ಈ ಮಹಾಮಾರಿ ನಮಗೆ ಕಲಿಸಿರುವ ಒಂದು ವಿಷಯ ಏನೆಂದರೆ - ನಮ್ಮ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುವುದು. ಅನಾರೋಗ್ಯಕರ ಜೀವನ, ನಿಷ್ಕ್ರಿಯ ಜೀವನಶೈಲಿ ಮತ್ತು ತುರ್ತುಸ್ಥಿತಿಗೆ ಸಜ್ಜಾಗಲು ಪ್ಲಾನ್ ಮಾಡದಿರುವುದು, ಇವೆಲ್ಲವೂ ಕೆಲವೇ ತಿಂಗಳುಗಳಲ್ಲಿ ಲಕ್ಷಾಂತರ ಜನರ ಜೀವನ ಮತ್ತು ಹಣದ ನಷ್ಟಕ್ಕೆ ಕಾರಣವಾಗಿವೆ. ಮಾರಣಾಂತಿಕ ಕೊರೋನಾ ವೈರಸ್ ಮೂಲಕ ಭಾರತ ಒಂದರಲ್ಲೇ 4.5 ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜಗತ್ತಿನಲ್ಲಿ ನಿರಂತರವಾಗಿ ಹೊಸಹೊಸ ಕೋವಿಡ್ ವೇರಿಯಂಟ್‌ಗಳು ಬರುತ್ತಿರುವ ಕಾರಣ, ಆರೋಗ್ಯಕರ ಜೀವನಶೈಲಿ ಅನುಸರಿಸಿ ಮತ್ತು ಕೋವಿಡ್ ತುರ್ತು ಪರಿಸ್ಥಿತಿಗಳು ಎದುರಾದಾಗ ಜೀವನ ನಡೆಸಲು ಸಾಕಷ್ಟು ಹಣ ಏರ್ಪಾಟು ಮಾಡಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ನೀವು ನಿಮ್ಮ ಆರೋಗ್ಯ ನೋಡಿಕೊಳ್ಳುವಾಗ, ನಾವು ಕೋವಿಡ್-19 ಇನ್ಶೂರೆನ್ಸ್ ಮೂಲಕ ನಿಮಗೆ ವೈದ್ಯಕೀಯ ಹಣಕಾಸು ಬೆಂಬಲ ಒದಗಿಸುತ್ತೇವೆ.
ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಮ್ಮ ಕೋವಿಡ್ ಇನ್ಶೂರೆನ್ಸ್ ಕವರ್‌ಗಳೊಂದಿಗೆ ಈ ಮಹಾಮಾರಿ ಸಮಯದಲ್ಲಿ ನಿಮಗೆ ಹಣಕಾಸು ಬೆಂಬಲ ನೀಡುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಹಣಕಾಸು ಯೋಗಕ್ಷೇಮಕ್ಕೆ ಸಮಗ್ರ ವೈದ್ಯಕೀಯ ಕವರೇಜ್, ಸೌಲಭ್ಯಗಳು ಮತ್ತು ಪ್ರಯೋಜನಗಳನ್ನು ಒದಗಿಸುವ ಕಸ್ಟಮೈಸ್ ಮಾಡಿದ ಕೊರೋನಾ ಇನ್ಶೂರೆನ್ಸ್ ಪ್ಲಾನ್‌ಗಳನ್ನು ನಾವು ಒದಗಿಸುತ್ತೇವೆ. ಕೋವಿಡ್-19 ಚಿಕಿತ್ಸೆ ವೆಚ್ಚಗಳು ಈಗ ಮಿತಿಮೀರುತ್ತಿವೆ, ಹಾಗಾಗಿ ನಮ್ಮ ಗ್ರಾಹಕರು ತಮ್ಮ ವಯಸ್ಸು ಮತ್ತು ಲೊಕೇಶನ್ ಯಾವುದೇ ಆಗಿದ್ದರೂ ಸಮಯಕ್ಕೆ ಸರಿಯಾಗಿ ಹಣಕಾಸು ಭದ್ರತೆ ಮತ್ತು ಗುಣಮಟ್ಟದ ಹೆಲ್ತ್‌ಕೇರ್ ಸೇವೆಗಳನ್ನು ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ. ಈ ರೀತಿಯಲ್ಲಿ, ನಮ್ಮ ಕೊರೋನಾವೈರಸ್ ಇನ್ಶೂರೆನ್ಸ್ ಪಾಲಿಸಿಗಳು ಕೋವಿಡ್ ಸಂಬಂಧಿತ ಯಾವುದೇ ಸಂಕಷ್ಟದ ಸಮಯದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನಿಶ್ಚಿಂತವಾಗಿ ಇರಿಸುತ್ತವೆ. ನಮ್ಮ ಕೋವಿಡ್-19 ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಇರುವ ಪ್ರಯೋಜನಗಳು ಮತ್ತು ಕವರೇಜ್ ಬಗ್ಗೆ ಈ ಕೆಳಗೆ ಇನ್ನಷ್ಟು ತಿಳಿಯಿರಿ.
ಸೋಂಕಿನ ಅಪಾಯಕ್ಕೆ ನಿಮ್ಮನ್ನು ಸಿದ್ಧಪಡಿಸುತ್ತದೆ
ಭಾರತದಲ್ಲಿ ಕೊರೋನಾ ಪ್ರಕರಣಗಳು ಕಡಿಮೆ ಆಗಿದ್ದರೂ, ಕೋವಿಡ್-19 ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯ ಈಗಲೂ ಇದೆ. ಭಾರತದಲ್ಲಿ ಹಬ್ಬ ಮತ್ತು ಮದುವೆಯ ಸೀಸನ್ ಬಂದಿರುವ ಕಾರಣ, ಜನರು ಕೋವಿಡ್-ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸದೇ ಇರಬಹುದು. CHIL ಅವರ ಕೊರೋನಾ ವೈರಸ್ ಹೆಲ್ತ್ ಇನ್ಶೂರೆನ್ಸ್ ಕೋವಿಡ್ ಸೋಂಕಿನ ಅಪಾಯ ಹಾಗೂ ಭಾರತದಲ್ಲಿ ನಿರೀಕ್ಷಿತ ಕೋವಿಡ್-19 ಮೂರನೇ ಅಲೆಗೆ ನಿಮ್ಮನ್ನು ಸಿದ್ಧಪಡಿಸುತ್ತದೆ.
ಚಿಕಿತ್ಸೆಯ ಸಮಯದಲ್ಲಿ ಹಣಕಾಸಿನ ನಷ್ಟವನ್ನು ಕಡಿಮೆ ಮಾಡುತ್ತದೆ
ಭಾರತದಲ್ಲಿ, ಕೋವಿಡ್-19 ಚಿಕಿತ್ಸೆಯ ICU ಖರ್ಚು ಒಬ್ಬ ಸರಾಸರಿ ಸಂಬಳ ಪಡೆಯುವ ಉದ್ಯೋಗಿಯ ಏಳು ತಿಂಗಳ ಸಂಬಳ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಸಮನಾಗಿರುತ್ತದೆ. ಪ್ರತಿ ದಿನದ ಕೋವಿಡ್ ಚಿಕಿತ್ಸೆ ವೆಚ್ಚವು ಈಗ ₹50,000 ರಷ್ಟು ಹೆಚ್ಚಿನ ಮಟ್ಟದಲ್ಲಿದೆ. ಅಷ್ಟು ಸಾಲದು ಎಂಬಂತೆ- ಆಂಬ್ಯುಲೆನ್ಸ್, ಔಷಧಿಗಳು ಮತ್ತು ಆಕ್ಸಿಜನ್ ಸಿಲಿಂಡರ್ ರೀತಿಯ ಆರೋಗ್ಯ ಸೇವೆಗಳ ಖರ್ಚು 10 ಪಟ್ಟು ಹೆಚ್ಚಾಗಿದೆ. ಆದರೆ CHIL ಅವರ ಸಮಗ್ರ ಕೋವಿಡ್-19 ಇನ್ಶೂರೆನ್ಸ್ ಮೂಲಕ, ನೀವು ವೈದ್ಯಕೀಯ ಮತ್ತು ವೈದ್ಯಕೀಯೇತರ ಖರ್ಚುಗಳಿಗೆ ಕವರೇಜ್ ಪಡೆಯುತ್ತೀರಿ, ಹಾಗಾಗಿ ನಿಮ್ಮ ಉಳಿತಾಯದ ಹಣವನ್ನು ಕೋವಿಡ್ ನಂತರದ ಚೇತರಿಕೆ ಸಮಯದಲ್ಲಿ ಬಳಸಬಹುದು.
ಇನ್ಶೂರೆನ್ಸ್ ಮಾಡದ ಜನರಿಗೆ ಅವರ ಆರೋಗ್ಯವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ
ಹೆಚ್ಚಿನ ಕೇರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಈಗ ಕೋವಿಡ್ ಕವರೇಜ್‌ನೊಂದಿಗೆ ಬರುವಾಗ, ನಮ್ಮ ಕೊರೋನಾ-ನಿರ್ದಿಷ್ಟ ಇನ್ಶೂರೆನ್ಸ್ ಪ್ಲಾನ್‌ಗಳು ಇನ್ಶೂರೆನ್ಸ್ ಮಾಡದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಪ್ರಯೋಜನ ನೀಡಲು ಪ್ರಯತ್ನಿಸುತ್ತವೆ. ಈ ಪ್ಯಾಂಡೆಮಿಕ್ ಸಮಯದಲ್ಲಿ ಸೂಕ್ತ ಮೆಡಿಕ್ಲೈಮ್ ಇಲ್ಲದ ಜನರು ಆರೋಗ್ಯ ಮತ್ತು ಹಣಕಾಸಿನ ನಷ್ಟಕ್ಕೆ ಹೆಚ್ಚು ಗುರಿಯಾಗುತ್ತಾರೆ. ಆದ್ದರಿಂದ, ಕೋವಿಡ್ ಇನ್ಶೂರೆನ್ಸ್ ಖರೀದಿಸುವುದರಿಂದ ಕೊರೋನಾವೈರಸ್‌ನ ಹೆಚ್ಚು ಸಾಂಕ್ರಾಮಿಕ ರೂಪಾಂತರಗಳಿಂದ ನಿಮ್ಮ ಆರೋಗ್ಯ ಮತ್ತು ಹಣಕಾಸನ್ನು ಸುರಕ್ಷಿತಗೊಳಿಸುತ್ತದೆ.
ಭಾರತದಾದ್ಯಂತ ಕವರೇಜ್ ಒದಗಿಸುತ್ತದೆ
ಅನೇಕ ದೇಶಗಳು ತಮ್ಮ ಟ್ರಾವೆಲ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಕಾರಣ, ಪ್ರಯಾಣಿಕರ ಸಂಖ್ಯೆ ಕಾಲಕ್ರಮೇಣ ಹೆಚ್ಚಾಗುತ್ತಿದೆ. ನಾವು 21700 ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರ ಆಲ್-ಇಂಡಿಯಾ ನೆಟ್‌ವರ್ಕ್ ಒದಗಿಸುವ ಮೂಲಕ ನಿಮ್ಮ ಟ್ರಾವೆಲ್ ಪ್ಲಾನ್‌ಗಳ ಹಿತರಕ್ಷಣೆ ಮಾಡುತ್ತೇವೆ. ಒಂದುವೇಳೆ ನೀವು ಟ್ರಾವೆಲ್ ಸಮಯದಲ್ಲಿ ಕೋವಿಡ್-19 ಸೋಂಕಿಗೆ ಒಳಗಾದರೆ, ಪಾಲಿಸಿ ನಿಯಮಗಳ ಪ್ರಕಾರ ನಾವು ಚಿಕಿತ್ಸೆ ಮತ್ತು ಇತರ ವೈದ್ಯಕೀಯೇತರ ವೆಚ್ಚಗಳಿಗೆ ನಷ್ಟ ಪರಿಹಾರ ನೀಡುತ್ತೇವೆ.
ಕೊರೋನಾವೈರಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳನ್ನು ಓದಿ
ನಮ್ಮ ಆರೋಗ್ಯ ಮತ್ತು ಹಣಕಾಸಿಗೆ ನಾವು ಎಷ್ಟು ಆದ್ಯತೆ ನೀಡುತ್ತೇವೆ ಎಂಬುದಕ್ಕೆ ಈ ಮಹಾಮಾರಿ ಒಂದು ಕನ್ನಡಿ ಹಿಡಿದಿದೆ. ಈ ಮಹಾಮಾರಿಯಿಂದ ಬರುತ್ತಿರುವ ನಿರಂತರ ಆರೋಗ್ಯ ಅಪಾಯಗಳ ಹಿನ್ನೆಲೆಯಲ್ಲಿ, ಕೊರೋನಾವೈರಸ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಎಲ್ಲಾ ಕೋವಿಡ್ ಸಂಬಂಧಿತ ತೊಂದರೆಗಳಿಗೆ ಗರಿಷ್ಠ ಕವರೇಜ್ ಒದಗಿಸುವ ಮೂಲಕ ನೀವು ಅತ್ಯುತ್ತಮ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳುತ್ತವೆ. CHIL ನಲ್ಲಿ, ಈ ಕೆಳಗೆ ವಿವರಿಸಿದಂತೆ ಸಮಗ್ರ ಫೀಚರ್‌ಗಳು ಮತ್ತು ಪ್ರಯೋಜನಗಳು ಇರುವ ಎರಡು ಕೊರೋನಾ ಇನ್ಶೂರೆನ್ಸ್ ಪಾಲಿಸಿಗಳನ್ನು ನಾವು ಒದಗಿಸುತ್ತೇವೆ - ಕೊರೋನಾ ಕವಚ್ ಮತ್ತು ಕೋವಿಡ್ ಕೇರ್-
ನೀವು ಮತ್ತು ನಿಮ್ಮ ಕುಟುಂಬವನ್ನು ಈಗಾಗಲೇ ಸಂಪೂರ್ಣ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಕವರ್ ಮಾಡಬಹುದು. ಆದಾಗ್ಯೂ, ನಿರಂತರ ವೈರಸ್ ಬೆದರಿಕೆಯ ವಿರುದ್ಧ ಹೋರಾಡಲು ನಿಮಗೆ ಇನ್ನೂ ಕೋವಿಡ್ ಇನ್ಶೂರೆನ್ಸ್ ಪಾಲಿಸಿ ಅಥವಾ ಕವರೇಜ್ ಅಗತ್ಯವಿರುತ್ತದೆ. ನಿಮ್ಮ ವಯಸ್ಸು, ಲಿಂಗ ಅಥವಾ ಆರೋಗ್ಯ ಪರಿಸ್ಥಿತಿಗಳನ್ನು ಹೊರತುಪಡಿಸಿ, ಕೋವಿಡ್-19 ವಿರುದ್ಧ ಹಣಕಾಸಿನ ರಕ್ಷಣೆ ಎಲ್ಲರಿಗೂ ಅಗತ್ಯವಾಗಿದೆ.
ಕೋವಿಡ್ ಕೇರ್ ನಮ್ಮ ಪಾಕೆಟ್-ಸೈಜ್ ಇನ್ಶೂರೆನ್ಸ್ ಪ್ರಯೋಜನವಾಗಿದ್ದು, ಇದು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ಸ್ಟ್ಯಾಂಡರ್ಡ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ. ಕೋವಿಡ್‌ನ USP ಎಂದರೆ ಸ್ವಲ್ಪ ಹೆಚ್ಚಿನ ಪ್ರೀಮಿಯಂ ಪಾವತಿಸುವ ಮೂಲಕ ನಮ್ಮ ಯಾವುದೇ ವೈದ್ಯಕೀಯ ಕವರ್‌ಗಳೊಂದಿಗೆ ನೀವು ಅದನ್ನು ಹೆಚ್ಚುವರಿ ಪ್ರಯೋಜನವಾಗಿ ಕ್ಲಬ್ ಮಾಡಬಹುದು.
ಕೋವಿಡ್-ಕೇರ್ ಪ್ಲಾನ್ ಅಡಿಯಲ್ಲಿ ಕವರ್ ಆಗುವ ವಿವಿಧ ವೈದ್ಯಕೀಯ ಪ್ರಯೋಜನಗಳು ಈ ಕೆಳಗಿನಂತಿವೆ-
| ಇನ್ಶೂರೆನ್ಸ್ ಮೊತ್ತ |
₹7 ಲಕ್ಷ, 10 ಲಕ್ಷ, 15 ಲಕ್ಷ, 25 ಲಕ್ಷ, 50 ಲಕ್ಷ ಮತ್ತು 1 ಕೋಟಿ |
|---|---|
| ಕೋವಿಡ್ ಕೇರ್ ಅನ್ನು ಯಾರು ಖರೀದಿಸಬೇಕು? |
ಸಾಮಾನ್ಯವಾಗಿ, ಕೋವಿಡ್ ಸಂಬಂಧಿತ ತುರ್ತುಸ್ಥಿತಿಯಲ್ಲಿ ಹಣಕಾಸು ಭದ್ರತೆಯ ಅಗತ್ಯವಿರುವ ಪ್ರತಿಯೊಬ್ಬರೂ, ವಿಶೇಷವಾಗಿ-
|
| ಅರ್ಹತೆ |
ಒಬ್ಬರೇ ವ್ಯಕ್ತಿ ಅಥವಾ 2 ವಯಸ್ಕರು ಮತ್ತು 4 ಮಕ್ಕಳು ಇರುವ ಕುಟುಂಬದ ಸದಸ್ಯರು- ಖುದ್ದಾಗಿ ಆ ವ್ಯಕ್ತಿ, ಅವರ ಕಾನೂನಾತ್ಮಕ ಸಂಗಾತಿ, ಅವಲಂಬಿತ ಮಕ್ಕಳು, ಪೋಷಕರು, ಅಜ್ಜ-ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಉದ್ಯೋಗಿ ಮತ್ತು ಇನ್ಶೂರೆಬಲ್ ಹಿತಾಸಕ್ತಿ ಹೊಂದಿರುವ ಯಾವುದೇ ಇತರ ಸಂಬಂಧವನ್ನು ಒಳಗೊಂಡಂತೆ. |
| ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿದೆಯೇ? |
ಇಲ್ಲ* |
| ಕೋವಿಡ್ ಕೇರ್ ಅಡಿಯಲ್ಲಿ ಕವರ್ ಆಗುವ ಪ್ರಯೋಜನಗಳು ಯಾವುವು? |
|
| ಕಾಯುವ ಅವಧಿ ಎಂದರೇನು? |
ಪಾಲಿಸಿ ಪ್ರಾರಂಭದ ದಿನಾಂಕದಿಂದ ಮೊದಲ 15 ದಿನಗಳು |
| ಪಾಲಿಸಿ ಅವಧಿ |
1, 2, ಮತ್ತು 3 ವರ್ಷಗಳು |
*ಮೊದಲೇ ಇರುವ ಕಾಯಿಲೆಗಳು ಅಥವಾ ಅಂಡರ್‌ರೈಟರ್ ವಿವೇಚನೆಗೆ ಒಳಪಟ್ಟು ನಿಮಗೆ ಪಾಲಿಸಿ ಮುಂಚಿನ ವೈದ್ಯಕೀಯ ತಪಾಸಣೆಗಳ ಅಗತ್ಯವಿರಬಹುದು.
ಕೇರ್ ಇನ್ಶೂರೆನ್ಸ್ ನಲ್ಲಿ, ಉತ್ತಮವಾಗಿ ಫಂಡ್ ಮಾಡಲಾದ ಮತ್ತು ಸಮಗ್ರ ಹೆಲ್ತ್ ಕವರ್‌ಗಳೊಂದಿಗೆ ಕಠಿಣ ಸಮಯಗಳಿಗೆ ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಸಿದ್ಧಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ಯಾಂಡೆಮಿಕ್ ಸಮಯದಲ್ಲಿ, ನಮ್ಮ ತಂಡವು ಕೋವಿಡ್-19 ಇನ್ಶೂರೆನ್ಸ್ ಕವರೇಜ್‌ನೊಂದಿಗೆ ನಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಪ್ಲಾನ್‌ಗಳನ್ನು ಹೆಚ್ಚಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದೆ. ಕೊರೋನಾ ಹೆಲ್ತ್ ಇನ್ಶೂರೆನ್ಸ್‌ನ ಹೆಚ್ಚುವರಿ ಪ್ರಯೋಜನದೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಮೆಡಿಕ್ಲೈಮ್‌ಗಳು ನಿಮ್ಮನ್ನು ರಕ್ಷಿಸುವುದನ್ನು ನಾವು ಖಚಿತಪಡಿಸುತ್ತೇವೆ.
ಕೋವಿಡ್ ಹೆಲ್ತ್ ಇನ್ಶೂರೆನ್ಸ್‌ನ ಲಭ್ಯವಿರುವ ಹೆಚ್ಚುವರಿ ಪ್ರಯೋಜನದೊಂದಿಗೆ ನಮ್ಮ ನಷ್ಟ ಪರಿಹಾರ-ಆಧಾರಿತ ಹೆಲ್ತ್ ಕವರ್‌ಗಳು ಈ ಕೆಳಗಿನಂತಿವೆ-
ಕೋವಿಡ್ ಮೂರನೇ ಅಲೆಯ ಭೀತಿ ಹರಡುತ್ತಿರುವ ಕಾರಣ, ಈ ಸೋಂಕು ನಮ್ಮ ಪ್ರೀತಿಪಾತ್ರರಿಗೆ ಮತ್ತೊಮ್ಮೆ ಕಾಟ ಕೊಡದಂತೆ ತಡೆಯಲು ಸಮಯಕ್ಕೆ ಸರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. CHIL ಅವರ ಕೊರೋನಾ ಕವಚ್ ಪಾಲಿಸಿಯು ನಿಮ್ಮ ಎಲ್ಲಾ ಕೊರೋನಾ ಚಿಂತೆಗಳಿಗೆ ಸಮಗ್ರ ಪರಿಹಾರವಾಗಿದೆ. ವ್ಯಾಪಕ ಶ್ರೇಣಿಯ ಕವರೇಜ್ ಮತ್ತು 5 ಲಕ್ಷಗಳವರೆಗಿನ ಇನ್ಶೂರೆನ್ಸ್ ಮೊತ್ತದೊಂದಿಗೆ, ಕೊರೋನಾ ಕವಚ್ ಪಾಲಿಸಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣ ವೈದ್ಯಕೀಯ ಕವರ್ ನೀಡುತ್ತದೆ. ಈ ಪಾಲಿಸಿಯು ವಿಶೇಷವಾಗಿ ಕೊರೋನಾವೈರಸ್ ಸಂಬಂಧಿತ ಪ್ಲಾನ್ ಆಗಿದ್ದು, ಕೋವಿಡ್ ಸಂಬಂಧಿತ ತೊಂದರೆಗಳಿಗೆ ಮಾತ್ರ ಎಲ್ಲಾ ಪ್ರಯೋಜನಗಳು ಮತ್ತು ರಿಯಂಬರ್ಸ್‌ಮೆಂಟ್ ಒದಗಿಸುತ್ತದೆ.
ನಮ್ಮ ಕೊರೋನಾ ಕವಚ್ ಪಾಲಿಸಿಯ ಅಡಿಯಲ್ಲಿ ಅನೇಕ ಕೊಡುಗೆಗಳು ಈ ಕೆಳಗಿನಂತಿವೆ-
| ಇನ್ಶೂರೆನ್ಸ್ ಮೊತ್ತ |
5 ಲಕ್ಷ |
|---|---|
| ಕೊರೋನಾ ಕವಚ್ ಯಾರು ಖರೀದಿಸಬೇಕು? |
ಸಾಮಾನ್ಯವಾಗಿ, ವಿಶಾಲ ಕೋವಿಡ್ ಕವರೇಜ್ ಅಗತ್ಯವಿರುವ ಪ್ರತಿಯೊಬ್ಬರೂ ಈ ಪಾಲಿಸಿಯನ್ನು ಪರಿಗಣಿಸಬೇಕು. ಅದಲ್ಲದೆ, ನಿರಂತರವಾಗಿ ಸೋಂಕಿಗೆ ಒಳಗಾಗುವ ಜನರಿಗೆ ಕೂಡಾ ಸೂಕ್ತವಾಗಿದೆ, ಉದಾಹರಣೆಗೆ-
|
| ಅರ್ಹತೆ |
ಏಕೈಕ ವ್ಯಕ್ತಿ ಅಥವಾ 2 ವಯಸ್ಕರು ಮತ್ತು 4 ಮಕ್ಕಳು ಇರುವ ಕುಟುಂಬದ ಸದಸ್ಯರು- ಇದರಲ್ಲಿ- ಖುದ್ದಾಗಿ ಆ ವ್ಯಕ್ತಿ, ಅವರ ಕಾನೂನಾತ್ಮಕ ಸಂಗಾತಿ, ಅವಲಂಬಿತ ಮಕ್ಕಳು, ಪೋಷಕರು ಮತ್ತು ಅತ್ತೆ-ಮಾವ ಸೇರಿರುತ್ತಾರೆ. |
| ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿದೆಯೇ? |
ಇಲ್ಲ* |
| ಕೊರೋನಾ ಕವಚ್ ಅಡಿಯಲ್ಲಿ ಕವರ್ ಆಗುವ ಪ್ರಯೋಜನಗಳು ಯಾವುವು? |
|
| ಐಚ್ಛಿಕ ಕವರ್‌ಗಳು |
ಆಸ್ಪತ್ರೆ ಡೈಲಿ ಕ್ಯಾಶ್ |
| ಕಾಯುವ ಅವಧಿ ಎಂದರೇನು? |
ಪಾಲಿಸಿ ಪ್ರಾರಂಭದ ದಿನಾಂಕದಿಂದ ಮೊದಲ 15 ದಿನಗಳು |
| ಪಾಲಿಸಿ ಅವಧಿ |
9.5 ತಿಂಗಳು |
*ಮೊದಲೇ ಇರುವ ಕಾಯಿಲೆಗಳು ಅಥವಾ ಅಂಡರ್‌ರೈಟರ್ ವಿವೇಚನೆಗೆ ಒಳಪಟ್ಟು ನಿಮಗೆ ಪಾಲಿಸಿ ಮುಂಚಿನ ವೈದ್ಯಕೀಯ ತಪಾಸಣೆಗಳ ಅಗತ್ಯವಿರಬಹುದು.
^ಪಾಲಿಸಿ ಪ್ರಯೋಜನಗಳ ಬಗ್ಗೆ ವಿವರವಾಗಿ ಇನ್ನಷ್ಟು ತಿಳಿಯಲು ದಯವಿಟ್ಟು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ನೋಡಿ.
ನಮ್ಮ ಕೊರೋನಾ ಕವಚ್ ಪಾಲಿಸಿಯ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ
ಹೊರಗಿಡುವಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ.
ನಿಮ್ಮ ಸುತ್ತಮುತ್ತಲಿನ ಆಸ್ಪತ್ರೆಗಳನ್ನು ಹುಡುಕಿ
ಹೌದು, ಕೇರ್ ಹೆಲ್ತ್ ಇನ್ಶೂರೆನ್ಸ್‌ನಂತಹ ಭಾರತದ ಪ್ರಮುಖ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಆನ್‌ಲೈನ್‌ನಲ್ಲಿ ಕೊರೋನಾ ಇನ್ಶೂರೆನ್ಸ್ ಒದಗಿಸುತ್ತಾರೆ.
ಹೌದು, IRDAI ಮಾರ್ಗಸೂಚಿಗಳ ಪ್ರಕಾರ, ಆಸ್ಪತ್ರೆಗೆ ದಾಖಲಾಗುವ ಮೂಲಭೂತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕೊರೋನಾವೈರಸ್‌ಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಕೂಡ ಕವರ್ ಮಾಡುತ್ತವೆ. ನಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಸರ್ಕಾರಿ ಅಧಿಕೃತ ಕೇಂದ್ರದಿಂದ ಕೋವಿಡ್-ಪಾಸಿಟಿವ್ ವರದಿಯನ್ನು ಪಡೆದಾಗ ಮಾತ್ರ ಪಾಲಿಸಿ ನಿಯಮಗಳ ಪ್ರಕಾರ ಕೋವಿಡ್-ಸಂಬಂಧಿತ ತೊಂದರೆಗಳನ್ನು ಕವರ್ ಮಾಡುತ್ತವೆ.
ನಮ್ಮ *ನಷ್ಟ ಪರಿಹಾರ-ಆಧಾರಿತ ಪ್ರಾಡಕ್ಟ್‌ಗಳಾದ ಕೇರ್, ಕೇರ್ ಫ್ರೀಡಂ, ಕೇರ್ ಗ್ಲೋಬಲ್, ಕೇರ್ ಸೀನಿಯರ್, ಕೇರ್ POS, ಎನ್‌ಹಾನ್ಸ್, ಕೇರ್ ಹಾರ್ಟ್, ಜಾಯ್ ಮತ್ತು IPD ಪ್ರಯೋಜನದೊಂದಿಗೆ ಕಸ್ಟಮೈಸ್ ಮಾಡಿದ ಗ್ರೂಪ್ ಪ್ರಾಡಕ್ಟ್‌ಗಳು ಕೊರೋನಾವೈರಸ್‌ಗೆ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕವರ್ ಮಾಡುತ್ತವೆ. ಅದಲ್ಲದೆ, ಕೇರ್ ಎಕ್ಸ್‌ಪ್ಲೋರ್ ಮತ್ತು ಸ್ಟೂಡೆಂಟ್ ಎಕ್ಸ್‌ಪ್ಲೋರ್ ಸೇರಿದಂತೆ ನಮ್ಮ *ಟ್ರಾವೆಲ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳು, ಕೊರೋನಾ ಕವರೇಜ್ ಒದಗಿಸುತ್ತವೆ.
ಕೇರ್ ಹೆಲ್ತ್ ಇನ್ಶೂರೆನ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಕೊರೋನಾವೈರಸ್‌ಗೆ ಕವರೇಜ್ ಒದಗಿಸುವ ಹೆಲ್ತ್ ಕವರ್ ಆಯ್ಕೆಮಾಡಿ. ಆಮೇಲೆ, ಕೊಟೇಶನ್ ಜನರೇಟ್ ಮಾಡಲು ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಇನ್ಶೂರೆನ್ಸ್ ಮೊತ್ತ ಸರಿಹೊಂದಿಸುವ ಮೂಲಕ ಹೆಲ್ತ್ ಪ್ಲಾನ್ ಕಸ್ಟಮೈಸ್ ಮಾಡಿ ಮತ್ತು ನಮ್ಮ ಸುರಕ್ಷಿತ ಆನ್‌ಲೈನ್ ವಿಧಾನಗಳ ಮೂಲಕ ಪಾವತಿ ಮಾಡಿ.
ಹೌದು, CHIL ಅವರ ಕೋವಿಡ್ ಇನ್ಶೂರೆನ್ಸ್ ಪ್ಲಾನ್‌ಗಳು ಕ್ಯಾಶ್‌ಲೆಸ್ ಮತ್ತು ರಿಯಂಬರ್ಸ್‌ಮೆಂಟ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯಗಳನ್ನು ಒದಗಿಸುತ್ತವೆ. ಕೊರೋನಾ ಕವಚ್‌ನ ಬೇಸಿಕ್ ಕವರ್ ಅಡಿಯಲ್ಲಿ ಸರ್ಕಾರಿ-ಅಧಿಕೃತ ಕೇಂದ್ರದಿಂದ ಪಾಸಿಟಿವ್ ಡಯಾಗ್ನಸಿಸ್ ಬಂದಾಗ ರೋಗಿಯು ಮನೆಯಲ್ಲಿ ಪಡೆಯುವ ಕೋವಿಡ್ ಚಿಕಿತ್ಸೆಯನ್ನು ನಾವು ಕವರ್ ಮಾಡುತ್ತೇವೆ. ಅದಲ್ಲದೆ, ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ನಿಮ್ಮ ಸಧ್ಯದ ಹೆಲ್ತ್ ಇನ್ಶೂರೆನ್ಸ್‌ಗೆ ಹೋಮ್ ಕೇರ್ ಪ್ರಯೋಜನಗಳನ್ನು ಕೂಡ ಸೇರಿಸಬಹುದು. 21700 ಕ್ಕೂ ಹೆಚ್ಚು ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರ ವಿಶಾಲ ನೆಟ್‌ವರ್ಕ್ ಮೂಲಕ, ನಾವು ಸುಲಭವಾದ ಆಸ್ಪತ್ರೆ ದಾಖಲಾತಿ ಮತ್ತು ಕ್ಲೈಮ್ ಪ್ರಕ್ರಿಯೆಗಳನ್ನು ಖಚಿತಪಡಿಸುತ್ತೇವೆ.
ಹೌದು, ನೋಂದಾಯಿತ ವೈದ್ಯರ ಸಲಹೆಯ ನಂತರ ಮತ್ತು ಕೊರೋನಾವೈರಸ್ ಪ್ರಕರಣಗಳಿಗೆ ಚಿಕಿತ್ಸೆಯನ್ನು ನಡೆಸಲು ಅನುಮೋದಿತ ಸೌಲಭ್ಯದಲ್ಲಿ ಐಸೋಲೇಶನ್ ಮಾಡಿದರೆ, ನಾವು ಐಸೋಲೇಶನ್ ಶುಲ್ಕಗಳ ಮರುಪಾವತಿಯನ್ನು ಒದಗಿಸುತ್ತೇವೆ. ಅಲ್ಲದೆ, ಕೋವಿಡ್-19 ಪಾಸಿಟಿವ್ ದೃಢೀಕರಣದ ಅಡಿಯಲ್ಲಿ ಚಿಕಿತ್ಸೆ ಮತ್ತು/ಅಥವಾ ಕ್ವಾರಂಟೈನ್‌ಗೆ ಉಂಟಾದ ವೈದ್ಯಕೀಯ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ಸರ್ಕಾರದ ಅಧಿಕೃತ ಕೇಂದ್ರದ ಸಕಾರಾತ್ಮಕ ವರದಿ ಮತ್ತು ಕ್ವಾರಂಟೈನ್ ಕೇಂದ್ರವನ್ನು ಮಾತ್ರ ಮರುಪಾವತಿಗೆ ಅನುಮತಿಸಲಾಗುತ್ತದೆ.
ಹೌದು, ನೀವು ಪಾಸಿಟಿವ್ ಆಗುವ ಮೊದಲು ಹೆಲ್ತ್ ಇನ್ಶೂರೆನ್ಸ್ ಖರೀದಿಸಿದ್ದರೆ, ಕೋವಿಡ್-19 ಚಿಕಿತ್ಸೆ ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಸಂಬಂಧಿಸಿದ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ನೀವು ಕವರೇಜ್ ಪಡೆಯುತ್ತೀರಿ.
ಮನೆಯಲ್ಲಿ ಅಥವಾ ಯಾವುದೇ ಮಾನ್ಯತೆ ಪಡೆಯದ ಜಾಗದಲ್ಲಿ ಕ್ವಾರಂಟೀನ್‌ಗೆ (ಕೊರೋನಾವೈರಸ್ ಪ್ರಕರಣದ ಚಿಕಿತ್ಸೆಗೆ) ಒಳಗಾದರೆ ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಈ ಪ್ಲಾನ್ ಕವರ್ ಮಾಡುವುದಿಲ್ಲ.
ಹೌದು, ನಾವು 15 ದಿನಗಳ ಕಾಯುವ ಅವಧಿಯೊಂದಿಗೆ ಮಾತ್ರ ಕೊರೋನಾವೈರಸ್ ಹೆಲ್ತ್ ಇನ್ಶೂರೆನ್ಸ್ ಒದಗಿಸುತ್ತೇವೆ.
ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿ ಮಹಿಳೆಯರು ಮತ್ತು ದುರ್ಬಲ ರೋಗನಿರೋಧಕ ವ್ಯವಸ್ಥೆಗಳು ಅಥವಾ ಮೊದಲೇ ಅಸ್ತಿತ್ವದಲ್ಲಿರುವ ರೋಗಗಳನ್ನು ಹೊಂದಿರುವ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಹೌದು, ಕೊರೋನಾವೈರಸ್ ಕವರ್‌ನೊಂದಿಗೆ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಸೂಕ್ತವಾದ ವೈದ್ಯಕೀಯ ಸೌಲಭ್ಯಗಳಿಗೆ ನೀವು ಅಕ್ಸೆಸ್ ಪಡೆಯುತ್ತೀರಿ, ಇದು ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!
ಮಾರಾಟ:1800-102-4499
ಸೇವೆಗಳು: 8860402452
ಲೈವ್ ಚಾಟ್
**ಡಿಸೆಂಬರ್ 24 ರಂತೆ ಸೆಟಲ್ ಮಾಡಲಾದ ಕ್ಲೈಮ್‌ಗಳ ಸಂಖ್ಯೆ
^^ಫೆಬ್ರವರಿ 2025 ವರೆಗೆ ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರ ಸಂಖ್ಯೆ
^3-ವರ್ಷದ ಪಾಲಿಸಿಗೆ 10% ರಿಯಾಯಿತಿ ಅನ್ವಯವಾಗುತ್ತದೆ