ಸರಿಯಾದ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ಇಟಲಿಯ ಸೌಂದರ್ಯವನ್ನು ಆನಂದಿಸಿ
ಇಟಲಿಯು ಮೆಡಿಟರೇನಿಯನ್ ಸಮುದ್ರದ ಮಧ್ಯಭಾಗದಲ್ಲಿರುವ ಇಟಾಲಿಯನ್ ಗಣರಾಜ್ಯದ ಸಾರ್ವಭೌಮ ರಾಷ್ಟ್ರವಾಗಿದೆ. ಪ್ರಯಾಣ ಪ್ರಿಯರಿಗೆ ಇಟಲಿ ನಿಸ್ಸಂದೇಹವಾಗಿ ಒಂದು ಅತ್ಯಂತ ಆಕರ್ಷಕ ತಾಣವಾಗಿದೆ. ಆದಾಗ್ಯೂ, ನೀವು ಇಟಲಿಗೆ ಭೇಟಿ ನೀಡಿದರೆ, ಪ್ರಯಾಣದ ಹಾದಿಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ನಿರ್ಲಕ್ಷಿಸಬಾರದು. ಆದ್ದರಿಂದ, ನೀವು ರಜಾದಿನಗಳನ್ನು ಕಳೆಯಲು, ಬಿಸಿನೆಸ್ ಟೂರ್‌ಗಾಗಿ ಅಥವಾ ವಿದ್ಯಾರ್ಥಿಯಾಗಿ ಪ್ರಯಾಣಿಸುತ್ತಿದ್ದರೂ, ಸೂಕ್ತ ಇಟಲಿ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ರಕ್ಷಣೆಗೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಷೆಂಗೆನ್ ಸದಸ್ಯ ದೇಶಗಳಲ್ಲಿ ಒಂದಾದ ಇಟಲಿಯು, ತನ್ನ ಪ್ರವಾಸಿಗರು ಮತ್ತು ನಾಗರಿಕರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. ಆದರೂ, ಇಟಲಿಯಲ್ಲಿನ ಚಿಕಿತ್ಸೆಗಳ ವೆಚ್ಚವು ಭಾರತದಂತಹ ದೇಶಗಳಿಂದ ಬರುವ ಪ್ರವಾಸಿಗರಿಗೆ ಬಹಳ ದುಬಾರಿ ಆಗಬಹುದು. ಇಲ್ಲಿ, ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಸಹಾಯಕ್ಕೆ ಬರುತ್ತದೆ.
ಇಟಲಿಯ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ವೈದ್ಯಕೀಯ ತುರ್ತುಸ್ಥಿತಿಗಳ ನಡುವೆ ನೀವು ತೊಂದರೆಗೆ ಒಳಗಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಸಮಗ್ರ ಪ್ಲಾನ್ ಪಾಸ್‌ಪೋರ್ಟ್/ವೀಸಾ ನಷ್ಟ, ಪ್ರಯಾಣ ವಿಳಂಬಗಳು/ತಡೆಗಟ್ಟುವಿಕೆ, ವೈದ್ಯಕೀಯ ಸ್ಥಳಾಂತರ, ಸಂಗಾತಿಯ ಭೇಟಿ ಮುಂತಾದ ವೈದ್ಯಕೀಯವಲ್ಲದ ಪ್ರಯಾಣ ಸಂಬಂಧಿತ ಅನಿಶ್ಚಿತತೆಗಳ ವಿರುದ್ಧ ಕವರೇಜ್ ಖಚಿತಪಡಿಸುತ್ತದೆ.
ಇಟಲಿಗೆ ಭೇಟಿ ನೀಡುವ ಮೊದಲು ನಿಮಗೆ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿದೆಯೇ?
ಹೌದು, ಇಟಲಿಗೆ ಭೇಟಿ ನೀಡುವ ಎಲ್ಲಾ ಭಾರತೀಯ ನಾಗರಿಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ, ಅದು, ದೇಶವು ಷೆಂಗೆನ್ ಪ್ರದೇಶದ ಭಾಗವಾಗಿದೆ. ಭಾರತದಿಂದ ಅಥವಾ ಬೇರೆ ಎಲ್ಲಿಂದಲಾದರೂ ಪ್ರಯಾಣಿಸುತ್ತಿದ್ದರೆ, ಇಟಲಿಗಾಗಿ ಷೆಂಗೆನ್ ವೀಸಾಗೆ ಅಪ್ಲೈ ಮಾಡಲು ನೀವು ಕನಿಷ್ಠ 30,000 ಯುರೋ ಕವರೇಜ್‌ನೊಂದಿಗೆ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕು. ನಿಮ್ಮ ಅನುಮತಿಯ ಮೊದಲು, ವಲಸೆ ಅಧಿಕಾರಿಗಳು ಷೆಂಗೆನ್ ಪ್ರದೇಶಕ್ಕಾಗಿ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ನಿಮಗೆ ಸಹಾಯ ಮಾಡಲು ಇತರ ಅಗತ್ಯ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುತ್ತಾರೆ.
ಇಟಲಿಯ ಟ್ರಾವೆಲ್ ಇನ್ಶೂರೆನ್ಸ್ ಯಾವುದೇ ಅಪಘಾತ, ಗಾಯ ಅಥವಾ ಅನಾರೋಗ್ಯದಿಂದ ಉಂಟಾಗುವ ದುಬಾರಿ ವೈದ್ಯಕೀಯ ವೆಚ್ಚಗಳ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆ. ಇಟಲಿಯ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಪಾಸ್‌ಪೋರ್ಟ್, ಬ್ಯಾಗೇಜ್ ನಷ್ಟ ಮುಂತಾದ ಯಾವುದೇ ಪ್ರಯಾಣದ ಅಡಚಣೆಗಳು ಅಥವಾ ಇತರ ಅನಾನುಕೂಲತೆಗೆ ಕೂಡ ಪಾವತಿಸುತ್ತದೆ.
ಎಕ್ಸ್‌ಪ್ಲೋರ್ ಯುರೋಪ್- ಭಾರತದಿಂದ ಇಟಲಿಗೆ ವ್ಯಾಪಕ ಟ್ರಾವೆಲ್ ಇನ್ಶೂರೆನ್ಸ್
ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಿಮ್ಮ ಇಟಲಿ ಪ್ರವಾಸಕ್ಕಾಗಿ ಎಕ್ಸ್‌ಪ್ಲೋರ್ ಯುರೋಪ್ ಎಂಬ ನಮ್ಮ ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಒದಗಿಸುವ ಮೂಲಕ ಆ ಸುಂದರ ದೇಶದ ನಿಮ್ಮ ಪ್ರಯಾಣವನ್ನು ನಾವು ಸುರಕ್ಷಿತಗೊಳಿಸುತ್ತೇವೆ. ಈ ಪ್ಲಾನ್ ಬಹುತೇಕ ಯುರೋಪಿಯನ್ ದೇಶಗಳು ಮತ್ತು UK ಅನ್ನು ಕವರ್ ಮಾಡುತ್ತದೆ, ಅನಿರೀಕ್ಷಿತವಾಗಿ ಎದುರಾಗಬಹುದಾದ ವೈದ್ಯಕೀಯ ಹಾಗೂ ವೈದ್ಯಕೀಯೇತರ ತುರ್ತು ಪರಿಸ್ಥಿತಿಗಳಿಗೆ ಸಂಪೂರ್ಣ ಕವರೇಜ್ ಅನ್ನು ಒದಗಿಸುವ ಭರವಸೆಯನ್ನು ನೀಡುತ್ತದೆ. ಅಲ್ಪಾವಧಿ ಭೇಟಿಗಳಿಗೆ € 100k ವರೆಗೆ ಮತ್ತು ವಿದ್ಯಾರ್ಥಿಗಳಿಗೆ 1000k ವರೆಗೆ ಸೇರಿದಂತೆ ಹಲವಾರು ಇನ್ಶೂರೆನ್ಸ್ ಮೊತ್ತದ ಆಯ್ಕೆಗಳನ್ನು ಒಳಗೊಂಡಿರುವ ಎಕ್ಸ್‌ಪ್ಲೋರ್ ಯುರೋಪ್ ಪಾಲಿಸಿಯು, ಪ್ರವಾಸಿಗರು ಮತ್ತು ಕಾರ್ಪೋರೇಟ್ ಪ್ರಯಾಣಿಕರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಉಪಯುಕ್ತವಾಗಿದೆ.
ಇದರ ಅತ್ಯುತ್ತಮ ಅಂಶವೆಂದರೆ, ಈ ಪಾಲಿಸಿಯು ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆ ಸೇರಿದಂತೆ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ಕವರೇಜ್, ಟ್ರಿಪ್‌ನಲ್ಲಿ ಎದುರಾಗುವ ಅಡಚಣೆಗಳು, ಲಗೇಜ್ ಕಳೆದುಹೋಗುವುದು ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ರಿಯಂಬರ್ಸ್‌ಮೆಂಟ್ ನೀಡುವ ಅತ್ಯುತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ. ಎಕ್ಸ್‌ಪ್ಲೋರ್ ಯುರೋಪ್ ಟ್ರಾವೆಲ್ ಕವರ್ ಮೂಲಕ, ಹೆಲ್ತ್‌ಕೇರ್ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸದೆ ನೀವು ನಿಮ್ಮ ಟ್ರಿಪ್ ಅನ್ನು ಆನಂದಿಸಬಹುದು. ನಿಮ್ಮ ಟ್ರಾವೆಲ್ ಪಾಲಿಸಿಯನ್ನು ಕಸ್ಟಮೈಸ್ ಮಾಡುವ ಅವಕಾಶ ನೀಡುವ ಮೂಲಕ, ನಿಮ್ಮ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ರಕ್ಷಣೆ ನೀಡಿ ನಿಮ್ಮ ಷೆಂಗೆನ್ ಪ್ರವಾಸ ಅತ್ಯಂತ ಯಶಸ್ವಿಯಾಗುವ ಹಾಗೆ ನಾವು ನೋಡಿಕೊಳ್ಳುತ್ತೇವೆ.
ಕೇರ್‌ನಿಂದ ಇಟಲಿ ಟ್ರಾವೆಲ್ ಇನ್ಶೂರೆನ್ಸ್‌ನ ವಿಶಿಷ್ಟ ಫೀಚರ್‌ಗಳು
ನಮ್ಮ ಇಟಲಿ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಈ ಕೆಳಗಿನ ಫೀಚರ್‌ಗಳನ್ನು ಒದಗಿಸುವ ಮೂಲಕ ಇಟಲಿಗೆ ನಿಮ್ಮ ಪ್ರಯಾಣವು ಚಿಂತೆ-ಮುಕ್ತವಾಗಿರುವುದನ್ನು ನಾವು ಖಚಿತಪಡಿಸುತ್ತೇವೆ:
- ಕೈಗೆಟಕುವ ಪ್ರೀಮಿಯಂ: ಇಟಲಿ ಟ್ರಾವೆಲ್ ಇನ್ಶೂರೆನ್ಸ್ ಕೈಗೆಟಕುವ ಪ್ರೀಮಿಯಂನಲ್ಲಿ ಹಲವಾರು ಪ್ರಯೋಜನಗಳು ಮತ್ತು ವಿಶಾಲ ಕವರೇಜ್ ಒದಗಿಸುತ್ತದೆ.
- ಆಟೋಮ್ಯಾಟಿಕ್ ಟ್ರಿಪ್ ವಿಸ್ತರಣೆ: ದೀರ್ಘಾವಧಿಯ ಆಸ್ಪತ್ರೆ ದಾಖಲಾತಿ ಅಥವಾ ನೈಸರ್ಗಿಕ ವಿಕೋಪದ ಸಮಯದಲ್ಲಿ, ಇಟಲಿಗಾಗಿ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಆಟೋಮ್ಯಾಟಿಕ್ ಆಗಿ ಸತತ ಏಳು ದಿನಗಳವರೆಗೆ ಕವರೇಜ್ ವಿಸ್ತರಿಸುತ್ತದೆ.
- ಕ್ಯಾಶ್‌ಲೆಸ್ ಕ್ಲೈಮ್ ಪ್ರಕ್ರಿಯೆ: ನಮ್ಮ ಹೆಲ್ತ್‌ಕೇರ್ ಪೂರೈಕೆದಾರರ ವ್ಯಾಪಕ ನೆಟ್‌ವರ್ಕ್ ತುರ್ತು ಪರಿಸ್ಥಿತಿಗಳಲ್ಲಿ ನಮಗೆ ಕರೆ ಮಾಡುವ ಮೂಲಕ ಕ್ಯಾಶ್‌ಲೆಸ್ ಒಳ-ರೋಗಿ ಆರೈಕೆ ಸೌಲಭ್ಯವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
- ಎಲ್ಲಾ-ಒಳಗೊಳ್ಳುವ ರಕ್ಷಣೆ: ಚೆಕ್ಡ್-ಇನ್ ಬ್ಯಾಗೇಜ್ ನಷ್ಟದ ಸಮಯದಲ್ಲಿ ನಿಮಗೆ ಹೆಲ್ತ್‌ಕೇರ್ ಸೇವೆಗಳು ಅಥವಾ ಸಹಾಯದ ಅಗತ್ಯವಿದ್ದರೆ, ನಿಮ್ಮ ಪ್ರಯಾಣದ ಪ್ರತಿ ಹಂತದಲ್ಲೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ.
- ಬಳಕೆಯ ಆ್ಯಡ್-ಆನ್ ಪ್ರಯೋಜನಗಳು: ಈ ಪಾಲಿಸಿಯು PED ಕವರೇಜ್, ವೀಸಾ ಶುಲ್ಕಗಳ ರಿಫಂಡ್ ಮುಂತಾದ ಐಚ್ಛಿಕ ಕವರ್‌ಗಳೊಂದಿಗೆ ಆಗಾಗ್ಗೆ ಮತ್ತು ದೀರ್ಘಾವಧಿಯ ಪ್ರಯಾಣಗಳನ್ನು ಕಸ್ಟಮೈಜ್ ಮಾಡಲು ಮತ್ತು ಸುರಕ್ಷಿತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
ಇಟಲಿ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್‌ನ ಪಾಲಿಸಿ ವಿವರಗಳು
ನೀವು ಇಟಲಿ ಟ್ರಿಪ್‌ನ ಸಿದ್ಧತೆಗಳನ್ನು ಮುಂದುವರಿಸುವ ಮೊದಲು, ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಿ, ಎಚ್ಚರಿಕೆಯಿಂದ ಹಾಗೂ ಸೂಕ್ತ ಮಾಹಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗಿದೆ. ನಿಮಗೆ ಅಗತ್ಯವಿರುವ ಪಾಲಿಸಿ ಮತ್ತು ನಿಮ್ಮ ಬಜೆಟ್ ಅನ್ನು ನೀವು ನಿರ್ಧರಿಸಬೇಕು. ಉದಾಹರಣೆಗೆ, ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಇಟಲಿ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರಮುಖ ಪ್ಲಾನ್ ವಿವರಗಳು ಈ ಕೆಳಗಿನಂತಿವೆ.
|
ವಿವರಣೆ
|
ಎಕ್ಸ್‌ಪ್ಲೋರ್ ಯುರೋಪ್
|
ಸ್ಟೂಡೆಂಟ್ ಎಕ್ಸ್‌ಪ್ಲೋರ್
|
|
ಇನ್ಶೂರೆನ್ಸ್ ಮೊತ್ತ
|
€30K ಮತ್ತು 100K (ಪ್ರೀಮಿಯಂ ಪ್ರಕಾರ ಬದಲಾಗುತ್ತದೆ)
|
US $30K, 50K, 100K, 300K, 500K, ಮತ್ತು 1000K
|
|
ಪ್ರಯಾಣದ ಆಯ್ಕೆಗಳು
|
Yes
Yes
|
ಸ್ಟೂಡೆಂಟ್ ಟ್ರಾವೆಲ್ ಪ್ಲಾನ್‌ಗಳ ಅಡಿಯಲ್ಲಿ 1 ರಿಂದ 24 ತಿಂಗಳ ಫಿಕ್ಸೆಡ್ ಪಾಲಿಸಿ ಅವಧಿಯ ಆಯ್ಕೆಗಳು ಲಭ್ಯವಿವೆ
|
|
ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್)
|
ಕನಿಷ್ಠ: ಮಗು- 1 ದಿನ; ವಯಸ್ಕರು- 18 ವರ್ಷಗಳು
ಗರಿಷ್ಠ: ಮಗು- 24 ವರ್ಷಗಳು; ವಯಸ್ಕರು- ಜೀವಮಾನ
|
ಪ್ರತಿ ಫಿಕ್ಸೆಡ್-ಅವಧಿ ಪಾಲಿಸಿಯು ಅದೇ ಅರ್ಹತಾ ಮಾನದಂಡವನ್ನು ಒಳಗೊಂಡಿರುತ್ತದೆ-
ಕನಿಷ್ಠ: 12 ವರ್ಷಗಳು
ಗರಿಷ್ಠ: 40 ವರ್ಷಗಳು
|
|
ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್)
|
ಕನಿಷ್ಠ: ಮಗು- 1 ದಿನ; ವಯಸ್ಕರು- 18 ವರ್ಷಗಳು
ಗರಿಷ್ಠ: ಮಗು- 24 ವರ್ಷಗಳು; ವಯಸ್ಕರು- ಜೀವಮಾನ
|
ಕನಿಷ್ಠ: 12 ವರ್ಷಗಳು
ಗರಿಷ್ಠ: 40 ವರ್ಷಗಳು
|
*ಸಿಂಗಲ್ ಟ್ರಿಪ್ ಪಾಲಿಸಿಗಳಲ್ಲಿ ಮಾತ್ರ ಕುಟುಂಬದ ಆಯ್ಕೆ ಲಭ್ಯವಿದೆ.
ಇಟಲಿಗಾಗಿ ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?
ಸಮಗ್ರ ಕವರೇಜ್ ಒದಗಿಸುವಾಗ, ಭಾರತದಿಂದ ಇಟಲಿಗೆ ನಮ್ಮ ಟ್ರಾವೆಲ್ ಇನ್ಶೂರೆನ್ಸ್ ನೀವು ಎಲ್ಲಿದ್ದರೂ, ಗುಣಮಟ್ಟದ ವೈದ್ಯಕೀಯ ಆರೈಕೆಗೆ ಅಕ್ಸೆಸ್ ನೀಡುವ ಭರವಸೆ ನೀಡುತ್ತದೆ. ನಮ್ಮ ಇಟಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಒಳಗೊಂಡಿರುವ ಕೆಲವು ಟಾಪ್ ಕವರ್‌ಗಳು ಈ ಕೆಳಗಿನಂತಿವೆ-
ತುರ್ತು ಆಸ್ಪತ್ರೆ ದಾಖಲಾತಿ: ಭಾರತದಿಂದ ಇಟಲಿಗೆ ಪ್ರಯಾಣಿಸುವವರಿಗಾಗಿ ಇರುವ ಈ ಟ್ರಾವೆಲ್ ಇನ್ಶೂರೆನ್ಸ್, ಹಠಾತ್ ಅನಾರೋಗ್ಯ ಅಥವಾ ಗಾಯದ ತುರ್ತು ಚಿಕಿತ್ಸಾ ವೆಚ್ಚಗಳನ್ನು ಕವರ್ ಮಾಡುತ್ತದೆ, ಇದರಲ್ಲಿ ಒಳರೋಗಿ ಮತ್ತು ಹೊರರೋಗಿ ಆಸ್ಪತ್ರೆ ದಾಖಲಾತಿ ಸೌಲಭ್ಯಗಳೂ ಸೇರಿವೆ.
ದೈನಂದಿನ ಭತ್ಯೆ: ನಿರ್ದಿಷ್ಟ ಅವಧಿಯವರೆಗೆ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಉಂಟಾದ ಹೆಚ್ಚುವರಿ ವೆಚ್ಚಗಳಿಗೆ ನೀವು ನಿರ್ದಿಷ್ಟ ಮಿತಿಯವರೆಗೆ ಮರುಪಾವತಿಯನ್ನು ಪಡೆಯಬಹುದು.
ಸಹಾನುಭೂತಿ ಭೇಟಿ: ಇನ್ಶೂರೆನ್ಸ್ ಹೊಂದಿರುವ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ, ಅವರನ್ನು ನೋಡಿಕೊಳ್ಳಲು ತೆರಳುವ ವ್ಯಕ್ತಿಯ ವಿಮಾನದ ಟಿಕೆಟ್ ವೆಚ್ಚಗಳಿಗೆ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ರಿಯಂಬರ್ಸ್‌ಮೆಂಟ್ ನೀಡುವ ಮೂಲಕ ನಿಮಗೆ ನೆರವಾಗುತ್ತದೆ.
ಪರ್ಸನಲ್ ಆ್ಯಕ್ಸಿಡೆಂಟ್: ಇನ್ಶೂರ್ಡ್ ವ್ಯಕ್ತಿಯ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯದ ದುರದೃಷ್ಟಕರ ಸಂದರ್ಭದಲ್ಲಿ, ಈ ಪಾಲಿಸಿಯು ಇನ್ಶೂರೆನ್ಸ್ ಮೊತ್ತದವರೆಗೆ ಇಡಿಗಂಟು ಪಾವತಿ ಒದಗಿಸುತ್ತದೆ.
ಕೋವಿಡ್-19 ಕವರೇಜ್: ಪಾಲಿಸಿ ನಿಯಮಗಳಿಗೆ ಒಳಪಟ್ಟು, ವಿದೇಶದಲ್ಲಿ ಕೋವಿಡ್-19 ಚಿಕಿತ್ಸೆ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಲು ಪಾಲಿಸಿಯು ಸ್ಟ್ಯಾಂಡರ್ಡ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ.
ಪ್ರಯಾಣ ವಿಳಂಬ ಮತ್ತು ರದ್ದತಿ: ಪಾಲಿಸಿಯ ಪ್ರಕಾರ ವ್ಯಾಖ್ಯಾನಿತ ಪರಿಸ್ಥಿತಿಗಳ ಅಡಿಯಲ್ಲಿ ಸಂಬಂಧಿತ ವೆಚ್ಚಗಳನ್ನು ನಾವು ಕವರ್ ಮಾಡುವುದರಿಂದ ಪ್ರಯಾಣ ವಿಳಂಬಗಳು, ಅಡಚಣೆಗಳು ಮತ್ತು ರದ್ದತಿಗಳ ಸಮಯದಲ್ಲಿ ಚಿಂತಿಸಬೇಡಿ.
ಚೆಕ್-ಇನ್ ಬ್ಯಾಗೇಜ್ ವಿಳಂಬ ಮತ್ತು ನಷ್ಟ: ಪಾಲಿಸಿಯ ಅಡಿಯಲ್ಲಿ ನಿರ್ದಿಷ್ಟ ಮೊತ್ತದವರೆಗಿನ ಕವರೇಜ್‌ನೊಂದಿಗೆ ಚೆಕ್-ಇನ್ ಬ್ಯಾಗೇಜ್ ನಷ್ಟ ಮತ್ತು ವಿಮಾನ ನಿಲ್ದಾಣದಲ್ಲಿ ವಿಳಂಬದ ವಿರುದ್ಧ ನಾವು ರಕ್ಷಣೆಯನ್ನು ಖಚಿತಪಡಿಸುತ್ತೇವೆ.
ಪಾಸ್‌ಪೋರ್ಟ್ ಮತ್ತು ಇಂಟರ್ನ್ಯಾಷನಲ್ DL ನಷ್ಟ: ನಿಮ್ಮ ಪಾಸ್‌ಪೋರ್ಟ್ ಮತ್ತು ಇಂಟರ್ನ್ಯಾಷನಲ್ DL ನಂತಹ ನಿಮ್ಮ ಅಮೂಲ್ಯ ಡಾಕ್ಯುಮೆಂಟ್‌ಗಳನ್ನು ನೀವು ಕಳೆದುಕೊಂಡರೆ, ನಮ್ಮ ಇಟಲಿ ಟ್ರಾವೆಲ್ ಇನ್ಶೂರೆನ್ಸ್ ವಿದೇಶದಲ್ಲಿ ಡಾಕ್ಯುಮೆಂಟ್‌ಗಳನ್ನು ಪಡೆಯಲು ಉಂಟಾದ ವೆಚ್ಚಗಳನ್ನು ಕವರ್ ಮಾಡುತ್ತದೆ.
ಇಟಾಲಿಯನ್ ಟ್ರಾವೆಲ್ ಕವರ್ ಅಡಿಯಲ್ಲಿ ಹೊರಗಿಡುವಿಕೆಗಳು
ಇಟಲಿ ಟ್ರಾವೆಲ್ ಪಾಲಿಸಿಯು ಈ ಕೆಳಗಿನ ಸನ್ನಿವೇಶಗಳಲ್ಲಿ ಕವರೇಜ್ ಒದಗಿಸುವುದಿಲ್ಲ:
ಮಾದಕ ವಸ್ತುಗಳ ದುರುಪಯೋಗ: ಟ್ರಿಪ್ ಸಮಯದಲ್ಲಿ ಇನ್ಶೂರ್ಡ್ ಸದಸ್ಯರು ಆಲ್ಕೋಹಾಲ್ ಅಥವಾ ಮಾದಕ ವಸ್ತುಗಳ ಬಳಕೆ/ದುರ್ಬಳಕೆ/ಅತಿಯಾಗಿ ಬಳಕೆ ಮಾಡಿದಾಗ ಉಂಟಾಗುವ ವೆಚ್ಚಗಳು.
ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ, ಪರಮಾಣು ಅಪಾಯಗಳು ಅಥವಾ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
ಸ್ವಯಂ ಮಾಡಿಕೊಂಡ ಗಾಯ: ಉದ್ದೇಶಪೂರ್ವಕವಾಗಿ ಮಾಡಿಕೊಳ್ಳುವ ಯಾವುದೇ ರೀತಿಯ ಸ್ವಯಂ-ಗಾಯ, ಆತ್ಮಹತ್ಯೆಯ ಪ್ರಯತ್ನ ಅಥವಾ ಆಸ್ಪತ್ರೆ ದಾಖಲಾತಿ ಅಥವಾ ಸಾವಿಗೆ ಕಾರಣವಾಗುವ ಸ್ವಯಂ-ಹಾನಿಯ ಯಾವುದೇ ಇತರ ರೂಪಗಳು ಈ ಕವರೇಜ್‌ಗೆ ಒಳಪಡುವುದಿಲ್ಲ.
ಅಪಾಯಕಾರಿ ಚಟುವಟಿಕೆಗಳು: ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖಿಸಿರದ ಬೆಂಕಿ ಸ್ಟಂಟ್‌ಗಳು ಮುಂತಾದ ಅಪಾಯಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೇಮ್‌ಗಳನ್ನು ಸೆಟಲ್ ಮಾಡಲಾಗುವುದಿಲ್ಲ.
ಕಾನೂನಿನ ಉಲ್ಲಂಘನೆ: ಗಮ್ಯಸ್ಥಾನ ದೇಶದಿಂದ ನಿಗದಿಪಡಿಸಲಾದ ಯಾವುದೇ ಕಾನೂನು ಉಲ್ಲಂಘನೆ ಅಥವಾ ನಿರ್ದಿಷ್ಟ ನಿಬಂಧನೆಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಗಾಯದ ವೆಚ್ಚಗಳು.
ದಂತ ಚಿಕಿತ್ಸೆ: ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ಗಮನಿಸಿ: ಪ್ಲಾನ್ ಫೀಚರ್‌ಗಳು, ಪ್ರಯೋಜನಗಳು, ಕವರೇಜ್ ಮತ್ತು ಕ್ಲೈಮ್‌ಗಳ ಅಂಡರ್‌ರೈಟಿಂಗ್ ಪಾಲಿಸಿ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ. ದಯವಿಟ್ಟು ಬ್ರೋಶರ್, ಸೇಲ್ಸ್ ಪ್ರಾಸ್ಪೆಕ್ಟಸ್ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ನೋಡಿ.
ಇಟಲಿಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಎಷ್ಟು?
ಇಟಲಿಯಲ್ಲಿ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ವೆಚ್ಚವು ಪ್ರಯಾಣಿಕರ ಸಂಖ್ಯೆ, ಅವರ ವಯಸ್ಸು, ಭೇಟಿ ನೀಡುವ ಸ್ಥಳಗಳು, ಟ್ರಿಪ್ ಅವಧಿ, ಮೊದಲೇ ಇರುವ ಕಾಯಿಲೆಗಳು ಮತ್ತು ಕವರೇಜ್ ಪ್ರಕಾರದಂತಹ ಹಲವಾರು ಅಂಶಗಳನ್ನು ಆಧರಿಸಿರುತ್ತದೆ. ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಾವು ಇಟಲಿ ಪ್ರವಾಸಕ್ಕಾಗಿ ಕೈಗೆಟುಕುವ ದರದ ಟ್ರಾವೆಲ್ ಇನ್ಶೂರೆನ್ಸ್ ಒದಗಿಸುತ್ತೇವೆ, ಇದರಲ್ಲಿ ಒಬ್ಬ ಪ್ರಯಾಣಿಕರ ಒಂದು ವಾರದ ಅವಧಿಯ ಪ್ರವಾಸಕ್ಕೆ ಪ್ರೀಮಿಯಂ ದರವು ಕೇವಲ ₹390* ರಿಂದ ಪ್ರಾರಂಭವಾಗುತ್ತದೆ.
| ಇನ್ಶೂರ್ಡ್ ಸದಸ್ಯ(ರು) |
ವಯಸ್ಸು |
ಮೊದಲೇ-ಇರುವ ಯಾವುದೇ ರೋಗ |
ಇನ್ಶೂರೆನ್ಸ್ ಮೊತ್ತ |
ಪಾಲಿಸಿ ಅವಧಿ |
ಪ್ರೀಮಿಯಂ ಮೊತ್ತ (ಅಂದಾಜು) |
| 1 |
30 ವರ್ಷಗಳು |
ಇಲ್ಲ |
€ 30,000 |
7 ದಿನಗಳು |
₹ 390* |
*ಮೇಲೆ ತಿಳಿಸಲಾದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು, ಇನ್ಶೂರ್ಡ್ ವ್ಯಕ್ತಿಗೆ ಮೊದಲೇ ಯಾವುದೇ ಕಾಯಿಲೆಗಳಿಲ್ಲ ಎಂಬ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಅದಲ್ಲದೆ, ಇನ್ಶೂರ್ಡ್ ವ್ಯಕ್ತಿಯು ಈ ಹಿಂದೆ ಯಾವುದೇ ಟ್ರಾವೆಲ್ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಿದ್ದರೆ, ಪ್ರೀಮಿಯಂ ಮೊತ್ತದಲ್ಲಿ ಬದಲಾವಣೆ ಆಗಬಹುದು.
ಇಟಲಿಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಗಮನದಲ್ಲಿ ಇಟ್ಟುಕೊಳ್ಳಬೇಕಾದ ವಿಷಯಗಳು
ಸೂಕ್ತವಾದ ಇಟಲಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹುಡುಕುವುದು ಗೊಂದಲವಾಗಬಹುದು, ಅದರಲ್ಲೂ ಇದು ನಿಮ್ಮ ಮೊದಲ ವಿದೇಶಿ ಪ್ರಯಾಣವಾಗಿದ್ದರೆ ಮತ್ತಷ್ಟು ಗೊಂದಲವಾಗಬಹುದು. ನಿಮ್ಮ ಅಗತ್ಯಗಳು ಹಾಗೂ ಆರೋಗ್ಯದ ಪರಿಸ್ಥಿತಿಗಳಿಗೆ ಸರಿಹೊಂದುವ ಅತ್ಯುತ್ತಮ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕೇರ್ ಹೆಲ್ತ್ ಇನ್ಶೂರೆನ್ಸ್ ನಿಮಗೆ ನೆರವಾಗುತ್ತದೆ. ಇಟಲಿ ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್ ಅನ್ನು ಅಂತಿಮಗೊಳಿಸುವ ಮೊದಲು ಪರಿಗಣಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ:
-
ಷೆಂಗೆನ್ ಅನುಮೋದಿತ ಟ್ರಾವೆಲ್ ಇನ್ಶೂರೆನ್ಸ್: ಇಟಲಿ ಸೇರಿದಂತೆ ಷೆಂಗೆನ್ ಪ್ರದೇಶಕ್ಕೆ ಪ್ರಯಾಣಿಸುವಾಗ, ಟ್ರಾವೆಲ್ ಇನ್ಶೂರೆನ್ಸ್ ಷೆಂಗೆನ್ ವೀಸಾಗೆ ಮಾನ್ಯವಾಗಿದೆಯೇ ಎಂದು ಕ್ರಾಸ್-ಚೆಕ್ ಮಾಡುವುದು ಅಗತ್ಯವಾಗಿದೆ.
-
ಟ್ರಿಪ್ ಫ್ರೀಕ್ವೆನ್ಸಿ: ಅಪರೂಪಕ್ಕೆ ಒಮ್ಮೆ ಮಾಡುವ ಟ್ರಿಪ್‌ಗೆ ಸಿಂಗಲ್-ಟ್ರಿಪ್ ಇನ್ಶೂರೆನ್ಸ್ ಪ್ಲಾನ್ ಸಾಕಾಗುತ್ತದೆ, ಆದರೆ ಪದೇಪದೇ ವಿಮಾನಯಾನ ಮಾಡುವವರು ಮಲ್ಟಿ-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ಬಹಳ ಪ್ರಯೋಜನಕಾರಿ.
-
ಪ್ರಯಾಣದ ಅವಧಿ: ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೀವು ಷೆಂಗೆನ್‌ನಲ್ಲಿ ಖರ್ಚು ಮಾಡಲು ಯೋಜಿಸುವ ದಿನಗಳ ಸಂಖ್ಯೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಕಡಿಮೆ ಪ್ರಯಾಣ, ಕಡಿಮೆ ಪ್ರೀಮಿಯಂ.
-
ವೈದ್ಯಕೀಯ ಇತಿಹಾಸ: ನೀವು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯನ್ನು ಹೊಂದಿದ್ದರೆ, ನೀವು ಆಯ್ಕೆ ಮಾಡುವ ಪಾಲಿಸಿಯು ಅದಕ್ಕೆ ಹೊಂದಿಕೊಳ್ಳುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
-
ಹೆಚ್ಚಿನ-ಅಪಾಯದ ವಲಯಗಳು: ಹೆಚ್ಚಿನ ಅಪಾಯದ ವಲಯಗಳಲ್ಲಿ ಪಟ್ಟಿ ಮಾಡಲಾದ ತಾಣಗಳು ಹೆಚ್ಚಿನ ಪ್ರೀಮಿಯಂ ಅವಶ್ಯಕತೆಯೊಂದಿಗೆ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿವೆ. ನೀವು ಸಾಹಸ ಚಟುವಟಿಕೆಗಳಿಗೆ ಪ್ರಸಿದ್ಧವಾದ ದೇಶಕ್ಕೆ ಹೋಗುತ್ತಿದ್ದರೆ, ನಿಮ್ಮ ಪಾಲಿಸಿಯು ಸಾಹಸ ಅಥವಾ ಕ್ರೀಡಾ ಗಾಯಗಳನ್ನು ಕವರ್ ಮಾಡುತ್ತದೆಯೇ ಎಂದು ನೀವು ಪರಿಶೀಲಿಸಬೇಕು.
ಇಟಾಲಿಯನ್ ಟ್ರಾವೆಲ್ ಪಾಲಿಸಿ ಅಡಿಯಲ್ಲಿ ಕ್ಲೈಮ್ ಪ್ರಕ್ರಿಯೆ
ಇಟಲಿಗೆ ಲಭ್ಯವಿರುವ ವೀಸಾಗಳ ವಿಧಗಳು
ಇಟಲಿ ಷೆಂಗೆನ್ ವಲಯದ ಅಡಿಯಲ್ಲಿ ಬರುವುದರಿಂದ, ಅದರ ವೀಸಾ ವಿಧಗಳು ಮತ್ತು ಪ್ರಕ್ರಿಯೆಯು ಷೆಂಗೆನ್ ಪ್ರದೇಶದ ಇತರ ದೇಶಗಳಿಗೆ ಸಮನಾಗಿರುತ್ತದೆ. ಇಟಲಿಗೆ ಲಭ್ಯವಿರುವ ವಿವಿಧ ವೀಸಾಗಳ ಪಟ್ಟಿ ಇಲ್ಲಿದೆ:
- ಯುನಿಫಾರ್ಮ್ ಷೆಂಗೆನ್ ವೀಸಾ
- ಏರ್ಪೋರ್ಟ್ ಟ್ರಾನ್ಸಿಟ್ ವೀಸಾ
- ಪ್ರವಾಸಿ ವೀಸಾ
- ವಿಸಿಟರ್ ವೀಸಾ
- ವ್ಯಾಪಾರ ವೀಸಾ
- ಸ್ಟಡಿ ವೀಸಾ
- ವೈದ್ಯಕೀಯ ವೀಸಾ
- ಸಾಂಸ್ಕೃತಿಕ, ಕ್ರೀಡೆಗಳು, ಚಲನಚಿತ್ರ ಸಿಬ್ಬಂದಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ವೀಸಾ
ಇಟಲಿಯ ವೀಸಾಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು
ಇಟಲಿಯನ್ನು ಒಳಗೊಂಡಿರುವ ಷೆಂಗೆನ್ ವಲಯಕ್ಕೆ ಭೇಟಿ ನೀಡಲು ಷೆಂಗೆನ್ ವೀಸಾ ಕಡ್ಡಾಯವಾಗಿದೆ. ಪ್ರಕ್ರಿಯೆಯು ಕಷ್ಟಕರವಲ್ಲ. ನಿಮ್ಮ ಪ್ರಯಾಣವನ್ನು ಆನಂದಿಸಲು ನೀವು ಈ ಕೆಳಗಿನ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು ಮತ್ತು ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಬೇಕು.
- ಷೆಂಗೆನ್ ಟ್ರಾವೆಲ್ ಇನ್ಶೂರೆನ್ಸ್
- ಅಪ್ಲಿಕೇಶನ್ ಫಾರ್ಮ್
- ಹುಟ್ಟಿದ ದಿನಾಂಕದ ಪುರಾವೆ
- ವಿಳಾಸದ ಪುರಾವೆ
- ಉದ್ಯೋಗ ಒಪ್ಪಂದ
- ಸರಿಯಾದ ಪಾಸ್‌ಪೋರ್ಟ್
- ಪ್ರಯಾಣದ ಕಾರ್ಯಕ್ರಮ
- ವಸತಿ ಪುರಾವೆ
- ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್
- ಆದಾಯ ತೆರಿಗೆ ಪುರಾವೆ
ನಮ್ಮ ಟ್ರಾವೆಲ್ ಗೈಡ್‌ನೊಂದಿಗೆ ನಿಮ್ಮ ಇಟಲಿ ಪ್ರವಾಸವನ್ನು ಆನಂದಿಸಿ
ಅಸಾಧಾರಣ ಪ್ರವಾಸಿ ಸ್ಥಳವಾಗಿ, ಇಟಲಿಯು ನಿಮ್ಮನ್ನು ಆಕರ್ಷಿಸುವ ಎಲ್ಲವನ್ನೂ ಹೊಂದಿದೆ. ಶ್ರೀಮಂತ ಪರಂಪರೆ, ಜೀವಂತ ನಗರಗಳು, ಸುಂದರ ಪರ್ವತಗಳು, ಹಸಿರು ಭೂದೃಶ್ಯಗಳು, ಸಣ್ಣ ಹಳ್ಳಿಗಳು, ಕಾಫಿ, ವೈನ್ ಮತ್ತು ಪಿಜ್ಜಾ. ನಿಮ್ಮ ಮುಂದಿನ ರಜಾದಿನಕ್ಕಾಗಿ ಇಟಲಿಯನ್ನು ನಿಮ್ಮ ಪಟ್ಟಿಯ ಮೇಲ್ಭಾಗದಲ್ಲಿ ಇರಿಸಲು ನೀವು ಇನ್ನೇನು ಬಯಸುತ್ತೀರಿ? ಆದಾಗ್ಯೂ, ಲ್ಯಾಟಿನ್ ದೇಶಕ್ಕೆ ಸುರಕ್ಷಿತವಾಗಿ ಪ್ರಯಾಣಿಸುವುದನ್ನು ಸುಲಭಗೊಳಿಸುವ ಟ್ರಾವೆಲ್ ಕವರ್ ಅನ್ನು ಸೇರಿಸಲು ಮರೆಯಬೇಡಿ.
ಇಟಲಿ ಬಗ್ಗೆ ತ್ವರಿತ ಸಂಗತಿಗಳು
| ವರ್ಗ |
ನಿರ್ದಿಷ್ಟತೆಗಳು |
| ಒಟ್ಟು ಜನಸಂಖ್ಯೆ |
6.05 ಕೋಟಿ |
| ಅಧಿಕೃತ ಭಾಷೆ |
ಇಟಾಲಿಯನ್ |
| ಅಧಿಕೃತ ಕರೆನ್ಸಿ |
ಯೂರೋ |
| ರಾಜಧಾನಿ |
ರೋಮ್ |
| ವರ್ಲ್ಡ್ ಹೆರಿಟೇಜ್ |
55 |
| ಭಾರತೀಯ ರಾಯಭಾರ |
ಭಾರತದ ರಾಯಭಾರ ಕಚೇರಿ: ವಿಯಾ XX ಸೆಟ್ಟೆಂಬ್ರೆ, 5. ರೋಮ್, ಇಟಲಿ ಫೋನ್ ನಂಬರ್‌ಗಳು: 0039 064884642-3-4-5. ಫ್ಯಾಕ್ಸ್: 0039 064819539.
|
ಇಟಲಿಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು
- ರೋಮ್: ಇಟಲಿಯ ರಾಜಧಾನಿ ಹಾಗೂ ಅತ್ಯಂತ ಚಟುವಟಿಕೆಯಿಂದ ಕೂಡಿದ ಈ ನಗರವು, ರೋಮನ್ ಸಂಸ್ಕೃತಿಯ ಕುರುಹುಗಳನ್ನು ವೀಕ್ಷಿಸಲು ನಿಮ್ಮನ್ನು ಆಹ್ವಾನಿಸುತ್ತದೆ. ಪ್ರಾಚೀನ ರೋಮ್, ವ್ಯಾಟಿಕನ್ ಮ್ಯೂಸಿಯಂ ಮತ್ತು ಅಮಾಲ್ಫಿ ಕರಾವಳಿ ಪ್ರದೇಶಗಳು ನೀವು ವಿಶ್ರಾಂತಿ ಪಡೆಯಲು, ಲಾಟೆ ಕಾಫಿಯನ್ನು ಸವಿಯಲು ಮತ್ತು ರೋಮನ್ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಸೂಕ್ತವಾದ ಸ್ಥಳಗಳಾಗಿವೆ.
- ವೆನಿಸ್: ಈ ನಗರವು ನಿಮಗೆ ಶೇಕ್ಸ್‌ಪಿಯರ್ ಅವರ ಶ್ರೇಷ್ಠ ನಾಟಕವನ್ನು ನೆನಪಿಸುತ್ತದೆ.
- ದಿ ಮರ್ಚೆಂಟ್ ಆಫ್ ವೆನಿಸ್: ಕಾಲುವೆಗಳ ಈ ನಗರದಲ್ಲಿ ನೀವು ಆನಂದಿಸಲು ಗ್ರಾಂಡ್ ಕೆನಾಲ್, ರಿಯಾಲ್ಟೋ ಸೇತುವೆ, ಬೆಸಿಲಿಕಾ ಡಿ ಸ್ಯಾನ್ ಮಾರ್ಕೊ, ಪಿಯಾಝಾ ಸ್ಯಾನ್ ಮಾರ್ಕೊ, ಲಿಡೋ ಡಿ ವೆನೆಜಿಯಾ ಮತ್ತು ರಿಯಾಲ್ಟೋ ಮಾರುಕಟ್ಟೆಗಳು ಇವೆ.
- ಮಿಲನ್: ಫ್ಯಾಷನ್‌ನ ಜಾಗತಿಕ ರಾಜಧಾನಿ ಮತ್ತು ಪ್ರಾಡಾ, ಅರ್ಮಾನಿ ಮತ್ತು ವರ್ಸೇಸ್‌ನಂತಹ ಪ್ರಸಿದ್ಧ ಬ್ರ್ಯಾಂಡ್‌ಗಳಿಗೆ ನೆಲೆಯಾಗಿರುವ ಮಿಲನ್ ಇಟಲಿಯ ಆರ್ಥಿಕ ಕೇಂದ್ರವೂ ಆಗಿದೆ. ಗೋಥಿಕ್ ಡುಯೊಮೊ ಡಿ ಮಿಲನೊ ಪ್ರಸಿದ್ಧ ಕ್ಯಾಥೆಡ್ರಲ್ ಮತ್ತು ಕಲಾಕೃತಿಗಳು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ನೀವು ಕಲಾ ಪ್ರೇಮಿಯಾಗಿದ್ದರೆ, ಲಿಯೋನಾರ್ಡೊ ಡಾ ವಿನ್ಸಿ ಅವರ ಸುಪ್ರಸಿದ್ಧ ಕಲಾಕೃತಿಯನ್ನು ಹೊಂದಿರುವ ಸಾಂಟಾ ಮಾರಿಯಾ ಡೆಲ್ಲೆ ಗ್ರೇಜಿ ಕಾನ್ವೆಂಟ್‌ಗೆ ಭೇಟಿ ನೀಡುವುದನ್ನು ಮಿಸ್ ಮಾಡಲೇಬಾರದು.
- ಫ್ಲೋರೆನ್ಸ್: ಫ್ಲೋರೆನ್ಸ್‌ನಲ್ಲಿ ನವೋದಯ ಕಲೆ ಮತ್ತು ವಾಸ್ತುಶಿಲ್ಪದ ಮೇರುಕೃತಿಗಳನ್ನು ನೋಡಿ. ಡ್ಯುಮೋ, ಗ್ಯಾಲರಿಯಾ, ಉಫಿಜಿ ಗ್ಯಾಲರಿ ಮತ್ತು ಪಲಾಜೋ ವೆಚಿಯೋ ನೀವು ಭೇಟಿ ನೀಡಬೇಕಾದ ಫ್ಲೋರೆನ್ಸ್‌ನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.
ಇಟಲಿಯಲ್ಲಿ ಮಾಡಬೇಕಾದ ಸಂಗತಿಗಳು
- ಪಿಜ್ಜಾ ಸವಿದು ಬನ್ನಿ: ನೀವು ಇಟಲಿಯಲ್ಲಿದ್ದಾಗ ಅಲ್ಲಿನ ಅಸಲಿ ಪಿಜ್ಜಾದ ರುಚಿ ನೋಡುವ ಅವಕಾಶವನ್ನು ಎಂದಿಗೂ ಮಿಸ್ ಮಾಡಬಾರದು. ದಪ್ಪ ಕ್ರಸ್ಟ್ ಹೊಂದಿರುವ ಸಾಂಪ್ರದಾಯಿಕ ಮಾರ್ಗರಿಟಾ ಪಿಜ್ಜಾ, ಬೊಟ್ಟಾರ್ಗಾ, ಲಸಾನಿಯಾ, ಫಿಯೊರೆಂಟಿನಾ ಸ್ಟೀಕ್ ಮತ್ತು ಟ್ರಫಲ್ಸ್ ಜೊತೆಗಿನ ಐಸ್‌ಕ್ರೀಮ್‌ಗಳು ಇಟಲಿಯಲ್ಲಿ ತುಂಬಾ ಪ್ರಸಿದ್ಧವಾಗಿವೆ. ಆದ್ದರಿಂದ, ಈ ಎಲ್ಲಾ ವಿಶಿಷ್ಟ ಖಾದ್ಯಗಳನ್ನು ನೀವು ಖಂಡಿತವಾಗಿಯೂ ಸವಿದು ಆನಂದಿಸಬೇಕು.
- ಧಾರಾಳವಾಗಿ ಶಾಪಿಂಗ್ ಮಾಡಿ: ನೀವು ಶಾಪಿಂಗ್ ಪ್ರಿಯರಾಗಿದ್ದರೆ, ನಿಮ್ಮ ಶಾಪಿಂಗ್ ಪಟ್ಟಿಯನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಿ. ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್‌ಗಳ ಭವ್ಯವಾದ ಶೋರೂಂಗಳಿಂದ ನೀವು ಮನಸೋಇಚ್ಛೆ ಖರೀದಿ ಮಾಡಬಹುದು. ಜೊತೆಗೆ, ಇಲ್ಲಿನ ಸ್ಥಳೀಯ ಮಾರುಕಟ್ಟೆಗಳಲ್ಲಿ ಆಭರಣಗಳು, ನೆನಪಿನ ಕಾಣಿಕೆಗಳು, ಕಲಾಕೃತಿಗಳು ಮತ್ತು ವೈನ್‌ಗಾಗಿ ಸ್ಟ್ರೀಟ್ ಶಾಪಿಂಗ್ ಕೂಡ ಮಾಡಬಹುದು.
- ವೈನರಿಗಳಿಗೆ ಭೇಟಿ ನೀಡಿ: ಟಸ್ಕನಿಯಲ್ಲಿ ನಿಮ್ಮ ಇಟಾಲಿಯನ್ ವೈನ್ ಟ್ರಿಪ್ ಅನ್ನು ಪ್ಲಾನ್ ಮಾಡಿ. ಟೆನುಟಾ ಕ್ಯಾಸ್ಟಿಗ್ಲಿಯೋನಿ - ಫ್ರೆಸ್ಕೊಬಾಲ್ಡಿ, ದಿ ಕ್ಯಾಸ್ಟೆಲ್ಲೊ ಬ್ಯಾಂಫಿ ಮತ್ತು ರಿಕಾಸೋಲಿ ಇವು ಇಟಲಿಯಲ್ಲಿ ನೀವು ಭೇಟಿ ನೀಡಲೇಬೇಕಾದ ಕೆಲವು ಪ್ರಸಿದ್ಧ ವೈನರಿಗಳಾಗಿವೆ, ಇಲ್ಲಿ ದ್ರಾಕ್ಷಿಗಳನ್ನು ಹದಗೊಳಿಸಿ ಇಟಲಿಯ ಅತ್ಯುತ್ತಮ ವೈನ್ ಆಗಿ ಹೇಗೆ ಪರಿವರ್ತಿಸಲಾಗುತ್ತದೆ ಎಂಬ ಪ್ರಕ್ರಿಯೆಯನ್ನು ನೀವು ಕಣ್ಣಾರೆ ನೋಡಬಹುದು.
ಸುಖಕರವಾದ ಪ್ರಯಾಣವೇ ನಮ್ಮ ಗುರಿಯಾಗಿದ್ದರೂ, ಪ್ರಯಾಣದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಸವಾಲುಗಳ ಬಗ್ಗೆ ಆಲೋಚಿಸಿ, ಯಾವುದೇ ತುರ್ತು ಪರಿಸ್ಥಿತಿಗೂ ಮುಂಚಿತವಾಗಿ ಸಿದ್ಧರಾಗಿರುವುದು ಜಾಣತನ. ಟ್ರಾವೆಲ್ ಕವರ್ ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯೇತರ ವೆಚ್ಚಗಳು ನಿಮಗೆ ಎದುರಾದಾಗ, ಅಂದರೆ ಟ್ರಿಪ್ ವಿಳಂಬ ಅಥವಾ ಚೆಕ್-ಇನ್ ಮಾಡಲಾದ ಲಗೇಜ್ ಮತ್ತು ಪಾಸ್‌ಪೋರ್ಟ್ ಕಳೆದುಹೋದಾಗ ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸುತ್ತದೆ. ನೀವು ಇಟಲಿ ಅನ್ನು ನಿಮ್ಮ ಮುಂದಿನ ರಜಾದಿನದ ತಾಣವಾಗಿ ಪರಿಗಣಿಸುತ್ತಿದ್ದರೆ, ಇಟಲಿಯ ಷೆಂಗೆನ್ ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಪಡೆಯಿರಿ. ನಮ್ಮ ಅತ್ಯುತ್ತಮ ಪಾಲಿಸಿ ಸೌಲಭ್ಯಗಳು ಮತ್ತು 24*7 ಗ್ರಾಹಕ ಬೆಂಬಲದೊಂದಿಗೆ, ಪ್ರಯಾಣದ ವೇಳೆ ಎದುರಾಗುವ ಅನಾನುಕೂಲಗಳು ಹಾಗೂ ಅಪಾಯಗಳಿಂದ ನೀವು ಸುರಕ್ಷಿತವಾಗಿರುತ್ತೀರಿ.