ಸರಿಯಾದ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನ್ಯೂಜಿಲ್ಯಾಂಡ್ ಅನ್ನು ಅನ್ವೇಷಿಸಿ
ಕಣ್ಮನಸೆಳೆಯುವ, ಅದ್ಭುತವಾದ ಭೂಪ್ರದೇಶಗಳನ್ನು ಹೊಂದಿರುವ ನ್ಯೂಜಿಲೆಂಡ್, ಸಾಹಸ ಇಷ್ಟಪಡುವ ಪ್ರವಾಸಿಗರಿಗೆ ನಿಜಕ್ಕೂ ಒಂದು ಅದ್ಭುತವಾದ ಅನುಭವ ಕೊಡುತ್ತದೆ. ಜೀವವೈವಿಧ್ಯತೆಯಿಂದ ಕೂಡಿದ ಉಷ್ಣವಲಯದ ಕಾಡುಗಳು, ಹಿಮನದಿ ಪರ್ವತಗಳು, ಸ್ಪಷ್ಟವಾದ ಸರೋವರಗಳು, ಜ್ವಾಲಾಮುಖಿ ಕುಳಿಗಳು ಮತ್ತು ನೈಸರ್ಗಿಕ ಬುಗ್ಗೆಗಳಂತಹ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ನಿಮ್ಮ ನ್ಯೂಜಿಲೆಂಡ್ ಪ್ರವಾಸವನ್ನು ಪ್ಲಾನ್ ಮಾಡಿ ಮತ್ತು ಮತ್ತು ಆ ದೇಶದಲ್ಲಿನ ಅತ್ಯದ್ಭುತ ಪ್ರಯಾಣದ ಅನುಭವಗಳನ್ನು ಆನಂದಿಸಿ. ಸಮೃದ್ಧವಾದ ಸಮುದ್ರ ಸಂಪನ್ಮೂಲಗಳು ಮತ್ತು ಸುದೀರ್ಘವಾದ ಕರಾವಳಿ ತೀರಗಳಿಂದ ಹಿಡಿದು, ಇಲ್ಲಿನ ವಿಶಿಷ್ಟ ಸಂಸ್ಕೃತಿ ಮತ್ತು ಆಹಾರ ಪದ್ಧತಿಯವರೆಗೆ, ಪ್ರೀತಿಯಿಂದ ‘ಕಿವಿ ಹಕ್ಕಿಗಳ ನಾಡು’ ಎಂದು ಕರೆಯಲಾಗುವ ಈ ದೇಶದಲ್ಲಿ ನೋಡಲು ಮತ್ತು ತಿಳಿಯಲು ತುಂಬಾ ವಿಷಯಗಳಿವೆ.
ನೀವು ಆರಾಮದಾಯಕ ಪ್ರಯಾಣದ ಅನುಭವವನ್ನು ಯೋಜಿಸುವಾಗ, ವಿವಿಧ ಪ್ರಯಾಣದ ಅನಿಶ್ಚಿತತೆಗಳ ಬಗ್ಗೆ ಸ್ವಲ್ಪ ಯೋಚಿಸುವುದು ಮತ್ತು ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸಲು ಪ್ರಯತ್ನಗಳನ್ನು ಮಾಡುವುದು ಅಗತ್ಯವಾಗಿದೆ. ನ್ಯೂಜಿಲ್ಯಾಂಡ್‌ಗಾಗಿ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ನಲ್ಲಿ ಹೂಡಿಕೆ ಮಾಡುವುದು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ! ಹೆಲ್ತ್‌ಕೇರ್ ಸೌಲಭ್ಯಗಳು ದೇಶದ ಉನ್ನತ ಮಟ್ಟದ ಮಾನದಂಡಗಳಾಗಿವೆ, ಆದರೆ ಯಾವುದೇ ತುರ್ತು ಆಸ್ಪತ್ರೆ ದಾಖಲಾತಿಯು ಪ್ರವಾಸಿಗರಿಗೆ ಸಾವಿರಾರು ಡಾಲರ್‌ಗಳವರೆಗೆ ವೆಚ್ಚವಾಗಬಹುದು. ಹೀಗಾಗಿ, ವಿದೇಶಿ ಟ್ರಾವೆಲ್ ಕವರ್ ನಿಮ್ಮ ಪ್ರಯಾಣದ ಸಮಯದಲ್ಲಿ ಉಂಟಾಗಬಹುದಾದ ಅನಿರೀಕ್ಷಿತ ಘಟನೆಗಳ ವಿರುದ್ಧ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ.
ನ್ಯೂಜಿಲ್ಯಾಂಡ್‌ಗೆ ಭೇಟಿ ನೀಡಲು ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವೇ?
ಹೌದು, ನ್ಯೂಜಿಲೆಂಡ್‌ಗೆ ಭೇಟಿ ನೀಡುವ ಭಾರತೀಯರು ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೆ, ಕೋವಿಡ್-19 ಚಿಕಿತ್ಸಾ ವೆಚ್ಚಗಳು ಹಾಗೂ ಇತರ ಹೆಲ್ತ್‌ಕೇರ್ ಮತ್ತು ಪ್ರಯಾಣ ಸಂಬಂಧಿತ ತುರ್ತು ಸಂದರ್ಭಗಳನ್ನು ಒಳಗೊಂಡಿರುವ ಸಮಗ್ರ ಪಾಲಿಸಿಯನ್ನು ನೀವು ಹೊಂದಿರಬೇಕು.
ವಿಶ್ವದಾದ್ಯಂತ ಸಾಂಕ್ರಾಮಿಕ ರೋಗಗಳ ಸಮಸ್ಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಎಲ್ಲಾ ರಾಷ್ಟ್ರೀಯತೆಯ ವ್ಯಕ್ತಿಗಳು ನ್ಯೂಜಿಲೆಂಡ್‌ನಲ್ಲಿ ಅಗತ್ಯವಿರುವ ಯಾವುದೇ ವೈದ್ಯಕೀಯ ಚಿಕಿತ್ಸೆಗಾಗಿ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ನೆನಪಿಡಿ, ನ್ಯೂಜಿಲೆಂಡ್‌ನ ACC (ಅಪಘಾತ ಪರಿಹಾರ ನಿಗಮ) ನಿಮ್ಮ ಅಪಘಾತದ ಕೆಲವು ವೆಚ್ಚಗಳನ್ನು ಭರಿಸಬಹುದು, ಆದರೆ ಎಲ್ಲವನ್ನೂ ಅಲ್ಲ. ಆದ್ದರಿಂದ, ಸರಿಯಾದ ಟ್ರಾವೆಲ್ ಕವರೇಜ್ ಆರಿಸಿಕೊಳ್ಳುವ ಮೂಲಕ ನಿಮ್ಮ ಟ್ರಿಪ್‌ನ ಬಜೆಟ್ ಮತ್ತು ಉಳಿತಾಯವನ್ನು ದುಬಾರಿ ಮೆಡಿಕಲ್ ಬಿಲ್‌ಗಳಿಂದ ಕಾಪಾಡಿಕೊಳ್ಳಿ.
ಎಕ್ಸ್‌ಪ್ಲೋರ್ ANZ - ಭಾರತದಿಂದ ನ್ಯೂಜಿಲ್ಯಾಂಡ್‌ಗೆ ನಿಮ್ಮ ಪರಿಪೂರ್ಣ ಟ್ರಾವೆಲ್ ಇನ್ಶೂರೆನ್ಸ್
ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎರಡನ್ನೂ ಒಳಗೊಂಡಿರುವ ನಮ್ಮ ವಿಶೇಷ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಆದ ಎಕ್ಸ್‌ಪ್ಲೋರ್ ANZ ಮೂಲಕ, ನಿಮ್ಮ ನ್ಯೂಜಿಲೆಂಡ್ ಟ್ರಿಪ್ ಅತ್ಯಂತ ಸ್ಮರಣೀಯವಾಗಿ ಇರುವಂತೆ ನಾವು ನೋಡಿಕೊಳ್ಳುತ್ತೇವೆ. ಎಕ್ಸ್‌ಪ್ಲೋರ್ ANZ ಪ್ಲಾನ್ ನೆರವಿನಿಂದ, ನೀವು ಕುಟುಂಬ, ಸಂಗಾತಿ ಅಥವಾ ವ್ಯಾಪಾರ ಪಾಲುದಾರರೊಂದಿಗೆ ಪ್ರಯಾಣಿಸುತ್ತಿರಲಿ ಅಥವಾ ವಿದ್ಯಾರ್ಥಿಯಾಗಿ ಪ್ರಯಾಣಿಸುತ್ತಿರಲಿ, ಯಾವುದೇ ಚಿಂತೆಯಿಲ್ಲದ ಟ್ರಿಪ್ ಅನ್ನು ಆನಂದಿಸಬಹುದು.
ಒಳ-ರೋಗಿ, ಹೊರ-ರೋಗಿ, ವೈಯಕ್ತಿಕ ಅಪಘಾತಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ಈ ಪಾಲಿಸಿಯು ಅತ್ಯುತ್ತಮ ಕವರೇಜ್ ಅನ್ನು ಒದಗಿಸುತ್ತದೆ. ಎಕ್ಸ್‌ಪ್ಲೋರ್ ANZ ಪಾಲಿಸಿಯು ವಿಮಾನ ರದ್ದತಿಗಳು, ಪಾಸ್‌ಪೋರ್ಟ್ ಅಥವಾ ಲಗೇಜ್ ಕಳೆದುಹೋಗುವುದು. ಮುಂತಾದ ಅನೇಕ ಟ್ರಿಪ್-ಸಂಬಂಧಿತ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ನಮ್ಮ ಎಕ್ಸ್‌ಪ್ಲೋರ್ ANZ ಪ್ಲಾನ್ ಹಲವಾರು ಇನ್ಶೂರೆನ್ಸ್ ಮೊತ್ತದ ಆಯ್ಕೆಗಳನ್ನು ಹೊಂದಿದ್ದು, ನ್ಯೂಜಿಲೆಂಡ್ ಪ್ರವಾಸವನ್ನು ಪರಿಪೂರ್ಣವಾಗಿಸುವ ಒಂದು ಸಮಗ್ರ ಪ್ಯಾಕೇಜ್ ಆಗಿದೆ. ಕೇರ್ ಹೆಲ್ತ್ ಇನ್ಶೂರೆನ್ಸ್ ತನ್ನ ವಿಶಿಷ್ಟ ಫೀಚರ್‌ಗಳು ಮತ್ತು ಸಾಟಿಯಿಲ್ಲದ ಕವರೇಜ್‌ನೊಂದಿಗೆ ಅತ್ಯುತ್ತಮ ನ್ಯೂಜಿಲೆಂಡ್ ಟ್ರಾವೆಲ್ ಇನ್ಶೂರೆನ್ಸ್‌ಗಳನ್ನು ಹೇಗೆ ಒದಗಿಸುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಓದಿ.
ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ನ್ಯೂಜಿಲೆಂಡ್ ಟ್ರಾವೆಲ್ ಕವರ್‌ನ ಫೀಚರ್‌ಗಳು
ನ್ಯೂಜಿಲ್ಯಾಂಡ್ ಟ್ರಾವೆಲ್ ಕವರ್ ಆಯ್ಕೆ ಮಾಡುವಾಗ, ಪಾಲಿಸಿಯನ್ನು ಹೆಚ್ಚಿಸುವ ವಿಶಿಷ್ಟ ಫೀಚರ್‌ಗಳನ್ನು ನೀವು ನೋಡಬೇಕು, ಇದು ಮೌಲ್ಯಯುತ ಆಯ್ಕೆಯಾಗಿದೆ. ಕೇರ್ ನ್ಯೂಜಿಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರಮುಖ ಫೀಚರ್‌ಗಳು ಇಲ್ಲಿವೆ:
- ಕೈಗೆಟಕುವ ಪ್ರೀಮಿಯಂ: ನ್ಯೂಜಿಲೆಂಡ್ ಟ್ರಾವೆಲ್ ಪಾಲಿಸಿಯು ಕೈಗೆಟುಕುವ ಪ್ರೀಮಿಯಂ ದರದೊಂದಿಗೆ ನಿಮ್ಮ ಪ್ರಯಾಣದ ಬಜೆಟ್‌ಗೆ ಹೊಂದಿಕೊಳ್ಳುತ್ತದೆ ಮತ್ತು ಇದು ನಿಮ್ಮ ಇತರ ಅಗತ್ಯ ವೆಚ್ಚಗಳಿಗೆ ಯಾವುದೇ ರೀತಿಯಲ್ಲಿ ಕಡಿತವನ್ನು ಉಂಟುಮಾಡುವುದಿಲ್ಲ.
- ಆಟೋಮ್ಯಾಟಿಕ್ ಟ್ರಿಪ್ ವಿಸ್ತರಣೆ: ದೀರ್ಘಾವಧಿಯ ಆಸ್ಪತ್ರೆ ದಾಖಲಾತಿ, ನೈಸರ್ಗಿಕ ವಿಕೋಪ ಅಥವಾ ದುರದೃಷ್ಟಕರ ಮರಣದ ಸಮಯದಲ್ಲಿ ಪಾಲಿಸಿಯು ಸತತ 7 ದಿನಗಳವರೆಗೆ ಟ್ರಾವೆಲ್ ಕವರ್ ಅನ್ನು ಆಟೋಮ್ಯಾಟಿಕ್ ಆಗಿ ವಿಸ್ತರಿಸುತ್ತದೆ.
- ಕ್ಯಾಶ್‌ಲೆಸ್ ಕ್ಲೈಮ್ ಪ್ರಕ್ರಿಯೆ: ನಮ್ಮ ವ್ಯಾಪಕ ಹೆಲ್ತ್‌ಕೇರ್ ಪೂರೈಕೆದಾರರ ನೆಟ್‌ವರ್ಕ್ ತುರ್ತು ಪರಿಸ್ಥಿತಿಗಳಲ್ಲಿ ನಮಗೆ ಕರೆ ಮಾಡುವ ಮೂಲಕ ಕ್ಯಾಶ್‌ಲೆಸ್ ಒಳ-ರೋಗಿ ಆರೈಕೆ ಸೌಲಭ್ಯವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
- ಎಲ್ಲಾ-ಒಳಗೊಳ್ಳುವ ರಕ್ಷಣೆ: ಚೆಕ್ಡ್-ಇನ್ ಬ್ಯಾಗೇಜ್ ನಷ್ಟದ ಸಮಯದಲ್ಲಿ ನಿಮಗೆ ಹೆಲ್ತ್‌ಕೇರ್ ಸೇವೆಗಳು ಅಥವಾ ಸಹಾಯದ ಅಗತ್ಯವಿದ್ದರೆ, ನಿಮ್ಮ ಪ್ರಯಾಣದ ಪ್ರತಿ ಹಂತದಲ್ಲೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ.
- ಬಳಕೆಯ ಆ್ಯಡ್-ಆನ್ ಪ್ರಯೋಜನಗಳು: ಈ ಪಾಲಿಸಿಯು PED ಕವರೇಜ್, ವೀಸಾ ಶುಲ್ಕಗಳ ರಿಫಂಡ್ ಮುಂತಾದ ಐಚ್ಛಿಕ ಕವರ್‌ಗಳೊಂದಿಗೆ ಆಗಾಗ್ಗೆ ಮತ್ತು ದೀರ್ಘಾವಧಿಯ ಪ್ರಯಾಣಗಳನ್ನು ಕಸ್ಟಮೈಜ್ ಮಾಡಲು ಮತ್ತು ಸುರಕ್ಷಿತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
*ಪ್ರಾಡಕ್ಟ್ ಫೀಚರ್‌ಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಬ್ರೋಶರ್ ನೋಡಿ.
ನ್ಯೂಜಿಲ್ಯಾಂಡ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್‌ನ ಪಾಲಿಸಿ ವಿವರಗಳು
| ವಿವರಣೆ |
ಎಕ್ಸ್‌ಪ್ಲೋರ್ ANZ |
| ಇನ್ಶೂರೆನ್ಸ್ ಮೊತ್ತ |
US $ 50K ಮತ್ತು 100K (ಪ್ರೀಮಿಯಂ ಪ್ರಕಾರ ಬದಲಾಗುತ್ತದೆ) |
|
ಪ್ರಯಾಣದ ಆಯ್ಕೆಗಳು
● ಸಿಂಗಲ್ ಟ್ರಿಪ್
● ಮಲ್ಟಿ ಟ್ರಿಪ್ (ಪಾಲಿಸಿಯು ವಾರ್ಷಿಕ ಆಧಾರದ ಮೇಲೆ ಇರುತ್ತದೆ)
|
Yes
Yes |
| ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್) |
ಕನಿಷ್ಠ ಮಗು- 1 ದಿನ ವಯಸ್ಕರು- 18 ವರ್ಷಗಳು
ಗರಿಷ್ಠ ಮಗು- 24 ವರ್ಷಗಳು ವಯಸ್ಕರು- ಜೀವಮಾನ
|
| ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್) |
ಕನಿಷ್ಠ ಮಗು- 1 ದಿನ ವಯಸ್ಕರು- 18 ವರ್ಷಗಳು
ಗರಿಷ್ಠ ಮಗು- 24 ವರ್ಷಗಳು ವಯಸ್ಕರು- ಜೀವಮಾನ
|
*ಸಿಂಗಲ್ ಟ್ರಿಪ್ ಪಾಲಿಸಿಗಳಲ್ಲಿ ಮಾತ್ರ ಕುಟುಂಬದ ಆಯ್ಕೆ ಲಭ್ಯವಿದೆ.
ನ್ಯೂಜಿಲ್ಯಾಂಡ್‌ಗಾಗಿ ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?
ಪರಿಪೂರ್ಣ ಟ್ರಾವೆಲ್ ಪ್ಲಾನ್ ಆಯ್ಕೆ ಮಾಡುವಾಗ, ಬಜೆಟ್-ಸ್ನೇಹಿ ಪ್ರೀಮಿಯಂ ಅಡಿಯಲ್ಲಿ ಗರಿಷ್ಠ ಕವರೇಜ್ ಹುಡುಕಿ. ಈ ಕೆಳಗಿನ ಕವರೇಜ್ ಪ್ರಯೋಜನಗಳೊಂದಿಗೆ ಎಕ್ಸ್‌ಪ್ಲೋರ್ ANZ ಪ್ಲಾನ್ ಉಳಿದವುಗಳಿಗಿಂತ ಭಿನ್ನವಾಗಿದೆ-
- ತುರ್ತು ಆಸ್ಪತ್ರೆ ದಾಖಲಾತಿ: ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆ ಹಾಗೂ ಆಸ್ಪತ್ರೆ ದಾಖಲಾತಿ ಸೌಲಭ್ಯಗಳೊಂದಿಗೆ, ಈ ಪಾಲಿಸಿಯು ತುರ್ತು ಅನಾರೋಗ್ಯ ಅಥವಾ ಗಾಯದ ಚಿಕಿತ್ಸಾ ವೆಚ್ಚಗಳಿಗೆ ಕವರೇಜ್ ಒದಗಿಸುತ್ತದೆ.
- ದೈನಂದಿನ ಭತ್ಯೆ: ನಿಯಮಗಳ ಪ್ರಕಾರ ನಿಗದಿತ ಮೊತ್ತದವರೆಗಿನ ರಿಯಂಬರ್ಸ್‌ಮೆಂಟ್ ಸೌಲಭ್ಯದೊಂದಿಗೆ, ಆಸ್ಪತ್ರೆಗೆ ದಾಖಲಾದ ಅವಧಿಯಲ್ಲಿನ ನಿಮ್ಮ ಹೆಚ್ಚುವರಿ ಹಾಗೂ ದೈನಂದಿನ ವೆಚ್ಚಗಳನ್ನು ಸರಿದೂಗಿಸಿ.
- ಸಹಾನುಭೂತಿಯ ಭೇಟಿ: ನಿಯಮಗಳಿಗೆ ಒಳಪಟ್ಟು ವಿಮಾನದ ಟಿಕೆಟ್ ವೆಚ್ಚಗಳಿಗೆ ಮರುಪಾವತಿ ಸೌಲಭ್ಯದೊಂದಿಗೆ ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ನಿಮಗೆ ಬೆಂಬಲ ನೀಡಲು ನಾವು ನಿಮ್ಮ ಕುಟುಂಬದ ಸದಸ್ಯರಿಗೆ ಸಹಾಯ ಮಾಡುತ್ತೇವೆ.
- ವೈಯಕ್ತಿಕ ಅಪಘಾತ: ಇನ್ಶೂರ್ಡ್ ವ್ಯಕ್ತಿಯ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯದಂತಹ ದುರದೃಷ್ಟಕರ ಸಂದರ್ಭದಲ್ಲಿ, ಇನ್ಶೂರೆನ್ಸ್ ಮೊತ್ತದವರೆಗಿನ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವ ಸೌಲಭ್ಯವನ್ನು ಈ ಪಾಲಿಸಿಯು ಒದಗಿಸುತ್ತದೆ.
- ಕೋವಿಡ್-19 ಕವರೇಜ್: ಈ ಪಾಲಿಸಿಯು ನ್ಯೂಜಿಲೆಂಡ್‌ನಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಸ್ಟ್ಯಾಂಡರ್ಡ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ, ನಿಯಮಗಳಿಗೆ ಒಳಪಟ್ಟು ತ್ವರಿತ ಚೇತರಿಕೆಗೆ ನಿಮಗೆ ಸಹಾಯ ಮಾಡುತ್ತದೆ.
- ಟ್ರಿಪ್ ವಿಳಂಬ ಮತ್ತು ರದ್ದತಿ: ಟ್ರಿಪ್ ವಿಳಂಬ, ಅಡಚಣೆ ಮತ್ತು ರದ್ದುಗೊಳಿಸುವಿಕೆಗಳಿಂದ ಒತ್ತಡಕ್ಕೆ ಒಳಗಾಗಬೇಡಿ, ಪಾಲಿಸಿಯ ನಿಗದಿತ ಷರತ್ತುಗಳ ಪ್ರಕಾರ ನಾವು ಇವುಗಳಿಗೆ ಕವರೇಜ್ ಒದಗಿಸುತ್ತೇವೆ.
- ಚೆಕ್-ಇನ್ ಮಾಡಲಾದ ಲಗೇಜ್ ದೊರೆಯುವಲ್ಲಿ ವಿಳಂಬ ಮತ್ತು ಕಳೆದುಹೋಗುವುದು: ಪಾಲಿಸಿಯ ಪ್ರಕಾರ ನಿರ್ದಿಷ್ಟಪಡಿಸಿದ ಮೊತ್ತದವರೆಗೆ, ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡಲಾದ ಲಗೇಜ್ ಕಳೆದುಹೋಗುವಿಕೆ ಮತ್ತು ವಿಳಂಬಕ್ಕೆ ಈ ಪಾಲಿಸಿಯು ಕವರೇಜ್ ನೀಡುತ್ತದೆ.
- ಪಾಸ್‌ಪೋರ್ಟ್ ಮತ್ತು ಇಂಟರ್‌ನ್ಯಾಷನಲ್ DL ಕಳೆದುಹೋಗುವುದು: ನೀವು ನ್ಯೂಜಿಲೆಂಡ್‌ನಲ್ಲಿ ನಿಮ್ಮ ಪಾಸ್‌ಪೋರ್ಟ್ ಮತ್ತು ಇಂಟರ್‌ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡರೆ ಚಿಂತಿಸಬೇಡಿ, ಏಕೆಂದರೆ ನಾವು ಪಾಲಿಸಿ ನಿಯಮಗಳ ಪ್ರಕಾರ ಅದಕ್ಕೆ ಕವರೇಜ್ ಒದಗಿಸುತ್ತೇವೆ.
ನ್ಯೂಜಿಲ್ಯಾಂಡ್ ಟ್ರಾವೆಲ್ ಪಾಲಿಸಿಯ ಅಡಿಯಲ್ಲಿ ಹೊರಗಿಡುವಿಕೆಗಳು
ನ್ಯೂಜಿಲ್ಯಾಂಡ್ ಟ್ರಾವೆಲ್ ಪಾಲಿಸಿಯು ಈ ಕೆಳಗಿನ ಸನ್ನಿವೇಶಗಳಲ್ಲಿ ಕವರೇಜ್ ಒದಗಿಸುವುದಿಲ್ಲ:
- ಡ್ರಗ್ ದುರುಪಯೋಗ: ಟ್ರಿಪ್ ಸಮಯದಲ್ಲಿ ಇನ್ಶೂರ್ಡ್ ಸದಸ್ಯರು ಆಲ್ಕೋಹಾಲ್ ಅಥವಾ ಡ್ರಗ್ ಬಳಕೆ/ದುರುಪಯೋಗ/ನಿಂದನೆಯಿಂದ ಉಂಟಾಗುವ ಅಥವಾ ಅದಕ್ಕೆ ಕಾರಣವಾಗುವ ವೆಚ್ಚಗಳು.
- ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ ಅಥವಾ ಪರಮಾಣು ಅಪಾಯಗಳು ಅಥವಾ ಅದರ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
- ಸ್ವಯಂ ಮಾಡಿಕೊಂಡ ಗಾಯ: ಉದ್ದೇಶಪೂರ್ವಕವಾಗಿ ಮಾಡಿಕೊಳ್ಳುವ ಯಾವುದೇ ರೀತಿಯ ಸ್ವಯಂ-ಗಾಯ, ಆತ್ಮಹತ್ಯೆಯ ಪ್ರಯತ್ನ ಅಥವಾ ಆಸ್ಪತ್ರೆ ದಾಖಲಾತಿ ಅಥವಾ ಸಾವಿಗೆ ಕಾರಣವಾಗುವ ಸ್ವಯಂ-ಹಾನಿಯ ಯಾವುದೇ ಇತರ ರೂಪಗಳು ಈ ಕವರೇಜ್‌ಗೆ ಒಳಪಡುವುದಿಲ್ಲ.
- ಅಪಾಯಕಾರಿ ಚಟುವಟಿಕೆಗಳು: ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖಿಸದಿರುವ ಬೆಂಕಿಯ ಸ್ಟಂಟ್‌ಗಳಂತಹ ಅಪಾಯಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೈಮ್‌ಗಳು.
- ಕಾನೂನಿನ ಉಲ್ಲಂಘನೆ: ಗಮ್ಯಸ್ಥಾನ ದೇಶದಿಂದ ನಿಗದಿಪಡಿಸಲಾದ ಯಾವುದೇ ಕಾನೂನು ಉಲ್ಲಂಘನೆ ಅಥವಾ ನಿರ್ದಿಷ್ಟ ನಿಬಂಧನೆಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಗಾಯದ ವೆಚ್ಚಗಳು.
- ದಂತ ಚಿಕಿತ್ಸೆ: ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ವೆಚ್ಚಗಳು.
ಗಮನಿಸಿ: ಪ್ಲಾನ್ ಫೀಚರ್‌ಗಳು, ಪ್ರಯೋಜನಗಳು, ಕವರೇಜ್ ಮತ್ತು ಕ್ಲೈಮ್‌ಗಳ ಅಂಡರ್‌ರೈಟಿಂಗ್ ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ಕೈಪಿಡಿ, ಸೇಲ್ಸ್ ಪ್ರಾಸ್ಪೆಕ್ಟಸ್ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ.
ಭಾರತದಿಂದ ನ್ಯೂಜಿಲ್ಯಾಂಡ್‌ಗೆ ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ ಎಷ್ಟು?
ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಭಾರತದಿಂದ ನ್ಯೂಜಿಲೆಂಡ್‌ಗೆ ಪ್ರಯಾಣಿಸುವಾಗ ನಿಮ್ಮ ಹೆಲ್ತ್‌ಕೇರ್ ಅಗತ್ಯಗಳನ್ನು ಪೂರೈಸುವ ಹಾಗೂ ಹಣವನ್ನು ಉಳಿಸಲು ಸಹಕರಿಸುವ, ಕೈಗೆಟುಕುವ ದರದ ಟ್ರಾವೆಲ್ ಕವರೇಜ್ ಅನ್ನು ನಾವು ಒದಗಿಸುತ್ತೇವೆ. ನಮ್ಮ ಟ್ರಾವೆಲ್ ಪಾಲಿಸಿಯ ಪ್ರೀಮಿಯಂ ಮೊತ್ತವು ಪ್ರಯಾಣಿಕರ ವಯಸ್ಸು, ಪ್ರಯಾಣದ ಸ್ಥಳ, ಟ್ರಿಪ್ ಅವಧಿ, ಇನ್ಶೂರ್ಡ್ ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ಕವರೇಜ್ ಪ್ರಕಾರಗಳು ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿರುತ್ತದೆ. ನಮ್ಮ ನ್ಯೂಜಿಲ್ಯಾಂಡ್ ಟ್ರಾವೆಲ್ ಪ್ಲಾನ್‌ನ ಪ್ರೀಮಿಯಂ ದರಗಳು ಒಬ್ಬ ಪ್ರಯಾಣಿಕರ ಒಂದು ವಾರದ ಅವಧಿಯ ಪ್ರಯಾಣಕ್ಕೆ ಕೇವಲ ₹390 ರಿಂದ ಪ್ರಾರಂಭವಾಗುತ್ತವೆ.
| ಇನ್ಶೂರ್ಡ್ ಸದಸ್ಯ(ರು) |
ವಯಸ್ಸು |
ಮೊದಲೇ-ಇರುವ ಯಾವುದೇ ರೋಗ |
ಇನ್ಶೂರೆನ್ಸ್ ಮೊತ್ತ |
ಪಾಲಿಸಿ ಅವಧಿ |
ಪ್ರೀಮಿಯಂ ಮೊತ್ತ (ಅಂದಾಜು) |
| 1 |
30 ವರ್ಷಗಳು |
ಇಲ್ಲ |
$50,000 |
8 ದಿನಗಳು |
₹ 402 |
*ಮೇಲೆ ತಿಳಿಸಲಾದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು, ಇನ್ಶೂರ್ಡ್ ವ್ಯಕ್ತಿಗೆ ಮೊದಲೇ ಯಾವುದೇ ಕಾಯಿಲೆಗಳಿಲ್ಲ ಎಂಬ ಷರತ್ತಿಗೊಳಪಟ್ಟು ಲೆಕ್ಕಹಾಕಲಾಗುತ್ತದೆ. ಅದಲ್ಲದೆ, ಇನ್ಶೂರ್ಡ್ ವ್ಯಕ್ತಿಯು ಈ ಹಿಂದೆ ಯಾವುದೇ ಟ್ರಾವೆಲ್ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಿದ್ದರೆ, ಪ್ರೀಮಿಯಂ ಮೊತ್ತದಲ್ಲಿ ಬದಲಾವಣೆ ಆಗಬಹುದು.
ಈ ಐದು ಸುಲಭ ಹಂತಗಳಲ್ಲಿ ನ್ಯೂಜಿಲ್ಯಾಂಡ್ ಟ್ರಾವೆಲ್ ಕವರ್‌ನ ಪ್ರೀಮಿಯಂ ಮೊತ್ತವನ್ನು ನೀವು ಲೆಕ್ಕ ಹಾಕಬಹುದು:
- ಹಂತ 1: ನಿಮ್ಮ ಮೊಬೈಲ್ ನಂಬರ್, ಹೆಸರು ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ನಿಮ್ಮ ಕಾಂಟಾಕ್ಟ್ ಮಾಹಿತಿಯನ್ನು ನಮೂದಿಸಿ, ನಂತರ ಇನ್ಶೂರ್ಡ್ ಮಾಡಬೇಕಾದ ಎಲ್ಲಾ ಸದಸ್ಯರ ವಯಸ್ಸನ್ನು ನಮೂದಿಸಿ.
- ಹಂತ 2: 'ಮುಂದಿನದು' ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರಯಾಣದ ತಾಣಗಳು ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ. ನಿಮ್ಮ ಪಾಲಿಸಿ ಅವಧಿಯು ನಿಮ್ಮ ಪ್ರಯಾಣದ ದಿನಗಳ ಸಂಖ್ಯೆಯಂತೆಯೇ ಇರುತ್ತದೆ.
- ಹಂತ 3: ಇನ್ಶೂರ್ಡ್ ಸದಸ್ಯರಿಗೆ ಯಾವುದಾದರೂ ಮೊದಲೇ ಇರುವ ಕಾಯಿಲೆಗಳು ಇದ್ದಾವೆಯೇ ಎಂದು ಟಾಗಲ್‌ನಲ್ಲಿ ಪರಿಶೀಲಿಸಿ.
- ಹಂತ 4: ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆಮಾಡಿ. ಕೇರ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಎರಡು ಇನ್ಶೂರೆನ್ಸ್ ಮೊತ್ತದ ಆಯ್ಕೆಗಳನ್ನು ಒದಗಿಸುತ್ತದೆ: US $ 50K ಮತ್ತು 100K.
- ಹಂತ 5: ನಿಮ್ಮ ಲೆಕ್ಕ ಹಾಕಲಾದ ಪ್ರೀಮಿಯಂ ಪರಿಶೀಲಿಸಿ ಮತ್ತು ಮುಂದುವರಿಯಲು 'ಈಗಲೇ ಖರೀದಿಸಿ' ಕ್ಲಿಕ್ ಮಾಡಿ.
ದಯವಿಟ್ಟು ಗಮನಿಸಿ: ಪ್ರೀಮಿಯಂ ವೆಚ್ಚವು ಪ್ರಯಾಣಿಕರ ಸಂಖ್ಯೆ, ಅವರ ವಯಸ್ಸು, ತಲುಪುವ ದೇಶ/ದೇಶಗಳು, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ಹಲವಾರು ಅಂಶಗಳಿಗೆ ಒಳಪಟ್ಟಿರುತ್ತದೆ.
ನ್ಯೂಜಿಲ್ಯಾಂಡ್‌ಗೆ ಸರಿಯಾದ ಟ್ರಾವೆಲ್ ಕವರ್ ಖರೀದಿಸುವ ಮೊದಲು ಪರಿಗಣಿಸಬೇಕಾದ ಅಂಶಗಳು
ನಿಮ್ಮ ನ್ಯೂಜಿಲೆಂಡ್ ಟ್ರಿಪ್‌ಗಾಗಿ ಸರಿಯಾದ ಕವರೇಜ್ ಆಯ್ಕೆ ಮಾಡುವುದು ಕಷ್ಟವಾಗಬಹುದು, ವಿಶೇಷವಾಗಿ ನೀವು ಮೊದಲ ಬಾರಿಗೆ ಪ್ರಯಾಣಿಸುವಾಗ. ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ಈ ಕೆಳಗಿನ ಸಲಹೆಗಳೊಂದಿಗೆ ಸರಿಯಾದ ಪ್ಲಾನ್ ಅನ್ನು ಆಯ್ಕೆ ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ:
- ಟ್ರಿಪ್ ಫ್ರೀಕ್ವೆನ್ಸಿ: ಆಗಾಗ್ಗೆ ಪ್ರಯಾಣಿಸುವವರು ಮಲ್ಟಿ-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಪಡೆಯಬೇಕು, ಆದರೆ ಸಾಂದರ್ಭಿಕವಾಗಿ ಪ್ರಯಾಣಿಸುವವರು ಸಿಂಗಲ್-ಟ್ರಿಪ್ ಇನ್ಶೂರೆನ್ಸ್ ಆಯ್ಕೆಮಾಡಬೇಕು.
- ಪ್ರಯಾಣದ ಅವಧಿ: ನೀವು ನ್ಯೂಜಿಲೆಂಡ್‌ನಲ್ಲಿ ಖರ್ಚು ಮಾಡಲು ಯೋಜಿಸುವ ದಿನಗಳ ಸಂಖ್ಯೆಯ ಆಧಾರದ ಮೇಲೆ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಪ್ರಯಾಣ ಕಡಿಮೆಯಾದರೆ, ಪ್ರೀಮಿಯಂ ಕಡಿಮೆಯಾಗಿರುತ್ತದೆ.
- ವೈದ್ಯಕೀಯ ಇತಿಹಾಸ: ಡಯಾಬಿಟಿಸ್ ಅಥವಾ ಹೃದಯ ಅನಾರೋಗ್ಯದಂತಹ ಯಾವುದೇ ಮುಂಚಿತ-ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ, ಪಾಲಿಸಿಯು ಅದರ ಚಿಕಿತ್ಸೆ ವೆಚ್ಚವನ್ನು ಕವರ್ ಮಾಡುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
- ಹೆಚ್ಚಿನ-ಅಪಾಯದ ವಲಯಗಳು: ಹೆಚ್ಚಿನ ಅಪಾಯದ ವಲಯಗಳಾಗಿರುವ ತಾಣಗಳು ಕೆಲವು ನಿರ್ಬಂಧಗಳು ಮತ್ತು ಉಪ-ಮಿತಿಗಳೊಂದಿಗೆ ಹೆಚ್ಚಿನ ಪ್ರೀಮಿಯಂ ಹೊಂದಿರುತ್ತವೆ. ಅಲ್ಲದೆ, ನಿಮ್ಮ ಪಾಲಿಸಿಯು ಸಾಹಸ ಕ್ರೀಡೆಗಳನ್ನು ಕವರ್ ಮಾಡುತ್ತದೆಯೇ ಎಂದು ಪರಿಶೀಲಿಸಿ.
- ವಿನಾಯಿತಿ ಹೊರಗಿಡುವಿಕೆ: ಟ್ರಾವೆಲ್ ಪ್ಲಾನ್‌ಗಳು ಅನೇಕ ಷರತ್ತುಗಳೊಂದಿಗೆ ಬರುತ್ತವೆ; ವಿವಿಧ ಟ್ರಾವೆಲ್ ಕವರ್‌ಗಳನ್ನು ಹೋಲಿಕೆ ಮಾಡುವಾಗ ನೀವು ಅವುಗಳನ್ನು ಎಚ್ಚರಿಕೆಯಿಂದ ಓದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನ್ಯೂಜಿಲ್ಯಾಂಡ್ ಟ್ರಾವೆಲ್ ಪಾಲಿಸಿ ಅಡಿಯಲ್ಲಿ ಕ್ಲೈಮ್ ಫೈಲ್ ಮಾಡುವುದು ಹೇಗೆ?
ನ್ಯೂಜಿಲ್ಯಾಂಡ್ ವೀಸಾಗಳ ವಿಧಗಳು
ವಿದೇಶಿ ಪ್ರವಾಸಿಗರು ನ್ಯೂಜಿಲ್ಯಾಂಡ್‌ಗೆ ಪ್ರವೇಶವನ್ನು ಪಡೆಯಲು eTA (ಎಲೆಕ್ಟ್ರಾನಿಕ್ ಟ್ರಾವೆಲ್ ದೃಢೀಕರಣ) ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಇದು ಗರಿಷ್ಠ ಮೂರು ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ. ನ್ಯೂಜಿಲ್ಯಾಂಡ್‌ಗೆ ವಿವಿಧ ರೀತಿಯ ವೀಸಾಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ-
- ಸಂದರ್ಶಕರು ಅಥವಾ ವಿಸಿಟರ್ ವೀಸಾ: ಪ್ರವಾಸ, ವಿಹಾರ ಅಥವಾ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡುವ ಉದ್ದೇಶದಿಂದ ನ್ಯೂಜಿಲೆಂಡ್‌ಗೆ ಭೇಟಿ ನೀಡುವವರು ವಿಸಿಟರ್ ವೀಸಾಗೆ ಅರ್ಜಿ ಸಲ್ಲಿಸಬೇಕು. ಈ ವೀಸಾ ಅಡಿಯಲ್ಲಿ ಪ್ರವಾಸಿಗರು ದೇಶದಲ್ಲಿ ಗರಿಷ್ಠ 9 ತಿಂಗಳ ಅವಧಿಯವರೆಗೆ ಉಳಿದುಕೊಳ್ಳಲು ಅವಕಾಶವಿರುತ್ತದೆ
- ವರ್ಕ್ ವೀಸಾ: ಕೆಲಸಕ್ಕಾಗಿ ನ್ಯೂಜಿಲ್ಯಾಂಡ್‌ಗೆ ಭೇಟಿ ನೀಡುತ್ತಿದ್ದರೆ ವ್ಯಕ್ತಿಗಳು ತಾತ್ಕಾಲಿಕ ವರ್ಕ್ ವೀಸಾವನ್ನು ಪಡೆಯಬಹುದು
- ವಿದ್ಯಾರ್ಥಿ ವೀಸಾ: ನ್ಯೂಜಿಲೆಂಡ್‌ನಲ್ಲಿ ಅಧ್ಯಯನ ಮಾಡಲು ಪ್ರಯಾಣಿಸುತ್ತಿರುವ ವ್ಯಕ್ತಿಗಳು ಸ್ಟೂಡೆಂಟ್ ವೀಸಾ ಪಡೆಯಬೇಕು
- ಟ್ರಾನ್ಸಿಟ್ ವೀಸಾ: ಇನ್ನೊಂದು ದೇಶಕ್ಕೆ ಪ್ರಯಾಣಿಸುವಾಗ ನ್ಯೂಜಿಲೆಂಡ್‌ನಲ್ಲಿ ನಿಲ್ಲಿಸುವ ವ್ಯಕ್ತಿಗಳು ಟ್ರಾನ್ಸಿಟ್ ವೀಸಾವನ್ನು ಪಡೆಯಬೇಕು
- ಬಿಸಿನೆಸ್ ಮತ್ತು ಹೂಡಿಕೆ ವೀಸಾ: ಉದ್ಯಮಿ ಅಥವಾ ಹೂಡಿಕೆದಾರರಾಗಿ, ನೀವು ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಬಯಸಿದರೆ. ದೇಶದಲ್ಲಿ ನಿವಾಸವನ್ನು ಪಡೆಯಲು ನೀವು ಈ ವೀಸಾಗೆ ಅಪ್ಲೈ ಮಾಡಬೇಕು.
- ನಿವಾಸಿ ವೀಸಾ:ಈ ವೀಸಾ ನಿಮಗೆ ನ್ಯೂಜಿಲೆಂಡ್‌ನಲ್ಲಿ ಶಾಶ್ವತವಾಗಿ ಬದುಕಲು ಅರ್ಹತೆ ನೀಡುತ್ತದೆ. ಕೆಲವು ಪ್ರಯಾಣದ ಪರಿಸ್ಥಿತಿಗಳ ಆಧಾರದ ಮೇಲೆ, ಎರಡು ರೀತಿಯ ವೀಸಾಗಳಿವೆ:
- ನಿವಾಸಿ ವೀಸಾ ನಿಮಗೆ ನಿರ್ದಿಷ್ಟ ಅವಧಿಗೆ ದೇಶದೊಳಗೆ ಅನೇಕ ಪ್ರವೇಶಗಳನ್ನು ಅನುಮತಿಸುತ್ತದೆ, ಸಾಮಾನ್ಯವಾಗಿ 24 ತಿಂಗಳು, 5 ವರ್ಷಗಳು ಅಥವಾ 10 ವರ್ಷಗಳು.
- ಯಾವುದೇ ನಿರ್ದಿಷ್ಟ ಸಮಯದ ಮಿತಿಯಿಲ್ಲದೆ ದೇಶಕ್ಕೆ ಅನೇಕ ಪ್ರವೇಶಗಳನ್ನು ಅನುಮತಿಸುವ ಶಾಶ್ವತ ನಿವಾಸಿ ವೀಸಾ.
ನ್ಯೂಜಿಲ್ಯಾಂಡ್‌ಗೆ ವೀಸಾ ಪ್ರಕ್ರಿಯೆ
- ಹಂತ 1: ಆನ್‌ಲೈನ್‌ನಲ್ಲಿ ವೀಸಾ ಅಪ್ಲಿಕೇಶನ್ ಫಾರ್ಮ್ ಪಡೆಯಿರಿ.
- ಹಂತ 2: ಸಂಬಂಧಿತ ವಿವರಗಳು ಮತ್ತು ಫೋಟೋಗಳೊಂದಿಗೆ ಫಾರ್ಮ್ ಭರ್ತಿ ಮಾಡಿ.
- ಹಂತ 3: ಹತ್ತಿರದ ನ್ಯೂಜಿಲ್ಯಾಂಡ್ ವೀಸಾ ಅಪ್ಲಿಕೇಶನ್ ಕೇಂದ್ರದಲ್ಲಿ ಎಲ್ಲಾ ಫಾರ್ಮ್ ಮತ್ತು ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
- ಹಂತ 4: ಅಗತ್ಯವಿರುವ ವೀಸಾ ಶುಲ್ಕವನ್ನು ಪಾವತಿಸಿ.
ವೀಸಾ ಅಪ್ಲಿಕೇಶನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು:
- ಸಂಬಂಧಿತ ವಿವರಗಳೊಂದಿಗೆ ಸರಿಯಾಗಿ ಭರ್ತಿ ಮಾಡಲಾದ ವೀಸಾ ಅಪ್ಲಿಕೇಶನ್ ಫಾರ್ಮ್
- 6-ತಿಂಗಳ ಅವಧಿ ಇರುವ ಪಾಸ್‌ಪೋರ್ಟ್ ಮತ್ತು ಲಭ್ಯವಿದ್ದರೆ ಹಳೆಯ ಪಾಸ್‌ಪೋರ್ಟ್
- ಪಾಸ್‌ಪೋರ್ಟ್ ಸೈಜ್ ಫೋಟೋ
- ಭೇಟಿಯ ಉದ್ದೇಶವನ್ನು ನಮೂದಿಸುವ ಕವರ್ ಪತ್ರ
- ಬೆಂಬಲಿತ ಡಾಕ್ಯುಮೆಂಟ್ ಪುರಾವೆಗಳು (ಉದಾ. ಅಧ್ಯಯನ ವೀಸಾಗಾಗಿ ಪ್ರವೇಶದ ಪುರಾವೆ ಅಥವಾ ಕೆಲಸದ ವೀಸಾಗಾಗಿ ಉದ್ಯೋಗದ ಪುರಾವೆ)
- ಪ್ರಯಾಣದ ಅವಶ್ಯಕತೆಗಳಿಗೆ ಸಾಕಷ್ಟು ಹಣದ ಪುರಾವೆ
- ರಿಟರ್ನ್ ಏರ್ ಟಿಕೆಟ್‌ಗಳು
ನೀವು ವೀಸಾ ಅಪ್ಲಿಕೇಶನ್ ಕೇಂದ್ರದಿಂದ ವೀಸಾವನ್ನು ಸಂಗ್ರಹಿಸಬಹುದು ಅಥವಾ ಅದನ್ನು ನಿಮ್ಮ ವಿಳಾಸಕ್ಕೆ ತಲುಪಿಸಬಹುದು.
ಈ ಪ್ರಯಾಣ ಸಲಹೆಗಳೊಂದಿಗೆ ನ್ಯೂಜಿಲ್ಯಾಂಡ್‌ನ ಅದ್ಭುತಗಳನ್ನು ಕಂಡುಕೊಳ್ಳಿ
ನ್ಯೂಜಿಲೆಂಡ್‌ಗೆ ಭೇಟಿ ನೀಡಲು ವರ್ಷದ ಯಾವುದೇ ಸಮಯವೂ ಸೂಕ್ತವಾಗಿದೆ. ಆದಾಗ್ಯೂ, ಆ ದೇಶವು ಬೇರೊಂದು ಗೋಳಾರ್ಧದಲ್ಲಿ ಇರುವುದರಿಂದ, ಅಲ್ಲಿನ ಋತುಗಳು ಭಾರತದಲ್ಲಿ ಇರುವುದಕ್ಕೆ ವಿರುದ್ಧವಾಗಿರುತ್ತವೆ. ಆದ್ದರಿಂದ, ನ್ಯೂಜಿಲೆಂಡ್‌ನಲ್ಲಿ ಸುಂದರ ರಜಾದಿನಗಳನ್ನು ಆನಂದಿಸಲು, ಈ ಸಲಹೆಗಳನ್ನು ಅನುಸರಿಸಿ-
- ನ್ಯೂಜಿಲೆಂಡ್‌ನ ಬೇಸಿಗೆಯು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಇರುತ್ತದೆ. ಹವಾಮಾನವು ಬೆಚ್ಚಗಿನ ಮತ್ತು ಆಹ್ಲಾದಕರವಾಗಿದೆ; ಇದು ಎಲ್ಲಾ ಸಾಹಸ ಚಟುವಟಿಕೆಗಳಿಗೆ ಪರಿಪೂರ್ಣವಾಗಿದೆ
- ಮಾರ್ಚ್‌ನಿಂದ ಮೇ ವರೆಗೆ ಇರುವ ಶರತ್ಕಾಲವು ಆರಾಮದಾಯಕ ರಜಾದಿನಗಳನ್ನು ಕಳೆಯಲು ಸೂಕ್ತವಾದ ಸಮಯವಾಗಿದೆ.
- ಚಳಿಗಾಲದ ತಿಂಗಳುಗಳು ಜೂನ್ ಮತ್ತು ಆಗಸ್ಟ್ ನಡುವೆ ಇರುತ್ತವೆ - ಹಿಮದಿಂದ ಆವರಿಸಲ್ಪಟ್ಟ ಪರ್ವತಗಳಲ್ಲಿ ಹೈಕಿಂಗ್ ಮತ್ತು ಸ್ಕೀಯಿಂಗ್ ಮಾಡಲು ಉತ್ತಮ ಸಮಯ.
- ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ವಸಂತಕಾಲದಲ್ಲಿ ಈ ದೇಶಕ್ಕೆ ಭೇಟಿ ನೀಡಿ, ಅಲ್ಲಿ ನೀವು ನೀಲಿ ಆಕಾಶ ಮತ್ತು ಹೂ ಬಿಟ್ಟ ಮರಗಳನ್ನು ನೋಡಬಹುದು. ಆದ್ದರಿಂದ, ಆ ದೇಶದ ಋತುಗಳಿಗೆ ಅನುಗುಣವಾಗಿರುವ ಹಾಗೆ ನಿಮ್ಮ ಟ್ರಾವೆಲ್ ಪ್ಲಾನ್‌ಗಳನ್ನು ರೂಪಿಸಿ.
- ಆಹಾರದಿಂದ ಹಿಡಿದು ಸ್ಮರಣಿಕೆಗಳ ಶಾಪಿಂಗ್‌ವರೆಗೆ ಎಲ್ಲವೂ ತುಂಬಾ ದುಬಾರಿಯಾಗಿರಬಹುದು. ನೀವು ಅದಕ್ಕೆ ಅನುಗುಣವಾಗಿ ನಿಮ್ಮ ಬಜೆಟ್ ಪ್ಲಾನ್ ಮಾಡಬೇಕು. ನಿಮ್ಮ ಊಟವನ್ನು ತಯಾರಿಸುವುದು ಆರ್ಥಿಕ ಆಯ್ಕೆಯಾಗಿರಬಹುದು.
- ನಗರಗಳನ್ನು ಅನ್ವೇಷಿಸಲು, ನೀವು ಇಂಟರ್‌ಸಿಟಿ ಬಸ್‌ಗಳು ಮತ್ತು ಫೆರ್ರಿಗಳನ್ನು ಅವಲಂಬಿಸಬಹುದು. ಕಾರನ್ನು ಬಾಡಿಗೆಗೆ ಪಡೆಯುವುದು ಕೂಡ ಅನುಕೂಲಕರ ಆಯ್ಕೆಯಾಗಿದೆ. ದೇಶದ ಡ್ರೈವಿಂಗ್ ನಿಯಮಗಳನ್ನು ತಿಳಿದುಕೊಳ್ಳಿ.
- ವಿಶೇಷವಾಗಿ ಪಾಲಿನೇಷಿಯನ್ ಸೊಸೈಟಿಗಳಲ್ಲಿ ಪವಿತ್ರ ಸ್ಥಳವಾದ ಮರೆಗೆ ಭೇಟಿ ನೀಡುವಾಗ, ಸ್ಥಳೀಯ ಪದ್ಧತಿಗಳ ಬಗ್ಗೆ ನಿಮಗೆ ತಿಳಿದಿದ್ದರೆ ಉತ್ತಮ. ಸ್ಥಳೀಯರೊಂದಿಗೆ ಸುಲಭ ಸಂವಹನಕ್ಕಾಗಿ ಸ್ಥಳೀಯ ಭಾಷೆ, ಮೌರಿನಲ್ಲಿ ಕೆಲವು ವಾಕ್ಯಗಳನ್ನು ಕಲಿಯಿರಿ.
ನ್ಯೂಜಿಲ್ಯಾಂಡ್ ಬಗ್ಗೆ ತ್ವರಿತ ಸಂಗತಿಗಳು
|
ರಾಜಧಾನಿ
|
ವೆಲ್ಲಿಂಗ್ಟನ್
|
|
ಅಧಿಕೃತ ಭಾಷೆಗಳು
|
ಇಂಗ್ಲಿಷ್, ಮೌರಿ
|
|
ಕರೆನ್ಸಿ
|
ನ್ಯೂಜಿಲ್ಯಾಂಡ್ ಡಾಲರ್
|
|
ಸಾರಿಗೆ ವಿಧಾನಗಳು
|
ಬಸ್‌ಗಳು, ರೈಲುಗಳು, ಫೇರಿಗಳು, ಟ್ರಾಮ್‌ಗಳು
|
|
ಸಮಯದ ವ್ಯತ್ಯಾಸ
|
ಭಾರತದಿಂದ 7 ಗಂಟೆಗಳು ಮತ್ತು 30 ನಿಮಿಷಗಳು ಮುಂಚಿತವಾಗಿ
|
|
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
|
ವೆಲ್ಲಿಂಗ್ಟನ್ ಇಂಟರ್ನ್ಯಾಷನಲ್ ಏರ್ಪೋರ್ಟ್, ಆಕ್ಲೆಂಡ್ ಏರ್ಪೋರ್ಟ್, ಕ್ರೈಸ್ಟ್‌ಚರ್ಚ್ ಇಂಟರ್ನ್ಯಾಷನಲ್ ಏರ್ಪೋರ್ಟ್, ಕ್ವೀನ್ಸ್‌ಟೌನ್ ಇಂಟರ್ನ್ಯಾಷನಲ್ ಏರ್ಪೋರ್ಟ್, ಡುನೆಡಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್
|
ನ್ಯೂಜಿಲ್ಯಾಂಡ್‌ನಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು
ನ್ಯೂಜಿಲ್ಯಾಂಡ್ ಪೆಸಿಫಿಕ್ ಮಹಾಸಾಗರದ ನೈಋತ್ಯ ಭಾಗದಲ್ಲಿರುವ ದ್ವೀಪ ದೇಶವಾಗಿದೆ. ಉತ್ತಮವಾಗಿ ಅಭಿವೃದ್ಧಿಪಡಿಸಿದ ಮೂಲಸೌಕರ್ಯಕ್ಕೆ ಧನ್ಯವಾದಗಳು, ದೇಶವು ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ ಮತ್ತು ಪ್ರತಿ ಪ್ರಯಾಣಿಕರು ಈ ಕೆಳಗಿನ ಸ್ಥಳಗಳಲ್ಲಿ ವಿಶಿಷ್ಟ ಮತ್ತು ಆಕರ್ಷಕ ಪ್ರಯಾಣದ ಅನುಭವವನ್ನು ಎದುರು ನೋಡಬಹುದು-
- ಬೇ ಆಫ್ ಐಲ್ಯಾಂಡ್ಸ್: 140 ಉಪ ಉಷ್ಣವಲಯದ ದ್ವೀಪಗಳನ್ನು ಹೊಂದಿರುವ ಈ ಸುಂದರವಾದ ಸ್ಥಳವು ಮೀನುಗಾರಿಕೆ, ವಿಹಾರ ನೌಕಾಯಾನ, ಹಾಯಿದೋಣಿ ವಿಹಾರ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ
- ಆಕ್‌ಲ್ಯಾಂಡ್ ನಗರ: ಸ್ವಚ್ಛವಾದ ಕಡಲತೀರಗಳು, ಸುಪ್ತ ಜ್ವಾಲಾಮುಖಿ ಪ್ರದೇಶಗಳು, ಮಳೆಕಾಡುಗಳು ಮತ್ತು ವೈವಿಧ್ಯಮಯ ವನ್ಯಜೀವಿಗಳು, ಜನನಿಬಿಡ ಕಾಸ್ಮೋಪಾಲಿಟನ್ ನಗರವಾದ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್‌ನ ಅದ್ಭುತ ಪ್ರಕೃತಿ ಧಾಮಗಳನ್ನು ವೀಕ್ಷಿಸಿ
- ರೋಟೊರುವಾ: ಇದು ಉತ್ತರ ದ್ವೀಪದಲ್ಲಿರುವ ರೊಟೊರುವಾ ಸರೋವರದ ಸಮೀಪವಿರುವ ಪಟ್ಟಣವಾಗಿದ್ದು, ಇಲ್ಲಿ ನೀವು ಮಾವೋರಿ ಸಂಸ್ಕೃತಿಯ ಬಗ್ಗೆ ತಿಳಿಯಬಹುದು. ಈ ಸ್ಥಳವು ಬಿಸಿ ನೀರಿನ ಬುಗ್ಗೆಗಳು ಮತ್ತು ಜ್ವಾಲಾಮುಖಿ ಕುಳಿ ರಚನೆಗಳಂತಹ ಭೂಉಷ್ಣ ವಿಸ್ಮಯಗಳಿಗೆ ಪ್ರಸಿದ್ಧವಾಗಿದೆ
- ಕ್ವಿನ್‌ಸ್ಟೌನ್ ಸಿಟಿ: ಸಾಹಸ ಪ್ರೇಮಿಗಳಿಗೆ ಪ್ರೀತಿಪಾತ್ರ ತಾಣವಾಗಿರುವ ಕ್ವೀನ್‌ಸ್ಟೌನ್ ಬಂಜೀ ಜಂಪಿಂಗ್, ರಾಕ್ ಕ್ಲೈಂಬಿಂಗ್, ಪ್ಯಾರಾಗ್ಲೈಡಿಂಗ್, ಮೌಂಟೇನ್ ಬೈಕಿಂಗ್ ಮತ್ತು ಇನ್ನೂ ಅನೇಕ ಚಟುವಟಿಕೆಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ. ಜೊತೆಗೆ, ಇಲ್ಲಿನ ದ್ರಾಕ್ಷಿ ತೋಟಗಳು ಮತ್ತು ಗಮನಾರ್ಹ ಗಣಿಗಾರಿಕೆ ಪಟ್ಟಣಗಳನ್ನೂ ನೀವು ವೀಕ್ಷಿಸಬಹುದು
- ಫ್ರಾಂಜ್ ಜೋಸೆಫ್ ಮತ್ತು ಫಾಕ್ಸ್ ಹಿಮನದಿಗಳು: ಇವು ಜಗತ್ತಿನಲ್ಲೇ ಅತ್ಯಂತ ಸುಲಭವಾಗಿ ತಲುಪಬಹುದಾದ ಕೆಲವು ಹಿಮನದಿ ಮೂಲದ ನದಿಗಳಾಗಿವೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಈ ಸ್ಥಳವು ಹೆಲಿ-ಹೈಕಿಂಗ್ ಮತ್ತು ಕ್ಯಾಂಪಿಂಗ್‌ಗೆ ಸೂಕ್ತವಾಗಿದೆ
ಇತರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು: