ಸರಿಯಾದ ಟ್ರಾವೆಲ್ ಕವರ್‌ನೊಂದಿಗೆ ಟರ್ಕಿಗೆ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಿ
ಟರ್ಕಿ ದೇಶವು ಕಡಲತೀರ ಇಷ್ಟಪಡುವವರು, ಆಹಾರ ಪ್ರಿಯರು ಮತ್ತು ಪ್ರವಾಸ ಆಸಕ್ತರಿಗೆ ಅತ್ಯಂತ ಜನಪ್ರಿಯ ರಜಾದಿನ ಗಮ್ಯಸ್ಥಾನ ಆಗಿದೆ. ಇದು ಯುರೋಪಿಯನ್ ಮತ್ತು ಏಷ್ಯನ್ ಸಂಸ್ಕೃತಿಗಳ ಸುಂದರ ಸಮ್ಮಿಶ್ರಣ. ರಮಣೀಯ ಪ್ರಕೃತಿ ಸೌಂದರ್ಯ, ಸುಂದರವಾದ ಕರಾವಳಿ ತೀರ, ನೈಜ ಟರ್ಕಿಶ್ ಖಾದ್ಯಗಳು ಮತ್ತು ಶ್ರೀಮಂತ ಐತಿಹಾಸಿಕ ಪರಂಪರೆಯೊಂದಿಗೆ, ಇದು ಪ್ರತಿವರ್ಷ ಜಗತ್ತಿನ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರಾಚೀನ ಚರ್ಚ್‌ಗಳು ಮತ್ತು ನೀಲಿ ಮಸೀದಿಗಳು ಈ ದೇಶಕ್ಕೆ ಇನ್ನಷ್ಟು ಮೆರುಗು ನೀಡುತ್ತವೆ. ಟರ್ಕಿಯ ಸುಮಾರು 13 ತಾಣಗಳನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ UNESCO ಸೇರಿಸಿದೆ. ವಿದೇಶಿ ಪ್ರವಾಸ ಮಾಡುವಾಗ ನೀವು ಎದುರಿಸಲು ಬಯಸದ ಕೊನೆಯ ವಿಷಯವೆಂದರೆ ಅನಿರೀಕ್ಷಿತ ಖರ್ಚುಗಳು. ವಾಲೆಟ್ ಕಳೆದುಕೊಳ್ಳುವುದರಿಂದ ಹಿಡಿದು ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮುಂತಾದ ಯಾವುದೇ ಸವಾಲುಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ಇಂಟರ್‌ನ್ಯಾಶನಲ್ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ನೆರವಾಗುತ್ತದೆ; ನಿಮ್ಮ ಇಂಟರ್‌ನ್ಯಾಶನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಅದನ್ನು ಕವರ್ ಮಾಡಿದರೆ, ನಿಮ್ಮ ಓವರ್‌ಸೀಸ್ ಟ್ರಿಪ್ ಸಮಯದಲ್ಲಿ ಉಂಟಾಗುವ ಯಾವುದೇ ಹೆಚ್ಚುವರಿ ವೆಚ್ಚಗಳ ರಿಯಂಬರ್ಸ್‌ಮೆಂಟ್ ಆಗುತ್ತದೆ. ಟ್ರಿಪ್ ರದ್ದತಿ ಅಥವಾ ವಿಳಂಬ, ವಿದೇಶದಲ್ಲಿ ಕ್ಯಾಶ್‌ಲೆಸ್ ಆಸ್ಪತ್ರೆ ದಾಖಲಾತಿ, ಅಥವಾ ಮೊದಲೇ ಇರುವ ಕಾಯಿಲೆಗಳಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಇವು ತುಂಬಾ ಉಪಯುಕ್ತ ಆಗಬಹುದು.
ಕೇರ್ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಹಲವಾರು ವೈದ್ಯಕೀಯ ಅಥವಾ ವೈದ್ಯಕೀಯೇತರ ಅಪಾಯಗಳ ಸಮಯದಲ್ಲಿ ಉತ್ತಮ ರಕ್ಷಣೆಯನ್ನು ನೀಡುವ ಯೋಜನೆಯನ್ನು ಒದಗಿಸುತ್ತದೆ. ಪಾಲಿಸಿ ಕವರೇಜ್ ಅಡಿಯಲ್ಲಿ ಚೆಕ್-ಇನ್ ಆದ ಬ್ಯಾಗೇಜ್ ನಷ್ಟ, ಟ್ರಿಪ್ ವಿಳಂಬ/ರದ್ದತಿ, ಪಾಸ್‌ಪೋರ್ಟ್ ಕಳೆದುಹೋದ ಸಂದರ್ಭದಲ್ಲಿ ಸಹಾಯ ಇತ್ಯಾದಿಗಳಿಗೆ ತಕ್ಷಣದ ಕ್ಯಾಶ್‌ಲೆಸ್ ಆಸ್ಪತ್ರೆ ದಾಖಲಾತಿಯನ್ನು ನಾವು ಒದಗಿಸುತ್ತೇವೆ. ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿರಿಸಲು ನೀವು ಕೈಗೆಟಕುವ ಪ್ರೀಮಿಯಂನಲ್ಲಿ ಪಾಲಿಸಿಯನ್ನು ಪಡೆಯಬಹುದು.
ಟರ್ಕಿಗೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವೇ?
ಹೌದು, ನೀವು ಟರ್ಕಿಯ ಶ್ರೀಮಂತಿಕೆಯನ್ನು ಅನ್ವೇಷಿಸಲು ಬಯಸಿದರೆ, ನಿಮ್ಮ ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಮೊದಲು ಟ್ರಾವೆಲ್ ಇನ್ಶೂರೆನ್ಸ್ ಪಡೆಯಬೇಕು. ಇದು ಯುರೋಪಿಯನ್ ಒಕ್ಕೂಟದ (EU) ಸದಸ್ಯರಲ್ಲಿ ಒಂದಾಗಿದೆ, ಇದು ಟರ್ಕಿ ವೀಸಾಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ, ವೀಸಾಗೆ ಅಪ್ಲೈ ಮಾಡುವ ಮೊದಲು, ವಿಶಿಷ್ಟ ಪ್ರಯೋಜನಗಳೊಂದಿಗೆ ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಿ. ಇದಲ್ಲದೆ, ಇದು ಹಲವಾರು ಇತರ ತುರ್ತುಸ್ಥಿತಿಗಳಿಗೆ ಬ್ಯಾಕಪ್ ಪ್ಲಾನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ತೊಂದರೆ ರಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಎಕ್ಸ್‌ಪ್ಲೋರ್ ಯುರೋಪ್ - ಟರ್ಕಿಗಾಗಿ ಟ್ರಾವೆಲ್ ಇನ್ಶೂರೆನ್ಸ್
ಟರ್ಕಿಯ ಅಪರೂಪದ ವೈವಿಧ್ಯಮಯ ತಾಣಗಳ ಸೌಂದರ್ಯವನ್ನು, ಐತಿಹಾಸಿಕ ತಾಣಗಳನ್ನು ಆಸ್ವಾದಿಸುವುದು ಮತ್ತು ಅಲ್ಲಿ ಶಾಪಿಂಗ್ ಮಾಡುವುದು ನಿಮ್ಮ ಜೇಬಿಗೆ ಹೊರೆಯಾಗದಂತೆ ಬಜೆಟ್-ಸ್ನೇಹಿಯಾಗಿ ಆಗಬಲ್ಲದು. ಆದರೂ, ನಿಮ್ಮ ಟರ್ಕಿ ವಾಸ್ತವ್ಯದ ಸಮಯದಲ್ಲಿ ಯಾವುದಾದರೂ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ ನಿರೀಕ್ಷೆಗಿಂತ ಹೆಚ್ಚು ಹಣ ಖರ್ಚಾಗಬಹುದು. ಅದಕ್ಕಾಗಿಯೇ ಇಂಟರ್‌ನ್ಯಾಶನಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಪಡೆಯುವುದು ಒಳ್ಳೆಯದು. ಆದರೂ, ಟರ್ಕಿಯ ಟ್ರಾವೆಲ್ ಪಾಲಿಸಿಯ ಪ್ರಕಾರ, ವಿದೇಶಿ ಪ್ರಯಾಣಿಕರು ಟರ್ಕಿ ಒಳಗೆ ಪ್ರವೇಶಿಸಲು ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕು.
ಕೇರ್ ಹೆಲ್ತ್ ಇನ್ಶೂರೆನ್ಸ್ ಎಕ್ಸ್‌ಪ್ಲೋರ್ ಯುರೋಪ್ ಅಡಿಯಲ್ಲಿ ಟರ್ಕಿಗಾಗಿ ಸಮಗ್ರ ಟ್ರಾವೆಲ್ ಕವರ್ ಅನ್ನು ಒದಗಿಸುತ್ತದೆ - ರಜಾದಿನ ಅಥವಾ ಬಿಸಿನೆಸ್‌ಗಾಗಿ ಪ್ರಯಾಣಿಸುವಾಗ ನಿಮ್ಮನ್ನು ನೋಡಿಕೊಳ್ಳುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ.
ಟರ್ಕಿ ಟ್ರಾವೆಲ್ ಕವರ್ ಖರೀದಿಸುವ ಫೀಚರ್‌ಗಳು
ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಮೊದಲು ಮತ್ತು ರಜಾದಿನಕ್ಕೆ ಹೋಗುವ ಮೊದಲು ಅದರ ಕೆಲವು ಫೀಚರ್‌ಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ:
- ಕೈಗೆಟಕುವ ಪ್ರೀಮಿಯಂ: ಟರ್ಕಿಯ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಪ್ರಯಾಣದ ಬಜೆಟ್‌ಗೆ ಹೊಂದಿಕೆಯಾಗುತ್ತದೆ ಏಕೆಂದರೆ ಇದು ಇತರ ಅಗತ್ಯತೆಗಳನ್ನು ಬಲಿಯಾಗದೆ ಕಡಿಮೆ ಬೆಲೆಯನ್ನು ಒದಗಿಸುತ್ತದೆ.
- ಆಟೋಮ್ಯಾಟಿಕ್ ಟ್ರಿಪ್ ವಿಸ್ತರಣೆ: ಪಾಲಿಸಿಯು ದೀರ್ಘಾವಧಿಯ ಆಸ್ಪತ್ರೆ ದಾಖಲಾತಿ, ನೈಸರ್ಗಿಕ ವಿಕೋಪ ಅಥವಾ ದುರದೃಷ್ಟಕರ ಮರಣದ ಸಮಯದಲ್ಲಿ ಸತತ 7 ದಿನಗಳವರೆಗೆ ಟ್ರಾವೆಲ್ ಕವರ್ ಅನ್ನು ಆಟೋಮ್ಯಾಟಿಕ್ ಆಗಿ ವಿಸ್ತರಿಸುತ್ತದೆ.
- ಕ್ಯಾಶ್‌ಲೆಸ್ ಕ್ಲೈಮ್ ಪ್ರಕ್ರಿಯೆ: ನಮ್ಮ ವ್ಯಾಪಕ ಹೆಲ್ತ್‌ಕೇರ್ ಪೂರೈಕೆದಾರರ ನೆಟ್‌ವರ್ಕ್ ತುರ್ತು ಪರಿಸ್ಥಿತಿಗಳಲ್ಲಿ ನಮಗೆ ಕರೆ ಮಾಡುವ ಮೂಲಕ ಕ್ಯಾಶ್‌ಲೆಸ್ ಒಳ-ರೋಗಿ ಆರೈಕೆ ಸೌಲಭ್ಯವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
- ಸಮಗ್ರ ರಕ್ಷಣೆ: ನಿಮಗೆ ಹೆಲ್ತ್‌ಕೇರ್ ಸೇವೆಗಳು ಅಥವಾ ಚೆಕ್ಡ್-ಇನ್ ಬ್ಯಾಗೇಜ್ ನಷ್ಟದಂತಹ ವೈದ್ಯಕೀಯೇತರ ತುರ್ತುಸ್ಥಿತಿಯಲ್ಲಿ ಸಹಾಯದ ಅಗತ್ಯವಿದ್ದರೆ, ನಿಮ್ಮ ಪ್ರಯಾಣದ ಪ್ರತಿ ಹಂತದಲ್ಲಿ ನಾವು ನಿಮ್ಮನ್ನು ಆರ್ಥಿಕವಾಗಿ ರಕ್ಷಿಸುತ್ತೇವೆ.
- ಬಳಕೆಯ ಆ್ಯಡ್-ಆನ್ ಪ್ರಯೋಜನಗಳು: ಈ ಪಾಲಿಸಿಯು PED ಕವರೇಜ್, ವೀಸಾ ಶುಲ್ಕಗಳ ರಿಫಂಡ್ ಮುಂತಾದ ಐಚ್ಛಿಕ ಕವರ್‌ಗಳೊಂದಿಗೆ ಆಗಾಗ್ಗೆ ಮತ್ತು ದೀರ್ಘಾವಧಿಯ ಪ್ರಯಾಣಗಳನ್ನು ಕಸ್ಟಮೈಜ್ ಮಾಡಲು ಮತ್ತು ಸುರಕ್ಷಿತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
*ಪ್ರಾಡಕ್ಟ್ ಫೀಚರ್‌ಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಬ್ರೋಶರ್ ನೋಡಿ.
ಟರ್ಕಿಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ವಿವರಗಳು
| ವಿವರಣೆ |
ಎಕ್ಸ್‌ಪ್ಲೋರ್ ಯುರೋಪ್ |
|
ಇನ್ಶೂರೆನ್ಸ್ ಮೊತ್ತ
|
€30K ಮತ್ತು 100K (ಪ್ರೀಮಿಯಂ ಪ್ರಕಾರ ಬದಲಾಗುತ್ತದೆ)
|
|
ಪ್ರಯಾಣದ ಆಯ್ಕೆಗಳು
|
Yes
Yes
|
|
ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್)
|
ಕನಿಷ್ಠ ಮಗು- 1 ದಿನ ವಯಸ್ಕರು- 18 ವರ್ಷಗಳು
ಗರಿಷ್ಠ ಮಗು- 24 ವರ್ಷಗಳು ವಯಸ್ಕರು- ಜೀವಮಾನ
|
|
ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್)
|
ಕನಿಷ್ಠ ಮಗು- 1 ದಿನ ವಯಸ್ಕರು- 18 ವರ್ಷಗಳು
ಗರಿಷ್ಠ ಮಗು- 24 ವರ್ಷಗಳು ವಯಸ್ಕರು- ಜೀವಮಾನ
|
*ಸಿಂಗಲ್ ಟ್ರಿಪ್ ಪಾಲಿಸಿಗಳಲ್ಲಿ ಮಾತ್ರ ಕುಟುಂಬದ ಆಯ್ಕೆ ಲಭ್ಯವಿದೆ. ಅರ್ಹತೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪ್ರಾಸ್ಪೆಕ್ಟಸ್ ನೋಡಿ.
ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?
ಟ್ರಾವೆಲ್ ಇನ್ಶೂರೆನ್ಸ್ ಅತ್ಯಂತ ಬೇಸಿಕ್‌ನಿಂದ ಹಿಡಿದು ಅತ್ಯಂತ ಸಂಕೀರ್ಣದವರೆಗೆ ವ್ಯಾಪಕ ಶ್ರೇಣಿಯ ಪ್ರಯಾಣದ ಕಳಕಳಿಗಳನ್ನು ಕವರ್ ಮಾಡುತ್ತದೆ. ಸಮಸ್ಯೆಗಳು ಉಂಟಾದಾಗ, ಅಜ್ಞಾತ ದೇಶದಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನೀವು ಸಂಪನ್ಮೂಲಗಳನ್ನು ಹೊಂದುವ ಸಾಧ್ಯತೆ ಇಲ್ಲ. ನೀವು ನಿಮ್ಮ ಪಾಸ್‌ಪೋರ್ಟ್ ಕಳೆದುಕೊಂಡರೆ ಅಥವಾ ವಿದೇಶದಲ್ಲಿ ಪ್ರಯಾಣಿಸುವಾಗ ಆರೋಗ್ಯ ಸಮಸ್ಯೆಗಳಿಂದಾಗಿ ತುರ್ತು ಸ್ಥಳಾಂತರದ ಅಗತ್ಯವಿದ್ದರೆ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ನೆರವಿಗೆ ಬರುತ್ತದೆ.
ನಾವು ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತೇವೆ. ಇದು ಏನನ್ನು ಕವರ್ ಮಾಡುತ್ತದೆ ಎಂಬುದನ್ನು ಕೆಳಗೆ ಪರಿಶೀಲಿಸಿ:
- ತುರ್ತು ಆಸ್ಪತ್ರೆ ದಾಖಲಾತಿ: ನೀವು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ ವೈದ್ಯಕೀಯ ತುರ್ತುಸ್ಥಿತಿ ಎದುರಾದರೆ, ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನಿಮಗೆ IPD ಮತ್ತು OPD ವೆಚ್ಚಗಳನ್ನು ಒಳಗೊಂಡಂತೆ ಸಂಪೂರ್ಣ ಕವರೇಜ್ ಒದಗಿಸುತ್ತದೆ.
- ಕೋವಿಡ್-19 ಕವರೇಜ್: ನಾವು ಕೋವಿಡ್-19 ಕವರೇಜ್ ಒದಗಿಸುತ್ತೇವೆ, ಇದರಿಂದಾಗಿ ನೀವು ಪ್ಯಾಂಡೆಮಿಕ್ ಭಯವಿಲ್ಲದೆ ನಿಮ್ಮ ಪ್ರಯಾಣವನ್ನು ಆನಂದಿಸಬಹುದು.
- ಪ್ರಯಾಣ ವಿಳಂಬ, ರದ್ದತಿ ಅಥವಾ ಅಡಚಣೆ: ಕವರ್ ಮಾಡಲಾದ ಮೊತ್ತದವರೆಗೆ, ನಿಮ್ಮ ಪ್ರಯಾಣವು ವಿಳಂಬವಾದರೆ, ರದ್ದುಗೊಂಡರೆ ಅಥವಾ ಅಡಚಣೆಯಾದರೆ ನೀವು ಮರುಪಾವತಿಯನ್ನು ಪಡೆಯುತ್ತೀರಿ.
- ಸಹಾನುಭೂತಿಯ ಭೇಟಿ: ವಿದೇಶದಲ್ಲಿ ನಿಮ್ಮ ಇನ್ಶೂರ್ಡ್ ಕುಟುಂಬ ಸದಸ್ಯರಿಗೆ ಚಿಕಿತ್ಸೆಯ ಸಮಯದಲ್ಲಿ ಬೆಂಬಲ ನೀಡಲು ನಾವು ನಿಮಗೆ ಫ್ಲೈಟ್ ಟಿಕೆಟ್ ವೆಚ್ಚಗಳ ರಿಯಂಬರ್ಸ್‌ಮೆಂಟ್ ಸೌಲಭ್ಯದ ಸಹಾಯ ಒದಗಿಸುತ್ತೇವೆ.
- ವೈಯಕ್ತಿಕ ಅಪಘಾತ: ವಿದೇಶ ಪ್ರಯಾಣ ಅನೇಕ ಅನಿಶ್ಚಿತತೆಗಳಿಗೆ ಕಾರಣವಾಗಬಹುದು ಮತ್ತು ಅವುಗಳಲ್ಲಿ ಅಪಘಾತಗಳು ಕೂಡ ಸೇರಿವೆ. ಅಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಆಕಸ್ಮಿಕ ಮರಣ/ತುರ್ತು ಮತ್ತು ತಕ್ಷಣದ ವೈದ್ಯಕೀಯ ಗಮನದ ಅಗತ್ಯವಿರುವ ಶಾಶ್ವತ ಸಂಪೂರ್ಣ ಅಂಗವೈಕಲ್ಯವನ್ನು ನಾವು ಕವರ್ ಮಾಡುತ್ತೇವೆ.
- ಟ್ರಿಪ್ ವಿಳಂಬ, ರದ್ದತಿ ಅಥವಾ ಅಡಚಣೆ: ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಟ್ರಿಪ್ ವಿಳಂಬ, ರದ್ದತಿ ಅಥವಾ ಅಡಚಣೆಗಾಗಿ ನೀವು ಇನ್ಶೂರೆನ್ಸ್ ಮೊತ್ತದವರೆಗೆ ಪರಿಹಾರ ಪಡೆಯುತ್ತೀರಿ.
- ಪಾಸ್‌ಪೋರ್ಟ್ ಮತ್ತು ಚೆಕ್-ಇನ್ ಬ್ಯಾಗೇಜ್ ನಷ್ಟ: ಚೆಕ್-ಇನ್ ಬ್ಯಾಗೇಜ್ ನಷ್ಟ ಅಥವಾ ಚೆಕ್-ಇನ್ ಬ್ಯಾಗೇಜ್ ವಿಳಂಬಕ್ಕಾಗಿ ಇನ್ಶೂರೆನ್ಸ್ ಮೊತ್ತದವರೆಗೆ ಕವರೇಜ್.
- ಹೊಸ ಕವರೇಜ್ ಪ್ರಯೋಜನಗಳು: ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿದ್ದು ನೀವು ಅನಗತ್ಯ ಒತ್ತಡ ಅನುಭವಿಸದೇ ಇರುವುದನ್ನು ಖಚಿತಪಡಿಸಲು ಮಿಸ್ ಆದ ಫ್ಲೈಟ್ ಕನೆಕ್ಷನ್/ಹೈಜಾಕ್ ತೊಂದರೆ ಭತ್ಯೆ/ಆಟೋಮ್ಯಾಟಿಕ್ ಟ್ರಿಪ್ ವಿಸ್ತರಣೆಗೆ ಕವರೇಜ್ ಒದಗಿಸುತ್ತೇವೆ.
*ಕವರೇಜ್‌ಗೆ ಸಂಬಂಧಿಸಿದ ಹೆಚ್ಚಿನ ವಿವರವಾದ ಮಾಹಿತಿಗಾಗಿ ಪಾಲಿಸಿ ಡಾಕ್ಯುಮೆಂಟ್‌ಗಳನ್ನು ನೋಡಿ.
ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನನ್ನು ಕವರ್ ಮಾಡಲಾಗುವುದಿಲ್ಲ?
ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಹೊರಗಿಡುವಿಕೆಗಳನ್ನು ಪರಿಶೀಲಿಸುವುದು ಪ್ರಯೋಜನಕಾರಿಯಾಗಿದೆ. ಕೆಲವು ಹೊರಗಿಡುವಿಕೆಗಳನ್ನು ಕೆಳಗೆ ನೀಡಲಾಗಿದೆ:
- ಡ್ರಗ್ ದುರುಪಯೋಗ: ಟ್ರಿಪ್ ಸಮಯದಲ್ಲಿ ಇನ್ಶೂರ್ಡ್ ಸದಸ್ಯರು ಆಲ್ಕೋಹಾಲ್ ಅಥವಾ ಡ್ರಗ್ ಬಳಕೆ/ದುರುಪಯೋಗ/ದುರ್ಬಳಕೆ ಮಾಡಿದಾಗ ಉಂಟಾಗುವ ವೆಚ್ಚಗಳು.
- ಸ್ವಯಂ ಹಾನಿ: ಯಾವುದೇ ಉದ್ದೇಶಪೂರ್ವಕ ಸ್ವಯಂ ಹಾನಿ, ಆತ್ಮಹತ್ಯೆಯ ಪ್ರಯತ್ನ ಅಥವಾ ಆಸ್ಪತ್ರೆ ದಾಖಲಾತಿ/ಮರಣಕ್ಕೆ ಕಾರಣವಾಗುವ ಯಾವುದೇ ಇತರ ರೀತಿಯ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.
- ಕಾನೂನಿನ ಉಲ್ಲಂಘನೆ: ಗಮ್ಯಸ್ಥ ದೇಶವು ನಿಗದಿಪಡಿಸಿದ ಯಾವುದೇ ಕಾನೂನು ಅಥವಾ ನಿರ್ದಿಷ್ಟ ನಿಯಮಗಳ ಉಲ್ಲಂಘನೆ ಮೂಲಕ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಹಾನಿಯ ವೆಚ್ಚಗಳು.
- ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ ಅಥವಾ ಪರಮಾಣು ಅಪಾಯಗಳು ಅಥವಾ ಅದರ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
- ಅಪಾಯಕಾರಿ ಚಟುವಟಿಕೆಗಳು: ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖ ಆಗಿರದ ಬೆಂಕಿ ಸಾಹಸಗಳ ರೀತಿಯ ಅಪಾಯಕಾರಿ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ಕ್ಲೈಮ್‌ಗಳು.
- ದಂತ ಚಿಕಿತ್ಸೆ: ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಸರ್ಜರಿ ವೆಚ್ಚಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ.
ಗಮನಿಸಿ: ಪ್ಲಾನ್ ಫೀಚರ್‌ಗಳು, ಪ್ರಯೋಜನಗಳು, ಕವರೇಜ್ ಮತ್ತು ಕ್ಲೈಮ್‌ಗಳ ಅಂಡರ್‌ರೈಟಿಂಗ್ ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ಕೈಪಿಡಿ, ಸೇಲ್ಸ್ ಪ್ರಾಸ್ಪೆಕ್ಟಸ್ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ.
ಟರ್ಕಿ ಹೆಲ್ತ್ ಟ್ರಾವೆಲ್ ಇನ್ಶೂರೆನ್ಸ್‌ಗೆ ಪ್ರೀಮಿಯಂ ಎಷ್ಟು?
ಇನ್ಶೂರ್ಡ್ ವ್ಯಕ್ತಿಯು ಪಾವತಿಸಬೇಕಾದ ಪ್ರೀಮಿಯಂ ಅನ್ನು ಪ್ರಯಾಣಿಕರ ವಯಸ್ಸು, ಅವರು ಪ್ರಯಾಣಿಸುತ್ತಿರುವ ದೇಶ, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ಹಲವಾರು ಅಂಶಗಳಿಂದ ನಿರ್ಧರಿಸಲಾಗುತ್ತದೆ.
ಟರ್ಕಿ ಪ್ರಯಾಣಕ್ಕಾಗಿ ಕೇರ್ ಹೆಲ್ತ್ ಇನ್ಶೂರೆನ್ಸ್‌ನ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು ಸಮಂಜಸ ಮತ್ತು ಬಜೆಟ್-ಸ್ನೇಹಿ ಬೆಲೆ ಹೊಂದಿವೆ. CHI ಅವರ ಟರ್ಕಿ ಟ್ರಾವೆಲ್ ಹೆಲ್ತ್‌ಕೇರ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು 10-ದಿನದ ಭೇಟಿಗೆ ಹೊರಟಿರುವ ಒಬ್ಬರೇ ಪ್ರಯಾಣಿಕರಿಗೆ ಸುಮಾರು ₹511* ರಿಂದ ಆರಂಭವಾಗುತ್ತದೆ.
ಉದಾಹರಣೆಗೆ, ನೀವು ಭಾರತದಿಂದ ಟರ್ಕಿಗೆ ಒಂದು ವಾರದ ಮಟ್ಟಿಗೆ ಒನ್-ಟೈಮ್ ಟ್ರಿಪ್‌ಗೆ ಹೋಗುತ್ತಿದ್ದರೆ, $50k ಇನ್ಶೂರೆನ್ಸ್ ಮೊತ್ತದ ಟ್ರಾವೆಲ್ ಇನ್ಶೂರೆನ್ಸ್‌ನ ಅಂದಾಜು ಪ್ರೀಮಿಯಂ ವೆಚ್ಚವನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ:
|
ಇನ್ಶೂರ್ಡ್ ಸದಸ್ಯ(ರು)
|
ವಯಸ್ಸು
|
ಮೊದಲೇ-ಇರುವ ಯಾವುದೇ ರೋಗ
|
ಇನ್ಶೂರೆನ್ಸ್ ಮೊತ್ತ
|
ಪಾಲಿಸಿ ಅವಧಿ
|
ಪ್ರೀಮಿಯಂ ಮೊತ್ತ (ಅಂದಾಜು)
|
|
1
|
30 ವರ್ಷಗಳು
|
ಇಲ್ಲ
|
$50, 000
|
10 ದಿನಗಳು
|
₹ 471*
|
*ಮೇಲೆ ತಿಳಿಸಿದ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಇನ್ಶೂರ್ಡ್ ಸದಸ್ಯರ ಯಾವುದೇ ಮುಂಚಿತ-ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳಿಗೆ ಒಳಪಟ್ಟು ಲೆಕ್ಕ ಹಾಕಲಾಗುತ್ತದೆ. ಕಳೆದ 48 ತಿಂಗಳಲ್ಲಿ ಇನ್ಶೂರ್ಡ್ ಸದಸ್ಯರಿಗೆ ಯಾವುದೇ ರೋಗನಿರ್ಣಯ, ಆಸ್ಪತ್ರೆಗೆ ದಾಖಲಾಗಿಲ್ಲ ಅಥವಾ ಯಾವುದೇ ಚಿಕಿತ್ಸೆ ನೀಡಲಾಗಿಲ್ಲ ಎಂದು ಇದು ಪರಿಗಣಿಸುತ್ತದೆ. ಅಲ್ಲದೆ, ಇನ್ಶೂರ್ಡ್ ವ್ಯಕ್ತಿಯು ಈಗಾಗಲೇ ಈ ಮೊದಲು ಯಾವುದೇ ಟ್ರಾವೆಲ್ ಪಾಲಿಸಿಯನ್ನು ಕ್ಲೈಮ್ ಮಾಡಿದ್ದರೆ ಪ್ರೀಮಿಯಂ ಮೊತ್ತವು ಬದಲಾಗಬಹುದು.
ಕೇರ್ ಹೆಲ್ತ್ ಇನ್ಶೂರೆನ್ಸ್ ಮೂಲಕ ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಖರ್ಚು ಲೆಕ್ಕ ಹಾಕುವುದು ಹೇಗೆ?
ಈ ಐದು ಸುಲಭ ಹಂತಗಳಲ್ಲಿ ನಿಮ್ಮ ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ವೆಚ್ಚವನ್ನು ನೀವು ಲೆಕ್ಕ ಹಾಕಬಹುದು:
ಹಂತ 1: CHIL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಟ್ರಾವೆಲ್ ಇನ್ಶೂರೆನ್ಸ್ ಸೆಕ್ಷನ್‌ಗೆ ಹೋಗಿ ಮತ್ತು 'ಕೊಟೇಶನ್ ಪಡೆಯಿರಿ' ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್, ಹೆಸರು ಮತ್ತು ಇಮೇಲ್ ಅಡ್ರೆಸ್ ಒಳಗೊಂಡಂತೆ ನಿಮ್ಮ ಕಾಂಟಾಕ್ಟ್ ಮಾಹಿತಿ ನಮೂದಿಸಿ, ಆನಂತರ, ಇನ್ಶೂರೆನ್ಸ್ ಮಾಡಬೇಕಾದ ಎಲ್ಲಾ ಸದಸ್ಯರ ವಯಸ್ಸು ನಮೂದಿಸಿ.
ಹಂತ 2: 'ಮುಂದಿನದು' ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರಯಾಣದ ತಾಣಗಳು ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ. ನಿಮ್ಮ ಪಾಲಿಸಿ ಅವಧಿಯು ನಿಮ್ಮ ಪ್ರಯಾಣದ ದಿನಗಳ ಸಂಖ್ಯೆಯಂತೆಯೇ ಇರುತ್ತದೆ.
ಹಂತ 3: ಇನ್ಶೂರ್ಡ್ ಸದಸ್ಯರಿಗೆ ಯಾವುದಾದರೂ ಮೊದಲೇ ಇರುವ ಕಾಯಿಲೆಗಳು ಇದ್ದಾವೆಯೇ ಎಂದು ಟಾಗಲ್‌ನಲ್ಲಿ ಪರಿಶೀಲಿಸಿ.
ಹಂತ 4: ಇನ್ಶೂರೆನ್ಸ್ ಮೊತ್ತ ಆಯ್ಕೆಮಾಡಿ. ಕೇರ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಎರಡು ಇನ್ಶೂರೆನ್ಸ್ ಮೊತ್ತಗಳ ಆಯ್ಕೆ ಒದಗಿಸುತ್ತದೆ: $50k ಮತ್ತು $100k.
ಹಂತ 5: ನಿಮ್ಮ ಲೆಕ್ಕ ಹಾಕಿದ ಪ್ರೀಮಿಯಂ ಪರಿಶೀಲಿಸಿ ಮತ್ತು ಮುಂದುವರಿಯಲು 'ಈಗಲೇ ಖರೀದಿಸಿ' ಕ್ಲಿಕ್ ಮಾಡಿ.
ದಯವಿಟ್ಟು ಗಮನಿಸಿ: ಟರ್ಕಿ ಟ್ರಾವೆಲ್ ಇನ್ಶೂರೆನ್ಸ್‌ಗೆ ನಿಖರವಾದ ಪ್ರೀಮಿಯಂ ವೆಚ್ಚವು ಪ್ರಯಾಣಿಕರ ಸಂಖ್ಯೆ, ಅವರ ವಯಸ್ಸು, ತಲುಪುವ ದೇಶ/ದೇಶಗಳು, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ಹಲವಾರು ಅಂಶಗಳಿಗೆ ಒಳಪಟ್ಟಿರುತ್ತದೆ.
ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಮೊದಲು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಷಯಗಳು
ಟರ್ಕಿಗಾಗಿ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡುವ ಬಗ್ಗೆ ನಿಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಗಮನದಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಅಗತ್ಯ ವಿಷಯಗಳು ಇಲ್ಲಿವೆ:
- ಟ್ರಿಪ್ ಫ್ರೀಕ್ವೆನ್ಸಿ: ಅಪರೂಪಕ್ಕೆ ಒಮ್ಮೆ ಮಾಡುವ ಟ್ರಿಪ್‌ಗೆ ಸಿಂಗಲ್-ಟ್ರಿಪ್ ಇನ್ಶೂರೆನ್ಸ್ ಪ್ಲಾನ್ ಸಾಕಾಗುತ್ತದೆ, ಆದರೆ ಪದೇಪದೇ ವಿಮಾನಯಾನ ಮಾಡುವವರು ಮಲ್ಟಿ-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ಬಹಳ ಪ್ರಯೋಜನಕಾರಿ.
- ಪ್ರಯಾಣದ ಅವಧಿ: ಟರ್ಕಿಯಲ್ಲಿ ನೀವು ಖರ್ಚು ಮಾಡಲು ಯೋಜಿಸುವ ದಿನಗಳ ಸಂಖ್ಯೆಯ ಆಧಾರದ ಮೇಲೆ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಕಡಿಮೆ ಪ್ರಯಾಣ, ಕಡಿಮೆ ಪ್ರೀಮಿಯಂ.
- ವೈದ್ಯಕೀಯ ಇತಿಹಾಸ: ನೀವು ಮೊದಲೇ ಅಸ್ತಿತ್ವದಲ್ಲಿರುವ ಮಾರಣಾಂತಿಕ ಕಾಯಿಲೆಯನ್ನು ಹೊಂದಿದ್ದರೆ, ನೀವು ಆಯ್ಕೆ ಮಾಡುವ ಪಾಲಿಸಿಯು ಅದಕ್ಕೆ ಹೊಂದಿಕೊಳ್ಳುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
- ಹೆಚ್ಚಿನ-ಅಪಾಯದ ವಲಯಗಳು: ನೀವು ಹೆಚ್ಚಿನ ಅಪಾಯದ ವಲಯಗಳಲ್ಲಿರುವ ತಾಣಗಳಿಗೆ ಪ್ರಯಾಣಿಸುತ್ತಿದ್ದರೆ ಹೆಚ್ಚಿನ ಪ್ರೀಮಿಯಂ ಅವಶ್ಯಕತೆಯೊಂದಿಗೆ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿರಿ.
- ಹೊರಗಿಡುವಿಕೆಗಳನ್ನು ಪರಿಶೀಲಿಸಿ: ಟ್ರಿಪ್ ಸಮಯದಲ್ಲಿ, ಪಾಲಿಸಿ ಕ್ಲೈಮ್ ಮಾಡುವಾಗ ಅನಗತ್ಯ ಆಶ್ಚರ್ಯಗಳು ಇಷ್ಟವಾಗದೇ ಇರಬಹುದು. ಹಾಗಾಗಿ, ಅನಗತ್ಯ ಕ್ಲೈಮ್ ನಿರಾಕರಣೆ ತಪ್ಪಿಸಲು ಪಾಲಿಸಿ ಹೊರಗಿಡುವಿಕೆಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಒಳ್ಳೆಯದು.
ಕ್ಲೈಮ್ ಪ್ರಕ್ರಿಯೆ
ಟರ್ಕಿಯ ವೀಸಾಗಳ ವಿಧಗಳು ಯಾವುವು?
ಟರ್ಕಿಯನ್ನು ಅನ್ವೇಷಿಸಲು ವಿವಿಧ ರೀತಿಯ ವೀಸಾಗಳಿವೆ. ತಮ್ಮ ಪ್ರಯಾಣದ ಉದ್ದೇಶವನ್ನು ಪರಿಗಣಿಸುವ ಮೂಲಕ ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಒಬ್ಬರು ಅವುಗಳನ್ನು ಪಡೆಯಬಹುದು. ಟರ್ಕಿಯ ವೀಸಾ ವಿಧಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ:
- ಟರ್ಕಿ ಇ-ವೀಸಾ: ಭಾರತ, USA, UK, UAE, ಹಾಂಗ್ ಕಾಂಗ್, ಪೋರ್ಚುಗಲ್, ನೇಪಾಳ, ನಾರ್ವೆ ಮತ್ತಿತರ 99 ದೇಶಗಳ ನಾಗರಿಕರಿಗೆ ಇ-ವೀಸಾ ಪಡೆಯಲು ಅನುಮತಿ ಇದೆ. ಅಗತ್ಯವಿರುವ ಮಾಹಿತಿ ಭರ್ತಿ ಮಾಡಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಇದನ್ನು ಎಲೆಕ್ಟ್ರಾನಿಕ್ ಆಗಿ ಪಡೆಯಬಹುದು. ಅರ್ಜಿದಾರರ ನೋಂದಾಯಿತ ಇಮೇಲ್ ID ಗೆ ಅಧಿಕಾರಿಗಳು ಅನುಮೋದನೆ ಕಳುಹಿಸುತ್ತಾರೆ. ಆದರೂ, ಪ್ರವೇಶದ ಸಮಯದಲ್ಲಿ ಇ-ವೀಸಾ ಪರಿಶೀಲಿಸುವ ಹಕ್ಕನ್ನು ಪಾಸ್‌ಪೋರ್ಟ್ ನಿಯಂತ್ರಣ ಅಧಿಕಾರಿಗಳು ಹೊಂದಿದ್ದಾರೆ ಮತ್ತು ಅವರಿಗೆ ಏನಾದರೂ ತಪ್ಪು ಮಾಹಿತಿ ಕಂಡುಬಂದರೆ ಪ್ರವೇಶ ನಿರಾಕರಿಸಬಹುದು.
- ಟರ್ಕಿಗಾಗಿ ಟೂರಿಸ್ಟ್/ಬಿಸಿನೆಸ್ ವೀಸಾ: ನಿಮ್ಮ ಟರ್ಕಿ ಪ್ರಯಾಣದ ಪ್ರಾಥಮಿಕ ಉದ್ದೇಶವು ಸಾರಿಗೆ, ಟೂರಿಸ್ಟ್ ಭೇಟಿ, ಬಿಸಿನೆಸ್/ವಾಣಿಜ್ಯ ಸಭೆ, ಸಮಾವೇಶ/ಸೆಮಿನಾರ್/ಸಭೆ, ಹಬ್ಬ/ಉತ್ಸವ/ಪ್ರದರ್ಶನ, ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ-ಕಲಾತ್ಮಕ ಚಟುವಟಿಕೆ, ಅಧಿಕೃತ ಭೇಟಿ ಅಥವಾ ಉತ್ತರ ಸೈಪ್ರಸ್ ಗಣರಾಜ್ಯಕ್ಕೆ ಭೇಟಿ, ಇತ್ಯಾದಿ ಆಗಿದ್ದರೆ, ನೀವು ಈ ವೀಸಾಗೆ ಅಪ್ಲೈ ಮಾಡಬಹುದು.
- ಟರ್ಕಿಶ್ ಸ್ಟೂಡೆಂಟ್ ವೀಸಾ: ಟರ್ಕಿ ಅಥವಾ ಉತ್ತರ ಸೈಪ್ರಸ್ ಗಣರಾಜ್ಯದಲ್ಲಿ ಇಂಟರ್ನ್‌ಶಿಪ್, ಕೋರ್ಸ್ ಅಥವಾ ಬೇರೆ ಶೈಕ್ಷಣಿಕ ಅವಕಾಶ ಪಡೆಯುವುದು ನಿಮ್ಮ ಮುಖ್ಯ ಉದ್ದೇಶವಾಗಿದ್ದರೆ ನೀವು ಈ ವೀಸಾಗೆ ಅಪ್ಲೈ ಮಾಡಬಹುದು.
- ಟರ್ಕಿಗಾಗಿ ವರ್ಕ್ ವೀಸಾ: ಟರ್ಕಿಗೆ ಭೇಟಿ ನೀಡುವ ನಿಮ್ಮ ಪ್ರಮುಖ ಕಾರಣವು ಉದ್ಯೋಗ ಆಗಿದ್ದರೆ ಅಥವಾ ನೀವು ನಿಯೋಜಿತ ಶಿಕ್ಷಣಾರ್ಥಿ, ಕ್ರೀಡಾಪಟು, ಕಲಾವಿದರು, ಫ್ರೀ ಜೋನ್ ಕೆಲಸಗಾರರು, ಪತ್ರಕರ್ತರು ಆಗಿದ್ದರೆ ಅಥವಾ ಮಾಂಟೇಜ್ ಮತ್ತು ರಿಪೇರಿ ಉದ್ದೇಶಗಳಿಗಾಗಿ ಹೊರಟಿದ್ದರೆ ನೀವು ಈ ವೀಸಾಗೆ ಅಪ್ಲೈ ಮಾಡಬಹುದು.
- ಬೇರೆ ವೀಸಾಗಳು: ಮೇಲೆ ಪಟ್ಟಿ ಮಾಡಿರುವ ವರ್ಗಗಳ ಅಡಿಯಲ್ಲಿ ಬಾರದ ವೀಸಾಗಳಿಗೆ ಕೂಡ ನೀವು ಅಪ್ಲೈ ಮಾಡಬಹುದು, ಅವುಗಳೆಂದರೆ ಪುರಾತತ್ವ ಉತ್ಖನನ, ಅನ್ವೇಷಣೆ, ಡಾಕ್ಯುಮೆಂಟರಿ, ಟೂರ್ ಆಪರೇಟರ್ ಪ್ರತಿನಿಧಿ, ವೈದ್ಯಕೀಯ ಚಿಕಿತ್ಸೆ, ಒಡನಾಟ, ಕುಟುಂಬ ಏಕೀಕರಣ, ಸರಕು ವೀಸಾ ಅಥವಾ ಸೀಫೇರರ್ ವೀಸಾ.
ಟರ್ಕಿ ವೀಸಾ ಅಪ್ಲಿಕೇಶನ್‌ಗೆ ಅಗತ್ಯವಿರುವ ಪ್ರಮುಖ ಡಾಕ್ಯುಮೆಂಟ್‌ಗಳು
ಹಲವಾರು ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡದೆ ನೀವು ಆನ್‌ಲೈನ್‌ನಲ್ಲಿ ಟರ್ಕಿಶ್ ಇ-ವೀಸಾ ಪಡೆಯಬಹುದು. ಆದರೆ, ನೀವು ಕೆಲಸ ಅಥವಾ ಅಧ್ಯಯನ ಉದ್ದೇಶಗಳಿಗಾಗಿ ಟರ್ಕಿಗೆ ಪ್ರಯಾಣಿಸುವಾಗ, ವೀಸಾ ಪ್ರಕ್ರಿಯೆಗಾಗಿ ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳ ಅಗತ್ಯವಿದೆ:
- ಮಾನ್ಯ ಪಾಸ್‌ಪೋರ್ಟ್
- ಎರಡು ಒಂದೇ ರೀತಿಯ ಪಾಸ್‌ಪೋರ್ಟ್ ಸೈಜ್ ಫೋಟೋಗಳು
- ಟ್ರಾವೆಲ್ ಇನ್ಶೂರೆನ್ಸ್
- ವಿಮಾನದ ಪ್ರಯಾಣ
- ಹುಟ್ಟಿದ ದಿನಾಂಕದ ಪುರಾವೆ
- ವಿಳಾಸದ ಪುರಾವೆ
- ಉದ್ಯೋಗ ಒಪ್ಪಂದ
- ವಸತಿ ಪುರಾವೆ
- ಬ್ಯಾಂಕ್ ಸ್ಟೇಟ್ಮೆಂಟ್‌ಗಳು, ITR, ಕ್ರೆಡಿಟ್ ಕಾರ್ಡ್, ಪ್ರಯಾಣಿಕರ ಚೆಕ್‌ಗಳು ಮತ್ತು ಪೇ ಸ್ಲಿಪ್‌ಗಳನ್ನು ಒಳಗೊಂಡಂತೆ ಹಣಕಾಸಿನ ವಿಧಾನಗಳ ಪುರಾವೆ
ಟರ್ಕಿಶ್ ವೀಸಾಗಾಗಿ ಅಪ್ಲೈ ಮಾಡುವುದು ಹೇಗೆ?
ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ವಿದೇಶಿ ಪ್ರಯಾಣಿಕರಿಗೆ ಇ-ವೀಸಾ ಪಡೆಯುವುದನ್ನು ಟರ್ಕಿಶ್ ಸರ್ಕಾರವು ಸುಲಭಗೊಳಿಸಿದೆ. ಆದಾಗ್ಯೂ, ಟರ್ಕಿಯ ಮೆಡಿಕಲ್ ಇನ್ಶೂರೆನ್ಸ್ ಸಹ ಕಡ್ಡಾಯವಾಗಿದೆ. ಟರ್ಕಿಶ್ ಇ-ವೀಸಾ ಪಡೆಯುವ ಹಂತಗಳು ಈ ಕೆಳಗಿನಂತಿವೆ:
ಹಂತ 1: ಟರ್ಕಿಶ್ ಇ-ವೀಸಾ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
ಹಂತ 2: ಎಲ್ಲಾ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಹಂತ 3: ರಿಫಂಡ್ ಮಾಡಲಾಗದ ವೀಸಾ ಶುಲ್ಕವನ್ನು ಪಾವತಿಸಿ.
ಹಂತ 4: ಎಲ್ಲಾ ಅಗತ್ಯ ಪಟ್ಟಿ ಮಾಡಲಾದ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ.
ಹಂತ 5: ನಿಮ್ಮ ಇಮೇಲ್ ID ಯಲ್ಲಿ PDF ಫಾರ್ಮ್ಯಾಟ್‌ನಲ್ಲಿ ನೀವು ಇ-ಅನುಮೋದಿತ ವೀಸಾವನ್ನು ಪಡೆಯುತ್ತೀರಿ.
ಇ-ವೀಸಾ ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಮಾತ್ರ. ಕೆಲಸ ಮತ್ತು ಅಧ್ಯಯನದಂತಹ ಇನ್ನೊಂದು ಉದ್ದೇಶಕ್ಕಾಗಿ ವೀಸಾ ಪಡೆಯಲು, ನೀವು ರಾಯಭಾರದ ಮೂಲಕ ಅಪ್ಲೈ ಮಾಡಬೇಕು.
ಟರ್ಕಿಯ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು
|
ಒಟ್ಟು ಜನಸಂಖ್ಯೆ
|
86,063,945
|
|
ಭೂ ಪ್ರದೇಶ
|
783562 ಚದರ ಕಿಲೋಮೀಟರ್‌ಗಳು
|
|
ರಾಜಧಾನಿ
|
ಅಂಕಾರಾ
|
|
ಅಧಿಕೃತ ಭಾಷೆ
|
ಟರ್ಕಿಯ
|
|
ಅಧಿಕೃತ ಕರೆನ್ಸಿ
|
ಟರ್ಕಿಶ್ ಲಿರಾ
|
|
ಅತ್ಯಂತ ಜನಪ್ರಿಯ ಆಕರ್ಷಣೆಗಳು
|
ಬ್ಲೂ ಮಸೀದಿ, ಆರ್ಟೆಮಿಸ್, ಮೌಸೋಲಿಯಂ ಆಫ್ ಹಾಲಿಕಾರ್ನಾಸಸ್
|
|
ಮುಖ್ಯ ನಗರಗಳು
|
ಇಸ್ತಾಂಬುಲ್, ಅಂಕಾರಾ, ಇಜ್ಮಿರ್, ಬುರ್ಸಾ, ಟ್ರೋಯ್
|
ಟರ್ಕಿಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು
ಟರ್ಕಿಯ ಶ್ರೀಮಂತ ಇತಿಹಾಸವು ಜಗತ್ತಿನಾದ್ಯಂತದ ಪ್ರಯಾಣಿಕರನ್ನು ಆಕರ್ಷಿಸಿದೆ. ಈ ದೇಶವು ಏಷ್ಯನ್ ಪರ್ಯಾಯ ದ್ವೀಪದಲ್ಲಿ ಇದೆ ಮತ್ತು ರುಚಿಕರವಾದ ಆಹಾರ, ರೋಮಾಂಚಕ ನೈಟ್‌ಲೈಫ್ ಮತ್ತು ಆಹ್ಲಾದಕರ ಹವಾಮಾನಕ್ಕೆ ಸೇವೆ ನೀಡುತ್ತದೆ. ಆದ್ದರಿಂದ, ನೀವು ಈ ಜೀವಂತ ದೇಶಕ್ಕೆ ಹೋಗುತ್ತಿದ್ದರೆ, ಈ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ.
- ಇಸ್ತಾನ್‌ಬುಲ್‌ನಲ್ಲಿ ಹಮಾನ್ (ರಾಯಲ್ ಬಾತ್) ಮಿಸ್ ಮಾಡಬೇಡಿ: ಟರ್ಕಿಯ ಅತ್ಯಂತ ದೊಡ್ಡ ನಗರವಾಗಿರುವ ಇಸ್ತಾನ್‌ಬುಲ್ ತನ್ನದೇ ಆದ ವಿಶೇಷ ಅನುಭವಗಳಿಂದ ನಿಮ್ಮನ್ನು ಸತ್ಕರಿಸುತ್ತದೆ. ಇಲ್ಲಿನ ಹಾಗಿಯಾ ಸೋಫಿಯಾ ಎಂಬ ನೀಲಿ ಮಸೀದಿ ಈ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇದರೊಂದಿಗೆ ನೀವು ಹಮಾಮ್ ಅನುಭವ ಕೂಡ ಪಡೆಯಬೇಕು. ಇದು ಟರ್ಕಿಯ ಸಾಂಪ್ರದಾಯಿಕ ಸ್ನಾನ ವಿಧಾನ ಆಗಿದ್ದು, ರಾಜ ವೈಭೋಗ ಹಾಗೂ ವಿಶ್ರಾಂತಿಯ ಅನುಭವ ನೀಡುತ್ತದೆ.
- ರಾಜಧಾನಿ ಅಂಕಾರಾಗೆ ಭೇಟಿ ನೀಡಿ: ಇದು ಟರ್ಕಿಯ ರಾಜಧಾನಿ ಮತ್ತು ಎರಡನೇ ಅತಿದೊಡ್ಡ ನಗರ. ಟರ್ಕಿಯ ಸಂಸ್ಥಾಪಕರಾದ ಮುಸ್ತಫಾ ಕೆಮಾಲ್ ಅತಾತುರ್ಕ್ ಅವರ ಸ್ಮಾರಕ ಅನಿತ್‌ಕಬೀರ್‌ಗೆ ನೀವು ಭೇಟಿ ನೀಡಬಹುದು.
- ಬೀಚ್ ಪ್ರೇಮಿಗಳ ನೆಚ್ಚಿನ ತಾಣವಾದ ಬೋಡ್ರಮ್‌ಗೆ ಭೇಟಿ ನೀಡಿ: ಬೋಡ್ರಮ್ ಅಂತೂ ಟರ್ಕಿಶ್ ರಿವಿಯೇರಾದ ಪ್ರಮುಖ ಆಕರ್ಷಣೆ. ಇದು ಬೀಚ್ ಪ್ರೇಮಿಗಳ ನೆಚ್ಚಿನ ವಿಹಾರ ತಾಣ ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ಸುಂದರ ಸ್ಥಳಗಳು, ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ನಿಮ್ಮನ್ನು ಬೋಡ್ರಮ್‌ನಲ್ಲಿ ಇನ್ನೂ ಕೆಲವು ದಿನ ಇರಲು ಪ್ರಚೋದಿಸುತ್ತವೆ.
- ಕಡಲತೀರದ ನಿಶ್ಶಬ್ದ ಪಟ್ಟಣ - ಕಾಶ್: ನೀವು ಟರ್ಕಿಯ ಪ್ರಶಾಂತತೆ ಅನುಭವಿಸಲು ಬಯಸಿದರೆ, ಕಾಶ್ ಪಟ್ಟಣಕ್ಕೆ ಹೋಗುವುದನ್ನು ಮರೆಯಬೇಡಿ. ಇದು ಮೆಡಿಟರೇನಿಯನ್ ಕರಾವಳಿಯ ಅಂತಲ್ಯ ಪ್ರದೇಶದಲ್ಲಿ ಇರುವ ಪ್ರಶಾಂತ ಪಟ್ಟಣವಾಗಿದೆ. ಇಲ್ಲಿ ಸಾಗರ ಪ್ರಪಂಚದ ವೈಭವವನ್ನು ಕಣ್ತುಂಬಿಕೊಳ್ಳಿ.
- ಕ್ಯಾಪಡೋಸಿಯಾ ಒಳಗೆ ವರ್ಣರಂಜಿತ ಹಾಟ್ ಏರ್ ಬಲೂನ್ ನೋಡಿ: ಇಸ್ತಾನ್‌ಬುಲ್ ಮತ್ತು ಅಂಕಾರಾ ಪ್ರವಾಸ ಮುಗಿದಮೇಲೆ, ಕ್ಯಾಪಡೋಸಿಯಾಕ್ಕೆ ಡೈರೆಕ್ಟ್ ಫ್ಲೈಟ್ ಹತ್ತಿ. ಇದು ಟರ್ಕಿಯ ಮಧ್ಯ ಅನಾಟೋಲಿಯನ್ ಪ್ರದೇಶದಲ್ಲಿದೆ. ನೀವು ಮೇಲೆ ನೋಡಿದಾಗಲೆಲ್ಲಾ, ಆಕಾಶದಲ್ಲಿ ತೇಲುತ್ತಿರುವ ವರ್ಣರಂಜಿತ ಹಾಟ್ ಏರ್ ಬಲೂನ್‌ಗಳು ಕಾಣುತ್ತವೆ.
ನೀವು ಈ ಅದ್ಭುತ ಸ್ಥಳಗಳನ್ನು ಅನ್ವೇಷಿಸಿ ರೋಮಾಂಚಕ ನೆನಪುಗಳೊಂದಿಗೆ ನಿಮ್ಮ ಊರಿಗೆ ಮರಳಬಹುದು. ಆದರೂ, ನಿಮ್ಮ ಟ್ರಿಪ್ ಆರ್ಥಿಕವಾಗಿ ಸುರಕ್ಷಿತ ಇರಬೇಕು ಎಂದರೆ, ನೀವು ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಪಡೆಯುವುದು ಬಹಳ ಒಳ್ಳೆಯದು. ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ಕೈಗೆಟಕುವ ಪ್ರೀಮಿಯಂನಲ್ಲಿ ಟ್ರಾವೆಲ್ ಪ್ಲಾನ್ ಪಡೆಯಿರಿ ಮತ್ತು ನಿಮ್ಮ ಟರ್ಕಿ ಟ್ರಿಪ್‌ಗೆ ಸಂಪೂರ್ಣ ಕವರೇಜ್ ಪಡೆಯಿರಿ.