆ ಟ್ರಿಪ್ ಅವಧಿ ಕಡಿಮೆಯಿದ್ದಷ್ಟೂ ಪ್ರೀಮಿಯಂ ಕಡಿಮೆ ಇರುತ್ತದೆ.
- ವೈದ್ಯಕೀಯ ಇತಿಹಾಸ: ನೀವು ಗಂಭೀರ ಅನಾರೋಗ್ಯವನ್ನು ಹೊಂದಿದ್ದರೆ, ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಕವರೇಜ್ ಪರಿಶೀಲಿಸಿ: ಪಾಲಿಸಿಯಲ್ಲಿ ಏನು ಕವರ್ ಆಗುತ್ತದೆ ಎಂಬುದನ್ನು ನಿರ್ಧರಿಸಲು ಸೇರ್ಪಡೆಗಳಿಗೆ ವಿಶೇಷ ಗಮನ ನೀಡಿ. ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಕಡಿಮೆ ದರದಲ್ಲಿ ಅತ್ಯುತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ.
- ಕ್ಲೈಮ್‌ಗಳ ಪ್ರಕ್ರಿಯೆಯನ್ನು ತಿಳಿಯಿರಿ: ನಿಮ್ಮ ಪ್ರಯಾಣದ ಉದ್ದೇಶವನ್ನು ಸೂಚಿಸುವ ಪ್ರಕ್ರಿಯೆಯನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ; ನಿಮ್ಮ ಪ್ರಯಾಣವನ್ನು ಸಂತೋಷಕರ ಮತ್ತು ಒತ್ತಡ-ರಹಿತವಾಗಿಸಲು ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆ
ಶ್ರೀಲಂಕಾ ವೀಸಾಗಳ ವಿಧಗಳು
- ಪ್ರವಾಸ ಭೇಟಿ ವೀಸಾ: ಪ್ರವಾಸೋದ್ಯಮ, ವಿಶ್ರಾಂತಿ, ಸಂಬಂಧಿಕರನ್ನು ಭೇಟಿ ಮಾಡುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ದೇಶಕ್ಕೆ ಭೇಟಿ ನೀಡುವ ಅಂತಾರಾಷ್ಟ್ರೀಯ ಪ್ರವಾಸಿಗರು ಪ್ರವಾಸಿ ಭೇಟಿ ವೀಸಾವನ್ನು ಪಡೆಯಬೇಕು. ಇದನ್ನು ಡಬಲ್ ಎಂಟ್ರಿಗಾಗಿ ಪಡೆಯಬಹುದು ಮತ್ತು 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ರೀತಿಯ ವೀಸಾವನ್ನು 30-ದಿನದ ಮಾನ್ಯತೆಯೊಂದಿಗೆ ಎರಡು ಬಾರಿ ನವೀಕರಿಸಬಹುದು.
- ಬಿಸಿನೆಸ್ ವೀಸಾ: ಅಲ್ಪಾವಧಿಯ ಬಿಸಿನೆಸ್ ಉದ್ದೇಶಗಳಿಗಾಗಿ ದೇಶಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳು ಬಿಸಿನೆಸ್ ವೀಸಾ ಪಡೆಯಬೇಕು. ಇದನ್ನು ಒಂದೇ ಅಥವಾ ಡಬಲ್ ಟ್ರಿಪ್‌ಗೆ ಪಡೆಯಬಹುದು ಮತ್ತು 30 ದಿನಗಳ ಮಾನ್ಯತೆಯನ್ನು ಹೊಂದಿದೆ.
- ವಿದ್ಯಾರ್ಥಿ ವೀಸಾ: ಶ್ರೀಲಂಕಾದಲ್ಲಿ ಅಧ್ಯಯನ ಮಾಡಲು ದೇಶಕ್ಕೆ ಪ್ರಯಾಣಿಸುವವರು 5 ವರ್ಷಗಳ ಮಾನ್ಯತೆಯನ್ನು ಹೊಂದಿರುವ ವಿದ್ಯಾರ್ಥಿ ವೀಸಾವನ್ನು ಆಯ್ಕೆ ಮಾಡಬಹುದು.
- ಟ್ರಾನ್ಸಿಟ್ ವೀಸಾ: ಶ್ರೀಲಂಕಾ ಮೂಲಕ ಇನ್ನೊಂದು ತಾಣಕ್ಕೆ ಪ್ರಯಾಣಿಸುವವರಿಗೆ ಪ್ರವೇಶ ಪರವಾನಗಿ ಲಭ್ಯವಿದೆ. ಇದು 2 ದಿನಗಳಿಗೆ ಮಾನ್ಯವಾಗಿರುತ್ತದೆ.
ಶ್ರೀಲಂಕಾ ವೀಸಾಗೆ ಅಪ್ಲೈ ಮಾಡುವ ಹಂತಗಳು
ಅರ್ಜಿದಾರರು ಆನ್‌ಲೈನ್‌ನಲ್ಲಿ o6n www.eta.gov.lk ETA ಅಪ್ಲಿಕೇಶನ್ ಪೂರ್ಣಗೊಳಿಸುವ ಮೂಲಕ ಶ್ರೀಲಂಕಾಕ್ಕಾಗಿ ETA ಅನ್ನು ಸುಲಭವಾಗಿ ಪಡೆಯಬಹುದು. ಆನ್‌ಲೈನ್ ಅಪ್ಲಿಕೇಶನ್ ನಿಮ್ಮ ಸಮಯವನ್ನು ಉಳಿಸುತ್ತದೆ ಮತ್ತು ಮನೆಯಲ್ಲಿ ಕುಳಿತು ನಿಮ್ಮ ವೀಸಾವನ್ನು ಪ್ರಕ್ರಿಯೆಗೊಳಿಸುತ್ತದೆ. ಇಟಿಎಗೆ ಅಪ್ಲೈ ಮಾಡುವಾಗ ನೀವು ಅನುಸರಿಸಬೇಕಾದ ಹಂತಗಳು ಈ ಕೆಳಗಿನಂತಿವೆ:
- ನಿಮ್ಮ ಭೇಟಿಯ ವೀಸಾ ಮತ್ತು ಉದ್ದೇಶವನ್ನು ಆಯ್ಕೆಮಾಡಿ.
- www.eta.gov.lk ನಲ್ಲಿ ನಿಮ್ಮ ಅಪ್ಲಿಕೇಶನ್ ಸಲ್ಲಿಸಿ ಮತ್ತು ಸ್ವೀಕೃತಿಯನ್ನು ಪಡೆಯಿರಿ.
- ಅಪ್ಲಿಕೇಶನ್ ಫಾರ್ಮ್‌ನಲ್ಲಿ ನೀವು ನಮೂದಿಸಿದ ನಿಮ್ಮ ಮೇಲ್‌ನಲ್ಲಿ ನೀವು ETA ಅನುಮೋದನೆಯನ್ನು ಪಡೆಯುತ್ತೀರಿ.
- ಅನುಮೋದನೆಯ ಫೈನ್ ಪ್ರಿಂಟ್ ಔಟ್ ತೆಗೆದುಕೊಳ್ಳಿ ಮತ್ತು ಅಗತ್ಯವಿದ್ದಾಗ ವಿಮಾನ ನಿಲ್ದಾಣದ ಇಮಿಗ್ರೇಶನ್ ಕೌಂಟರಿನಲ್ಲಿ ಅದನ್ನು ಸಲ್ಲಿಸಿ.
ನಿಮ್ಮ ಅಪ್ಲಿಕೇಶನ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ ನಂತರ ವೀಸಾ ಪ್ರಕ್ರಿಯೆ ಸಮಯವು ಸುಮಾರು 3 ದಿನಗಳನ್ನು ತೆಗೆದುಕೊಳ್ಳುತ್ತದೆ.
ಶ್ರೀಲಂಕಾ ವೀಸಾ ಅಪ್ಲಿಕೇಶನ್‌ಗೆ ಅಗತ್ಯವಿರುವ ಪ್ರಮುಖ ಡಾಕ್ಯುಮೆಂಟ್‌ಗಳು
ಅಗತ್ಯವಿರುವ ಡಾಕ್ಯುಮೆಂಟ್‌ಗಳು ಹೀಗಿವೆ:
- ಕನಿಷ್ಠ 6 ತಿಂಗಳ ಮಾನ್ಯತೆಯೊಂದಿಗೆ ಪಾಸ್‌ಪೋರ್ಟ್.
- ಪಾಸ್‌ಪೋರ್ಟ್‌ನ ಮೊದಲ ಮತ್ತು ಕೊನೆಯ ಪುಟಗಳ ಸ್ಕ್ಯಾನ್ ಮಾಡಿದ ಪ್ರತಿ.
- ಖಚಿತ ರಿಟರ್ನ್ ಏರ್ ಟಿಕೆಟ್.
- ಹೋಟೆಲ್ ದೃಢೀಕರಣದ ಪುರಾವೆ.
ಪ್ರವಾಸಿಗರು ಸ್ವದೇಶದಲ್ಲಿರುವ ಶ್ರೀಲಂಕಾ ರಾಯಭಾರ ಕಚೇರಿಯಿಂದ ವೀಸಾಗೆ ಅಪ್ಲೈ ಮಾಡಬಹುದು.
| ಶ್ರೀಲಂಕಾದಲ್ಲಿ ಹೋಗಬೇಕಾದ ಸ್ಥಳಗಳು |
ದಂಬುಲ್ಲಾ ಕೇವ್ ಟೆಂಪಲ್, ಯಾಲಾ ನ್ಯಾಷನಲ್ ಪಾರ್ಕ್, ಅರಗಮ್ ಬೇ ಮತ್ತು ಮುಂತಾದವು. |
| ಶ್ರೀಲಂಕಾಕ್ಕೆ ಭೇಟಿ ನೀಡಲು ಸೂಕ್ತ ಸಮಯ |
ನವೆಂಬರ್-ಮಾರ್ಚ್ |
| ಕರೆನ್ಸಿ |
ಶ್ರೀಲಂಕಾದ ರುಪೀ |
| ಶ್ರೀಲಂಕಾದಲ್ಲಿ ಭಾರತೀಯ ರಾಯಭಾರ |
ಭಾರತದ ಹೈ ಕಮಿಷನ್. 36-38, ಗಲ್ಲೆ ರೋಡ್, ಕೊಲಂಬೋ- 03 |